ಮಹಾರಾಷ್ಟ್ರದಲ್ಲಿ : ಚಿರತೆ ಗಂಟೆಗಟ್ಟಲೆ ಹರಸಾಹಸಪಟ್ಟು ಸಂಕಷ್ಟದಿಂದ ಪಾರಾಗಲು ಯತ್ನಿಸಿದೆ. ಆದರೆ, ಅರಣ್ಯಾಧಿಕಾರಿಗಳು ಮಧ್ಯಪ್ರವೇಶಿಸಿ, ಚಿರತೆಗೆ ಅರಿವಳಿಕೆ ಚುಚ್ಚುಮದ್ದು ನೀಡಿ, ಪ್ರಜ್ಞೆ ತಪ್ಪಿಸಿ ನಂತರ ಎಚ್ಚರಿಕೆಯಿಂದ ಚಿರತೆಯನ್ನು ರಕ್ಷಿಸಿದ್ದಾರೆ.
ಆಹಾರ ಹುಡುಕಿಕೊಂಡು ಬಂದ ಚಿರತೆಯೊಂದರ ತಲೆ ಪಾತ್ರೆಯೊಳಗೆ ಸಿಲುಕಿಕೊಂಡು ಒದ್ದಾಡಿರುವ ಘಟನೆ ಮಹಾರಾಷ್ಟ್ರದ ಧುಲೆ ಜಿಲ್ಲೆಯಲ್ಲಿ ನಡೆದಿದೆ. ಕಾಡು ನಾಶವಾಗುತ್ತಿದ್ದಂತೆ ಆಹಾರ ಅರಸಿಕೊಂಡು ಪ್ರಾಣಿಗಳು ನಾಡಿನತ್ತ ಬರುವುದು ಸಾಮಾನ್ಯವಾಗಿದೆ. ಅದರಂತೆ ಈ ಚಿರತೆಯ ಧುಲೆ ಜಿಲ್ಲೆಯ ಹಳ್ಳಿಯೊಂದಕ್ಕೆ ಬಂದಿದೆ. ದನದ ಕೊಟ್ಟಿಗೆ ಪ್ರವೇಶಿಸುತ್ತಿದ್ದಂತೆ ಲೋಹದ ಪಾತ್ರೆಯೊಳಗೆ ತಲೆ ಹಾಕಿದೆ. ಪಾತ್ರೆಯೊಳಗೆ ತಲೆ ಸಿಲುಕಿ 5 ಗಂಟೆಗಳ ಕಾಲ ಚಿರತೆ ಒದ್ದಾಡಿದೆ. ಬಳಿಕ ಈ ಗಂಡು ಚಿರತೆಯನ್ನು ಅರಣ್ಯಾಧಿಕಾರಿಗಳು ಯಶಸ್ವಿಯಾಗಿ ರಕ್ಷಿಸಿದ್ದಾರೆ.
ಘಟನೆಯ ಕುರಿತು ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಚಿರತೆ ಗಂಟೆಗಟ್ಟಲೆ ಹರಸಾಹಸಪಟ್ಟು ಸಂಕಷ್ಟದಿಂದ ಪಾರಾಗಲು ಯತ್ನಿಸಿದೆ. ಆದರೆ, ಅರಣ್ಯಾಧಿಕಾರಿಗಳು ಮಧ್ಯಪ್ರವೇಶಿಸಿ, ಚಿರತೆಗೆ ಅರಿವಳಿಕೆ ಚುಚ್ಚುಮದ್ದು ನೀಡಿ, ಪ್ರಜ್ಞೆ ತಪ್ಪಿಸಿ ನಂತರ ಎಚ್ಚರಿಕೆಯಿಂದ ಚಿರತೆಯನ್ನು ರಕ್ಷಿಸಿದ್ದಾರೆ.
ಫೆಬ್ರವರಿ 29 ರಂದು ಕೇಂದ್ರ ಪರಿಸರ ಸಚಿವಾಲಯ ಬಿಡುಗಡೆ ಮಾಡಿದ ‘ಭಾರತದಲ್ಲಿ ಚಿರತೆಗಳ ಸ್ಥಿತಿ, 2022’ ವರದಿಯ ಪ್ರಕಾರ, ಭಾರತದಲ್ಲಿ ಅಂದಾಜು 1 3,874 ಚಿರತೆಗಳಿವೆ . ಮಧ್ಯಪ್ರದೇಶವು ದೇಶದಲ್ಲೇ ಅತಿ ಹೆಚ್ಚು ಚಿರತೆಗಳನ್ನು ಹೊಂದಿದೆ ಎಂದು ವರದಿಯಿಂದ ತಿಳಿದುಬಂದಿದೆ.