ವಿಜಯನಗರ ವಿಧಾನಸಭಾ ಕ್ಷೇತ್ರದ ಹೊಸಪೇಟೆ ನಗರದ ಬಸ್ ನಿಲ್ದಾಣದ ಒಳಗಡೆ ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆ ಗಳು ಛಾಯಾಚಿತ್ರ ಪ್ರದರ್ಶನ ವಾರ್ತೆ ಇಲಾಖೆ ಅಧಿಕಾರಿಗಳು ಮತ್ತು ಕೆ ಎಸ್ ಆರ್ ಟಿ ಸಿ ಅಧಿಕಾರಿಗಳು ಸೇರಿ ಏರ್ಪಡಿಸಿದ್ದರು.
ಕರ್ನಾಟಕ ರಾಜ್ಯ ಸರ್ಕಾರವು ನುಡಿದಂತೆ ನಡೆದಿದ್ದೇವೆ. ಎಂಬ ಘೋಷ ವಾಕ್ಯದೊಂದಿಗೆ ಸನ್ಮಾನ್ಯ ಶ್ರೀ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜನರ ಕಷ್ಟ ಸುಖಗಳನ್ನು ತಿಳಿದುಕೊಂಡು ಅವರಿಗೆ ನೆರವಾಗುವಂತೆ ಐದು ಯೋಜನೆಗಳನ್ನು ಕರ್ನಾಟಕದಾದ್ಯಂತ ಜಾರಿಗೆ ತರುವುದರ ಮೂಲಕ ಮಾದರಿ ಯಾಗಿದ್ದಾರೆ.
ಜನರು ಒಂದು ಹೊತ್ತಿನ ಊಟ ಮಾಡುವುದಕ್ಕೂ ವಿಪರಿತ ಕಷ್ಟಪಡುವ ದಿನಗಳು ಎದುರಾಗಿವೆ ಅವರಿಗಾಗಿ ಅನ್ನಭಾಗ್ಯ ಯೋಚನೆ ಮೂಲಕ ಪ್ರತಿಯೊಂದು ಬಡ ಕುಟುಂಬದವರಿಗೂ ಅನ್ನಸಿಗುವಂತಾಗಿದೆ. ಮತ್ತು ಮಹಿಳೆಯರಿಗೆ ಉದ್ಯೋಗ ಸಿಗದೇ ಕುಟುಂಬ ನಿರ್ವಹಣೆ ಮಾಡುವುದಕ್ಕೆ ತೊಂದರೆಯಾಗುತ್ತಿದೆ.
ಮನೆಯ ಯಜಮಾನ ಸರಿಯಾಗಿ ಕೆಲಸಕ್ಕೆ ಹೋಗದೆ ಕುಡಿತ ಮುಂತಾದ ದುಷ್ಟ ಚಟಗಳಿಗೆ ಸಿಲ್ಕ್ ಇರುತ್ತಾರೆ. ಕೆಲಸ ಸಿಗದೇ ಕಷ್ಟ ಅನುಭವಿಸುತ್ತಾರೆ. ಈ ರೀತಿ ಅನೇಕ ತೊಂದರೆಗಳು ಉಂಟಾಗುವದರಿಂದ ಮನೆಯ ನಿರ್ವಹಣೆ ತುಂಬಾ ಕಷ್ಟಕರವಾಗಿರುತ್ತದೆ ಮನೆಯ ಯಜಮಾನಿಗೆ ಗೃಹಲಕ್ಷ್ಮಿ ಯೋಜನೆಯಿಂದ ಉಪಯೋಗವಾಗಿದೆ.
ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಒದಗಿಸಲಾಗಿದೆ ಇದರಿಂದ ವ್ಯಾಪಾರಸ್ಥ ಮತ್ತು ಉದ್ಯೋಗ ಸ್ಥಳಗಳಿಗೆ ಪ್ರಯಾಣಿಸಲು ಹಣದ ತೊಂದರೆ ಆಗುತ್ತಿತ್ತು ಈ ಶಕ್ತಿ ಯೋಜನೆಯಿಂದ ಮಹಿಳಾರಿಗೆ ಮತ್ತು ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳಿಗೆ ತೆರಳಲು ಸಹಾಯಕವಾಗಿದೆ.
ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿ ಕೆಲಸ ಸಿಗದೇ ಮನೆಯಲ್ಲೇ ಇರುವಂತಹ ಪರಿಸ್ಥಿತಿ ಕರ್ನಾಟಕದಾದ್ಯಂತ ನಿರುದ್ಯೋಗ ಸೃಷ್ಟಿಯಾಗಿದೆ. ಇದರಿಂದ ವಿದ್ಯಾವಂತ ಯುವಕ ಯುವತಿಯರಿಗೆ ಯುವ ನಿಧಿ ಯೋಜನೆಯಿಂದ ಡಿಪ್ಲೋಮೋ ವಿದ್ಯಾರ್ಥಿಗಳಿಗೆ 1500 ಮತ್ತು ಪದವೀಧರರಿಗೆ 3000 ಕರ್ನಾಟಕ ಸರ್ಕಾರ ನೀಡುತ್ತಿದೆ.
ಗೃಹ ಜ್ಯೋತಿ ಈ ಯೋಜನೆಯಿಂದ ಮನೆಯಲ್ಲಿ ಉಚಿತವಾಗಿ 200 ವ್ಯಾಟ್ ವಿದ್ಯುತ್ ಬಳಕೆ ಮಾಡಬಹುದು. ಯಾವುದೇ ರೀತಿಯ ವಿದ್ಯುತ್ ಬಿಲ್ ಕಟ್ಟುವ ಅವಶ್ಯಕತೆ ಇರುವುದಿಲ್ಲ ಎಂದು ಕರ್ನಾಟಕ ಸರ್ಕಾರವು ಗೃಹಜೋತಿ ಯೋಜನೆಯನ್ನು ಜಾರಿಗೆ ತಂದಿದೆ.
ಈ ಕಾರ್ಯ ಕ್ರಮ ಸನ್ಮಾನ್ಯ ಶ್ರೀ ಹೆಚ್ ಆರ್ ಗವಿಯಪ್ಪ ಶಾಸಕರು ವಿಜಯನಗರ ಉದ್ಘಾಟಿಸಿ ಛಾಯಾಚಿತ್ರ ವೀಕ್ಷಣೆ ಹರ್ಷ ವ್ಯಕ್ತ ಪಡಿಸಿ ನಂತರ ಪತ್ರಿಕಾಗೋಷ್ಠಿ ನಡೆಸಿ ವಿಜಯನಗರ ಕ್ಷೇತ್ರದ ಶಾಸಕರು ಶ್ರೀ ಹೆಚ್ ಆರ್ ಗವಿಯಪ್ಪ ಶಾಸಕರು ರೈತರಿಗೆ ಸಕ್ಕರೆ ಕಾರ್ಖಾನೆ ಮತ್ತು ಬಡವರಿಗೆ ಸೂರು ಕಲ್ಪಿಸುವ ಮಹತ್ತರ ಕಾರ್ಯ ಕೈಗೊಳ್ಳಲು ಸರ್ಕಾರ ಮಟ್ಟದಲ್ಲಿ ಪ್ರಯತ್ನ ಮಾಡಿದ್ದೇನೆ, ವಿಜಯನಗರ ಕ್ಷೇತ್ರ ಅಭಿವೃದ್ಧಿ ಯತ್ತಾ ಕೊಂಡೊಯ್ಯುವುದಾಗಿ ತಿಳಿಸಿದರು.