ಹಾಸನ : ನಗರದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಿರುದ್ಯೋಗ ಯುವತಿಯರಿಗಾಗಿ ದಿನಾಂಕ 21-03-2024ರಿಂದ 13 ದಿನಗಳ ಕಾಲ ಉಚಿತವಾಗಿ ಮಹಿಳೆಯರಿಗೆ *ಸೆಣಬಿನ ಉತ್ಪನ್ನಗಳ ಉದ್ಯಮಿ- ಜ್ಯೂಟ್ ಬ್ಯಾಗ್ (jute bags) ತರಬೇತಿ ಪ್ರಾರಂಭವಾಗಲಿದೆ. ಈ ತರಬೇತಿಗಳಲ್ಲಿ ಉದ್ಯಮಶೀಲತ ಹಾಗೂ ವ್ಯಕ್ತಿತ್ವ ವಿಕಾಸನ ತರಬೇತಿಯನ್ನು ಸಹ ನೀಡಲಾಗುತ್ತದೆ. ಸಂಸ್ಥೆಯಲ್ಲಿ ತರಬೇತಿ ಪಡೆದವರಿಗೆ ಸಾಲ ಸೌಲಭ್ಯ ತೆಗೆದು ಕೊಳ್ಳಲು ಅನುಕೂಲವಾಗುವುದು.
ಶಿಬಿರಾರ್ಥಿಗಳಿಗೆ ಉಚಿತವಾಗಿ ತರಬೇತಿ, ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಭೋದನೆ ಮಾಡಿಸಲಾಗುವುದು. ತರಬೇತಿ ಪೂರ್ಣಗೊಂಡ ನಂತರ ಸಂಸ್ಥೆಯಿಂದ ಪ್ರಮಾಣ ಪತ್ರ ವಿತರಿಸಲಾಗುತ್ತದೆ.
*ಲೇಡಿಸ್ ವೆನಿಟಿ ಬ್ಯಾಗ್, ಸ್ಟ್ರೈನಿಂಗ್ ಜೂಟ್ ಬ್ಯಾಗ್, ಮನಿ ಪರ್ಸ್, ಲೇಡೀಸ್ ಪರ್ಸ್, ಹ್ಯಾಂಡ್ ಬ್ಯಾಗ್, ಸೈಡ್ ಜೂಟ್ ಬ್ಯಾಗ್, ಶಾಪಿಂಗ್ ಬ್ಯಾಗ್, ಆಫೀಸ್ ಬ್ಯಾಗ್, ಕರ್ಟನ್ಸ್, ಜೂಲಸ್, ಕೀ ಚೈನ್ಸ್, ಫೈಲ್ ತಯಾರಿಕೆ, ಇತ್ಯಾದಿ ಬ್ಯಾಗ್ ವಿಷಯ ಗಳನ್ನು ಹೇಳಿಕೊಡಲಾಗುತ್ತದೆ
ಆಸಕ್ತ 18 ವರ್ಷ ಮೇಲ್ಪಟ್ಟ 45 ವರ್ಷದೊಳಗಿನ ನಿರುದ್ಯೋಗ ಯುವತಿಯರು ಸಂಸ್ಥೆಯ ಕಚೇರಿಯಲ್ಲಿ ಅಥವಾ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ 08172-297013, 7353654000, 9535684409, 8147903497
ಗೂಗಲ್ ಫಾರ್ಮ್ ಮೂಲಕ ಆನ್ಲೈನಲ್ಲೇ ಮಹಿಳೆಯರಿಗೆ ಸೆಣಬಿನ ಉತ್ಪನ್ನಗಳ ಕೌಶಲ್ಯ ತರಬೇತಿ ತರಬೇತಿಗೆ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ