ಕೊಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ರಾಜೀನಾಮೆ ಘೋಷಣೆ ಮಾಡಿದ್ದು ರಾಜಕೀಯದತ್ತಾ ಮುಖ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇದೇ ಮಂಗಳವಾರ ಅಂದರೆ ಮಾರ್ಚ್ 5 ರಂದು ನ್ಯಾಯಾಂಗವನ್ನು ತ್ಯಜಿಸುವುದಾಗಿ ಕೊಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿಗಳಾದ ಅಭಿಜಿತ್ ಗಂಗೋಪಾಧ್ಯಾಯ ಘೋಷಣೆ ಮಾಡಿದ್ದಾರೆ.
ಪಶ್ಚಿಮ ಬಂಗಾಳ ರಾಜ್ಯದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಅವರು ನೀಡಿರುವ ತೀರ್ಪು ರಾಜಕೀಯ ಚರ್ಚೆಗಳನ್ನು ಹುಟ್ಟುಹಾಕುತ್ತಿದೆ. ಪಶ್ಚಿಮಬಂಗಾಳದ ಸರ್ಕಾರಿ ಪ್ರಾಯೋಜಿತ ಮತ್ತು ಅನುದಾನಿತ ಶಾಲೆಗಳಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆಗಳಲ್ಲಿನ ಅಕ್ರಮ ಆರೋಪ ಬಗ್ಗೆ ತನಿಖೆ ನಡೆಸಲು ಅವರು ಕೇಂದ್ರೀಯ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯ ಸೂಚನೆ ನೀಡಿ ಹಲವು ನಿರ್ದೇಶನಗಳನ್ನು ಜಾರಿ ಮಾಡಿದ್ದಾರೆ.
ಈ ಮಾಹಿತಿಯನ್ನು ಕೊಲ್ಕತಾ ಹೈ ಕೋರ್ಟ್ ನ್ಯಾಯಮೂರ್ತಿಗಳಾದ ಅಭಿಜಿತ್ ಗಂಗೋಪಾಧ್ಯಾಯ ಅವರು ಹುದ್ದೆಗೆ ರಾಜೀನಾಮೆ ನೀಡುವ ಮತ್ತು ರಾಜಕೀಯ ಸೇರುವ ಬಗ್ಗೆ ಯಾವುದೇ ಮಾಹಿತಿಯನ್ನು ಕೊಟ್ಟಿಲ್ಲ, ಮತ್ತು ಬಹಿರಂಗ ಪಡಿಸಿಲ್ಲ, “ಇದು ಸತ್ಯವೋ – ಅಸತ್ಯವೋ” ಎಂದು ತಿಳಿಯುವುದಕ್ಕೆ ಸ್ವತ ನ್ಯಾಯಮೂರ್ತಿಗಳು ತಿಳಿಸಬೇಕಾಗಿದೆ.