ತುಮಕೂರು ಜಿಲ್ಲೆಯಲ್ಲಿ ನಾಫೆಡ್ ಮೂಲಕ ಬೆಂಬಲ ಬೆಲೆಯಲ್ಲಿ ಉಂಡೆ ಕೊಬ್ಬರಿ ಖರೀದಿ ಹಾಗೂ ನೋಂದಣಿ ಪ್ರಕ್ರಿಯೆಯು ಮಾರ್ಚ್ 4ರಿಂದ ಆರಂಭವಾಗಲಿದೆ. ಜಿಲ್ಲೆಯಲ್ಲಿ 21 ಖರೀದಿ ಕೇಂದ್ರ ತೆರೆಯಲಾಗಿದ್ದು, ರೖತರು ನೋಂದಣಿ ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಪ್ರತೀ ಎಕರೆಗೆ ಆರು ಕ್ವಿಂಟಲ್, ಪ್ರತೀ ರೈತನಿಂದ ಗರಿಷ್ಠ 15ಕ್ವಿಂಟಲ್ ಕೊಬ್ಬರಿ ಖರೀದಿಗೆ ಅವಕಾಶ ನೀಡಲಾಗಿದೆ. ಮುಂದಿನ 45ದಿನಗಳ ಕಾಲ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ತಿಪಟೂರು ತುರುವೇಕೆರೆ ತಾಲೂಕಿನಲ್ಲಿ ತಲಾ 6 ಕೇಂದ್ರ, ಗುಬ್ಬಿ, ಚಿಕ್ಕನಾಯಕನಹಳ್ಳಿ, ಹುಳಿಯಾರಿನಲ್ಲಿ ತಲ 2 ಕೇಂದ್ರ. ತುಮಕೂರು, ಕುಣಿಗಲ್, ಶಿರಾ ತಾಲೂಕಿನಲ್ಲಿ ತಲಾ ಒಂದು ಸೇರಿ, ಒಟ್ಟು 21ಕೇಂದ್ರದಲ್ಲಿ ಕೊಬ್ಬರಿ ಖರೀದಿಸಲಾಗುತ್ತದೆ
ತುಮಕೂರು ಜಿಲ್ಲೆ ತಿಪಟೂರು ಪಟ್ಟಣದ ಕೊಬ್ಬರಿ ಮಾರುಕಟ್ಟೆ ಕೇಂದ್ರದ ಬಳಿ ನೋಂದಣಿಗಾಗಿ ರಾತ್ರೋರಾತ್ರಿ ರೈತರು ಕ್ಯೂ ನಿಂತಿದ್ದಾರೆ. ರೈತರು ತುಮಕೂರು ಜಿಲ್ಲೆ ತಿಪಟೂರು ಪಟ್ಟಣದ ಕೊಬ್ಬರಿ ಮಾರುಕಟ್ಟೆ ಕೇಂದ್ರದ ಬಳಿ ನೋಂದಣಿಗಾಗಿ ಪರದಾಡ್ತಿದ್ದಾರೆ. ಮಹಿಳೆಯರು ಚಾಪೆ ದಿಂಬು ಸಮೇತ ಕ್ಯೂ ನಿಂತಿದ್ರು.
ಈ ಹಿಂದೆ ನೋಂದಣಿ ಪ್ರಕ್ರಿಯೆ ನಡೆಸಲಾಗಿತ್ತು. ಆದರೆ, ನೋಂದಣಿ ಸಮಯದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಹಲವು ರೈತರಿಗೆ ನೋಂದಣಿ ಮಾಡಿಸಲು ಅವಕಾಶವೇ ಸಿಕ್ಕಿರಲಿಲ್ಲ. ಈಗ ಮತ್ತೆ ಹೊಸದಾಗಿ ನೋಂದಣಿ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ.