Breaking
Mon. Dec 23rd, 2024

ವಾಲ್ಮೀಕಿ ಸಮಾಜದಿಂದ ಅನಿರ್ದಿಷ್ಟ ಧರಣಿ ಸತ್ಯಾಗ್ರಹ..!

ವಾಲ್ಮೀಕಿ ಸಮಾಜದಿಂದ ಶ್ರೀ ವೆಂಕಟೇಶ ನಾಯಕ ಆಸ್ಕಿಹಾಳ ರಾಯಚೂರ್ ಅವರ ನೇತೃತ್ವದಲ್ಲಿ18 ಬೇಡಿಕೆಗಳನ್ನು ಈಡೇರಿಸುವಂತೆ  ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.

ಪ್ರಸ್ತುತ ನಮ್ಮ ಕರ್ನಾಟಕ ರಾಜ್ಯದಲ್ಲಿ ಸುಮಾರು 70 ಲಕ್ಷ ಜನ ಸಂಖ್ಯೆ ಹೊಂದಿರುವ ನಮ್ಮ ವಾಲ್ಮೀಕಿ ಸಮಾಜ ಶತ – ಶತಮಾನಗಳಿಂದ ಅಕ್ಷರ ಮತ್ತು ಉದ್ಯೋಗದಿಂದ ವಂಚಿತವಾಗಿ ಹಲವಾರು ಜ್ವಾಲಾಂತ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದೆ ನಮ್ಮ ಸಂವಿಧಾನಬದ್ಧ ಶೈಕ್ಷಣಿಕ ಹಾಗೂ ಔದ್ಯೋಗಿಕ ಹೊಂದಿದೆ. ಶ್ರೀಯುತ ವೆಂಕಟೇಶ್ ನಾಯಕ ಹಕ್ಕಿಹಾಳ ಅವರು ದಿನಾಂಕ 31 – 01 – 2024 ರಂದು ಸಿಂಧನೂರಿನಿಂದ ಸೈಕಲ್ ಜಾತ ಆರಂಭಿಸಿ ಆ ಮೂಲಕ ಜನ ಜಾಗೃತಿ ಮೂಡಿಸಿ ದಿನಾಂಕ 04 – 02 – 2024 ರಂದು ರಾಯಚೂರಿಗೆ ತಲುಪಿದೆ. ಕರ್ನಾಟಕ ರಾಜ್ಯ ಸರಕಾರ ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸಲು ಇಡೀ ಕರ್ನಾಟಕ ರಾಜ್ಯದ ವಾಲ್ಮೀಕಿ ಸಮಾಜ ಪರವಾಗಿ ಧರಣಿ ಸತ್ಯಾಗ್ರಹವನ್ನು ಜಿಲ್ಲಾಧಿಕಾರಿಗಳ ಕಚೇರಿಯ ಹತ್ತಿರ ಟಿಪ್ಪು ಸುಲ್ತಾನ್ ಗಾರ್ಡನ್ ನಲ್ಲಿ ಆರಂಭಿಸುತ್ತಿದ್ದಾರೆ. ಕರ್ನಾಟಕದಲ್ಲಿರುವ ಎಲ್ಲಾ ನೈಜ ನಾಯಕರಿಗೆ ಸಿಗಬೇಕಾಗಿರುವ ಸವಲತ್ತುಗಳು‌.

ಸರ್ಕಾರವು ಈಡೇರಿಸಬೇಕಾದ ಬೇಡಿಕೆಗಳು

  1.  ಹಿಂದುಳಿದ ವರ್ಗದ ಟೂಎ ದಲ್ಲಿ ಬರುವ ಕುರುಬ ಜಾತಿಯವರು ಬೋಂಡ ಕಾಡು ಕುರುಬ ರಾಜಗೋಂಡ ಜಾತಿಯ ಹೆಸರಿನಲ್ಲಿ ಹಾಗೂ ಪ್ರವರ್ಗ ಒಂದರಲ್ಲಿ ಬರುವ ಕಬ್ಬಲಿಗ ಮತ್ತು ಗಂಗಮತಸ್ಥ ಜಾತಿ ಪ್ರಮಾಣ ಪತ್ರ ಪಡೆದುಕೊಂಡವರ ಮತ್ತು ಪರಿವಾರ ಮತ್ತು ತಳವಾರ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳ ವಿರುದ್ಧ ಉಗ್ರ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ತಡೆಗಟ್ಟಬೇಕು
  2. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಪಡೆದವರ ವಿರುದ್ಧ ಪ್ರತ್ಯೇಕ ಸ್ವಾತಂತ್ರ್ಯ ತನಿಕ ಸಮಿತಿಯನ್ನು ರಚಿಸಿ ಅದಕ್ಕೆ ನ್ಯಾಯಾಲಯಕ್ಕೆ ಸಮಾನವಾದ ಅಧಿಕಾರವನ್ನು ಪ್ರದತ್ತ ಮಾಡಿ ಕಾನೂನು ಕ್ರಮ ಕೈಗೊಳ್ಳಲು ಸೂಕ್ತ ವ್ಯವಸ್ಥೆ ಮಾಡಬೇಕು
  3. ಈಗಾಗಲೇ ರಾಜ್ಯ ಸರಕಾರ ಪರಿಶಿಷ್ಟ ಪಂಗಡಕ್ಕೆ ಘೋಷಣೆ ಮಾಡಿದ ಏಳು ಪರ್ಸೆಂಟ್ ಮೀಸಲಾತಿಯನ್ನು ಕಾರ್ಯಾಲ ಸ್ಥಾನಗೊಳಿಸಬೇಕು ಮತ್ತು 9 ಶೆಡ್ಯೂಲ್ ನಲ್ಲಿ ಸೇರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು.
  4.  ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ಸುಳ್ಳು ಜಾತಿ ಪ್ರಮಾಣ ಪತ್ರಗಳ ವಿರುದ್ಧ ಸ್ವಯಂ ದೂರುಗಳನ್ನು ದಾಖಲಿಸಿಕೊಳ್ಳುವ ಮತ್ತು ಸ್ವಾತಂತ್ರ್ಯವಾಗಿ ತನಿಖೆ ಮಾಡುವ ಅಧಿಕಾರವನ್ನು ಪುನಃ ನೀಡಬೇಕು ಮತ್ತು ದೂರುಗಳು ಶೀಘ್ರವಾಗಿ ವಿಲೇವಾರಿಯಾಗಲು ಸಾಕಷ್ಟು ಪ್ರಮಾಣದಲ್ಲಿ ಸಿಬ್ಬಂದಿಗಳನ್ನು ನೇಮಿಸಬೇಕು.

5 . ಕರ್ನಾಟಕ ರಾಜ್ಯದ ಪ್ರತಿ ತಾಲೂಕಿಗೆ ಒಂದರಂತೆ ವಸತಿ ಸಹಿತ ಏಕಲವ್ಯ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ ಸಮಾಜದ ಶೈಕ್ಷಣಿಕ ಅಭಿವೃದ್ಧಿಗೆ ಅನುವು ಮಾಡಿಕೊಡಬೇಕು.

6 ರಾಯಚೂರು ಜಿಲ್ಲಾ ವಿಶ್ವ ವಿದ್ಯಾಲಯಕ್ಕೆ ಶ್ರೀ ಮಹರ್ಷಿ ವಾಲ್ಮೀಕಿ ಅವರ ಹೆಸರನ್ನು ಹಾಗೂ ರಾಜ್ಯದ ಯಾವುದಾದರೂ ಒಂದು ವಿಮಾನ ನಿಲ್ದಾಣಕ್ಕೆ ವೀರಮದಕರಿ ನಾಯಕರ ಹೆಸರನ್ನು ನಾಮಕರಣ ಮಾಡಬೇಕು.

7 ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಐತಿಹಾಸಿಕ ಗುಮ್ಮಟದುರ್ಗ ಪ್ರದೇಶವನ್ನು ಕಿಸ್ಕಿಂದ ಅಭಿವೃದ್ಧಿ ಪ್ರಾಧಿಕಾರ ಪ್ರದೇಶವೆಂದು ಘೋಷಣೆ ಮಾಡಿ ಅದನ್ನು ಅಭಿವೃದ್ಧಿಪಡಿಸಬೇಕು.

8 ರಾಜ್ಯದ ಎಲ್ಲಾ ಇಲಾಖೆಗಳಲ್ಲಿನ ಬ್ಯಾಕ್ಲಾಗ ಹುದ್ದೆಗಳನ್ನು ಶೀಘ್ರದಲ್ಲಿ ತುಂಬಬೇಕು.

9 ರಾಯಚೂರು ಜಿಲ್ಲಾ ಕೇಂದ್ರದಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ವತಿಯಿಂದ ಮೆಟ್ರಿಕ್ ನಂತರದ ಬಾಲಕಿಯರ ವೃತ್ತಿಪರ ವಸತಿ ನಿಲಯವನ್ನು ಮಂಜೂರು ಮಾಡಬೇಕು.

10 ಮೂರು ವರ್ಷದಿಂದ ಪರಿಶಿಷ್ಟ ಪಂಗಡದಲ್ಲಿರುವ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಬರುವ ರೀತಿಯಲ್ಲಿ ಮಾಡಬೇಕು ಅದು ಸಹ ಪ್ರತಿ ವರ್ಷ ಬರಬೇಕು ಸರಿಯಾದ ಸಮಯಕ್ಕೆ ಬಂದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ.

11 ರಾಜ್ಯದಲ್ಲಿರುವ ಪರಿಶಿಷ್ಟ ಪಂಗಡಗಳ ಸಮುದಾಯ ಭವನಗಳು ಹಾಗೂ ಹಾಸ್ಟೆಲ್ ಗಳು ಅನಾನುಕೂಲವಾಗಿವೆ ಸರ್ಕಾರದ ಹಣವನ್ನು ಕೋಟಿಗಟ್ಟಲೆ ಖರ್ಚು ಮಾಡಿ ವ್ಯರ್ಥ ಮಾಡುವುದಕ್ಕಿಂತ ಅದನ್ನು ಸರಿಪಡಿಸಬೇಕಾಗಿ ಕೇಳಿಕೊಳ್ಳುತ್ತೇವೆ. ಕೆಲವು ತಾಲೂಕಿನಲ್ಲಿ ಸರ್ಕಾರದ ಹಣ ಬಂದರೂ ಜಾಗವನ್ನು ಖರೀದಿ ಮಾಡಿರುವುದಿಲ್ಲ ಅಂತವರ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದರೆ ಅಂತವರನ್ನು ಅಮಾನತ್ತು ಮಾಡಬೇಕಾಗಿ ಕೇಳಿಕೊಳ್ಳುತ್ತೇವೆ ಇದು ಸರಕಾರಕ್ಕೆ ನಾವಿಟ್ಟಿರುವ ಬೇಡಿಕೆಗಳು ಮಾನ್ಯ ರಾಯಚೂರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳುವುದೇನೆಂದರೆ, ಈ ಎಲ್ಲಾ ನಮ್ಮ ಬೇಡಿಕೆಗಳು ಈಡೇರುವವರೆಗೂ ನಾವು ಈ ಧರಣಿ ಸತ್ಯಾಗ್ರಹವನ್ನು ಕೈಬಿಡುವುದಿಲ್ಲ ತಾವುಗಳು ರಾಜ್ಯಪಾಲರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಹಾಗೂ ಸಂಬಂಧಪಟ್ಟ ಮಂತ್ರಿಗಳಿಗೆ ಕಳುಹಿಸಿದ ಲಿಖಿತ ಪತ್ರಗಳನು ನಮಗೆ ನೀಡಬೇಕು.

ಸರ್ಕಾರವು ಆದಷ್ಟು ಬೇಗ ಈ ಧರಣಿಯನ್ನು ನಿಲ್ಲಿಸಬೇಕಾದರೆ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲವಾದರೆ ಉಗ್ರ ಹೋರಾಟಕ್ಕೆ ನಾವು ಸಜ್ಜಗಬೇಕಾಗುತ್ತದೆ ಇಲ್ಲಿಯವರೆಗೂ ಶಾಂತಿ ಹೋರಾಟವನ್ನು ಮಾಡಿದ್ದೇವೆ, ನಾವು ಇನ್ನೂ ಸಹ ಕರ್ನಾಟಕದಲ್ಲಿರುವ ನಾಯಕರಿಗೆ ಕರೆ ಕೊಟ್ಟಿರುವುದಿಲ್ಲ ನಾವು ಸರ್ಕಾರಕ್ಕೆ ಕೇಳಿರುವ ಬೇಡಿಕೆಗಳು ಕಾನೂನಾತ್ಮಕವಾಗಿವೆ. ನಾವು ಕಾನೂನು ಪಾಲನೆಯಿಂದ ಕೊಡಬೇಕಾಗಿರುವ ಮನವಿಯನ್ನು ಕೊಟ್ಟಿದ್ದೇವೆ ಸರ್ಕಾರ ಏನಾದರೂ ಈಡೇರಿಸದಿದ್ದಲ್ಲಿ ನಾವೇನಾದರೂ ನೀವು ಬೇಡಿಕೆಗಳನ್ನು ಈಡೇರಿಸದೆ ಹೋದರೆ ಹಿಂದೆ ನಾಯಕರ ಕುಲಕಸುಬು ಏನೆಂದು ಪ್ರತಿಯೊಬ್ಬರಿಗೂ ತಿಳಿದಿದೆ ಅದನ್ನು ಮಾಡಬೇಕಾಗುತ್ತದೆ. ವೆಂಕಟೇಶ್ ನಾಯಕ ಅಸ್ಕಿಹಾಳ್ ವಾಲ್ಮೀಕಿ ಸಮಾಜ ಸೇವಕರು 9731605259,

 ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ರಾಜನಹಳ್ಳಿ ತಾಲೂಕ್ ಹರಿಹರ ದಾವಣಗೆರೆ ಜಿಲ್ಲೆ ನಾಯಕ ಸಮಾಜಕ್ಕಾಗಿ ಕೈಗೊಳ್ಳಬೇಕಾದ ಬೇಡಿಕೆಗಳು

1 ರಾಜನಹಳ್ಳಿ ಶ್ರೀ ಮಠದಲ್ಲಿ ಎಲ್ ಕೆ ಜಿ ಇಂದ 10 ನೇ ತರಗತಿಯವರೆಗೆ ಸುಸಜ್ಜಿತ ವಸತಿ ಸಹಿತ ಇಂಗ್ಲಿಷ್ ಮಾಧ್ಯಮ ಶಾಲೆಯನ್ನು ತೆರೆದು ರಾಜ್ಯದ ಎಲ್ಲಾ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹಿಸಬೇಕು

2 ಪದವಿ ಮಹಾವಿದ್ಯಾಲಯ ಮೆಡಿಕಲ್ ಕಾಲೇಜ್ ಇಂಜಿನಿಯರಿಂಗ್ ಕಾಲೇಜ್ ಗಳನ್ನು ಸ್ಥಾಪಿಸಬೇಕು

3 ರಾಜ್ಯದ ನಾಲ್ಕು ವಿಭಾಗಗಳಲ್ಲಿ ಶಾಖಾಮಠಗಳನ್ನು ಸ್ಥಾಪಿಸಿ ಆದರಡಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಬೇಕು

4 ರಾಜ್ಯದ ನಾಲ್ಕು ವಿಭಾಗಗಳಲ್ಲಿ ಐಎಎಸ್ ಕೆಎಎಸ್ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ ಆ ಮೂಲಕ ನಮ್ಮ ಸಮಾಜದ ಬಡ ವಿದ್ಯಾರ್ಥಿಗಳು ಉನ್ನತ ಸರಕಾರಿ ಸೇವೆಗೆ ಸೇರಲು ಸಹಾಯವಾಗಬೇಕು

5 ರಾಜನಹಳ್ಳಿ ಗುರುಪೀಠದಲ್ಲಿ ವಾಲ್ಮೀಕಿ ನಾಯಕ ಸಮಾಜದ ಇತಿಹಾಸಪುರುಷ ನಾಯಕರ ಮೂರ್ತಿಗಳನ್ನು ಹಾಗೂ ವಾಲ್ಮೀಕಿ ದೇವಸ್ಥಾನವನ್ನು ಸ್ಥಾಪಿಸಬೇಕು

6 ಶ್ರೀ ಮಠದ ತುಷ್ಟಿಗೆ ಸಮಾಜದ ಬಗ್ಗೆ ಕಾಳಜಿಯುಳ್ಳ ಧರ್ಮದರ್ಶಿಗಳನ್ನು ಪ್ರತಿ ಜಿಲ್ಲೆಯಿಂದ ಚುನಾವಣೆಯ ಮೂಲಕ ಆಯ್ಕೆ ಮಾಡಬೇಕು ಟ್ರಸ್ಟಿನ ಅಧ್ಯಕ್ಷರನ್ನು ಆಡಳಿತಾತ್ಮಕ ಜ್ಞಾನ ಇರುವ ಧರ್ಮದರ್ಶಿಗಳಿಂದಲೇ ಒಬ್ಬರನ್ನು ಆಯ್ಕೆ ಮಾಡಬೇಕು ಪೂಜ್ಯ ಸ್ವಾಮೀಜಿಯವರು ಟ್ರಸ್ಟಿನ ಅಧ್ಯಕ್ಷರಾಗಿ ಇರುವ ಬದಲು ಆಧ್ಯಾತ್ಮಿಕ ಗುರುಗಳಾಗಿ ಮಾರ್ಗದರ್ಶನ ನೀಡಬೇಕು

7 ಶ್ರೀಮಠದಲ್ಲಿ ಪ್ರತಿವರ್ಷ ಜಾತ್ರೆ ಮಾಡುವ ಬದಲು ಅಲ್ಲಿನ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಉತ್ಸವವನ್ನು ಆಚರಿಸುವ ಮೂಲಕ ನಮ್ಮ ಸಮಾಜದ ಐತಿಹಾಸಿಕ ಪರಂಪರೆ ಹಾಗೂ ಜನ ಜಾಗೃತಿಯನ್ನು ಮೂಡಿಸುವ ಕಾರ್ಯ ಕೈಗೊಳ್ಳಬೇಕು

8 ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ರಾಜನಹಳ್ಳಿ ಮಠಾಧೀಶರಾದ ಶ್ರೀ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿಯವರು ರಾಯಚೂರಿನಲ್ಲಿ ಹಮ್ಮಿಕೊಂಡ ಈ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಬೇಕು

9 ಸರಕಾರ ನಮಗೆ ಕೊಟ್ಟಿರುವ ಮೀಸಲಾತಿಯನ್ನು ರಾಜಕೀಯ ಕ್ಷೇತ್ರದಲ್ಲಿ ಮಠದಲ್ಲಿರುವವರೇ ಆಯ್ಕೆ ಮಾಡಬೇಕು ಕರ್ನಾಟಕದಲ್ಲಿರುವ ಎಲ್ಲಾ ಮೀಸಲು ಕ್ಷೇತ್ರದಲ್ಲಿರುವವರ ಪಟ್ಟಿಯನ್ನು ನಾಯಕ ಸಮುದಾಯದ ಧರ್ಮದರ್ಶಿಗಳು ಹಾಗೂ ಟ್ರಸ್ಟಿಗಳು ಮಠಾಧೀಶರೇ ಆಯ್ಕೆ ಮಾಡಬೇಕು.

ಕರ್ನಾಟಕ ರಾಜ್ಯದ ಎಲ್ಲಾ ಸ್ವಾಭಿಮಾನಿ ವಾಲ್ಮೀಕಿ ನಾಯಕರು ಈ ಧರಣಿ ಸತ್ಯಾಗ್ರಹಕ್ಕೆ ಕೈಜೋಡಿಸಿ ಯಶಸ್ವಿಗೊಳಿಸಲು ಸಹಸ್ರಾರು ಸಂಖ್ಯೆಯಲ್ಲಿ ಬರಲು ಈ ಮೂಲಕ ಎಲ್ಲಾ ನಾಯಕರಲ್ಲಿ ಮನವಿ ಮಾಡಿಕೊಳ್ಳುತ್ತೇವೆ ವೆಂಕಟೇಶ್ ನಾಯಕ ಅಸ್ಕಿಹಾಳ್ ರಾಯಚೂರು ಜಿಲ್ಲಾ ಕರ್ನಾಟಕ ವಾಲ್ಮೀಕಿ ಸಮಾಜ ಸೇವಕರು.

ಇಂದಿಗೆ 30ದಿನ ಆಯ್ತು ಇಲ್ಲಿಯವರೆಗೆ ಬೆಂಬಲ ಕೊಟ್ಟಿರುವ ಸಮುದಾಯದ ಬಂದುಗಳಿಗೆ ಹೃತ್ಪೂರ್ವಕ ಅಭಿನಂದನೆಗಳು 🙏🙏🙏ವಿಪರ್ಯಾಸ ವೇನೆಂದರೆ ನಮ್ಮ ಸಮುದಾಯದಲ್ಲಿ 19 ರಿಂದ 21 ಜನ ಮಠಧಿಪತಿಗಳು ಇದ್ದಾರೆ. ಇಲ್ಲಿಯವರೆಗೆ ಒಂದು ಇಬ್ಬರು ಸ್ವಾಮಿಗಳು ಧರಣಿ ಸ್ಥಳಕ್ಕೆ ಬಂದು ಬೆಂಬಲಿಸಿದ್ದಾರೆ ಇನ್ನೂ ಉಳಿದ ಸ್ವಾಮಿಗಳಿಗೆ ಸಮುದಾಯ ಬೇಕಿಲ್ಲ ಅನಿಸುತ್ತೆ. ಇನ್ನೂ ನಮ್ಮ ಶ್ರೀ ಮಠದಲ್ಲಿ 28 ಜನ ಟ್ರಸ್ಟ್ ಗಳಿದ್ದಾರೆ. ಯಾರು  ಇಲ್ಲಿಯವರೆಗೆ ಧರಣಿ ಸ್ಥಳಕ್ಕೆ ಬಂದಿಲ್ಲ .ಶ್ರೀ ಮಠದ ಟ್ರಸ್ಟ್ ಗಳು ಕೇವಲ ಜಾತ್ರೆಗೆ ಮಾತ್ರ ಸೀಮಿತವಾಗಿದ್ದರೆ. ಇಂತ ಸ್ವಾಮಿಗಳು. ಮತ್ತು ಟ್ರಸ್ಟ್ ಗಳು ನಮ್ಮ ಸಮುದಾಯದಕ್ಕೆ ಅವಶ್ಯಕತೆ ಇದಿಯಾ ಅನ್ನೋ ಪ್ರಶ್ನೆ ಕಾಡ್ತಾಯಿದೆ.

ರಾಯಚೂರು ಜಿಲ್ಲೆಯಲ್ಲಿ.ಕರ್ನಾಟಕ ವಾಲ್ಮೀಕಿ ಸಮುದಾಯದ 15 ಬೇಡಿಕೆಗಳನ್ನು ಹಿಡೇರಿಸುವ 8ನೇ ದಿನದ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ನಡೆಸುತ್ತಿರುವ ವೆಂಕಟೇಶ್ ಆಸ್ಕಿನಾಳ ರಾಯಚೂರು.ರವರಿಗೆ ಬೆಂಬಲ ಸೂಚಿಸಲು ನೈಜ ನಾಯಕ ಬೇಡರ ಪಡೆ ಸಂಘಟನೆಯ ರಾಜ್ಯಾಧ್ಯಕ್ಷರಾದ. ಟಿ ಎಸ್ ಕರಿಯಪ್ಪ. ರಾಜ್ಯ ಮಹಿಳಾಧ್ಯಕ್ಷರಾದ ಸುಜಾತ ನಾಗರಾಜ್. ರಾಜ್ಯ ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಪಾಳೇಗಾರ.ರಾಜ್ಯ ಯುವ ಘಟಕ ರಾಜ್ಯಾಧ್ಯಕ್ಷರಾದ ರಂಗಸ್ವಾಮಿ.ನಿರ್ದೇಶಕರಾದ ಮಂಜುಳಾ. ಕಲ್ಬುರ್ಗಿ ಜಿಲ್ಲೆಯಿಂದ ಸಾಬಣ್ಣ. ಸಂಗಪ್ಪ. ಜಗನಾಥ್ ಸುರೇಶ. ವಿಶ್ವನಾಥ್. ವಿಜಯಪುರ ಜಿಲ್ಲೆಯ ವಾಲ್ಮೀಕಿ ನಾಯಕ ಸಮಾಜ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಬೆಟಗೇರಿ. ಮತ್ತು ವಾಲ್ಮೀಕಿ ಸಮುದಾಯದ ಹಲವಾರು ಜಿಲ್ಲೆಗಳಿಂದ ಸಂಘಟನೆ ಮುಂಖಂಡರು ಭಾಗವಹಿಸಿದರು

Related Post

Leave a Reply

Your email address will not be published. Required fields are marked *