ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಗೆ ಸ್ವಲ್ಪ ಹಿನ್ನಡೆ ಇದೆ ಎಂದು ಕೆಲವು ಸಮೀಕ್ಷೆಗಳು ಅಭಿಪ್ರಾಯ ವ್ಯಕ್ತಪಡಿಸಿವೆ. ಹಾಲಿ ಸಂಸದ ನಾರಾಯಣಸ್ವಾಮಿ ಇಂದಿನ ಭ್ರಷ್ಟ ವ್ಯವಸ್ಥೆಯಲ್ಲಿ ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬ ಹೇಳಿಕೆ ಕೊಟ್ಟಿದ್ದರು. ಈ ಸೇರಿದ ಬಿ.ಜೆ.ಪಿ ಅಭಿಮಾನಿಗಳ ಎನ್.ಆರ್.ಐ ಗೆಳೆಯ ತಂಡ ಸಮೀಕ್ಷಾ ಎಂಬ ಸಂಸ್ಥೆಗೆ ಅಭಿಪ್ರಾಯ ಸಂಗ್ರಹಿಸಿತ್ತು. ಈ ಸಮೀಕ್ಷೆಯ ಪ್ರಕಾರ ಪಕ್ಷದ ಅಭ್ಯರ್ಥಿಯ ಆಯ್ಕೆಯ ಮೇಲೆ ಬಿಜೆಪಿಯ ಗೆಲುವು ಸಾದ್ಯವಿದೆ ಎಂಬ ಅಭಿಪ್ರಾಯವಿದೆ.
ಈ ಸಂಸ್ಥೆಯು ಹಾಲಿ ಸಂಸದ ನಾರಾಯಣ ಸ್ವಾಮಿ, ಮಾಜಿ ಸಂಸದ ಜನಾರ್ದನ ಸ್ವಾಮಿ ಹಾಗೂ ಇತರೆ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಕುರಿತು ಸಮೀಕ್ಷೆ ನಡೆಸಿದೆ. ಅದರಲ್ಲಿ ಜನಾರ್ದನ ಸ್ವಾಮಿಯವರ ಕಾರ್ಯ ವೈಖರಿಗೆ ಹೆಚ್ಚು ಸಕಾರಾತ್ಮಕ ಒಲವು ವ್ಯಕ್ತವಾಗಿದೆ.
(ಈ ಸಮೀಕ್ಷೆಯ ವಿವರಗಳನ್ನು ಈ ಹಿಂದೆ ವಿತರಿಸಲಾಗಿದೆ). ಜನಾರ್ದನ ಸ್ವಾಮಿಯವರ ಕಾರ್ಯ ವೈಖರಿಗೆ ಸಕಾರಾತ್ಮಕ ಅಭಿಪ್ರಾಯಗಳಿದ್ದರೂ ಅವರು 2014ರಲ್ಲಿ ಏಕೆ ಸೋತರು ಎಂಬ ಪ್ರಶ್ನೆ ಮೂಡುತ್ತದೆ. ಇದಕ್ಕೆ ತಜ್ಞರು ನೀಡಿದ ಉತ್ತರ ಸ್ವಾರಸ್ಯಕರವಾಗಿದೆ. ಜನಾರ್ದನ ಸ್ವಾಮಿಯವರು ವಿಜ್ಞಾನ, ತಂತ್ರಜ್ಞಾನ, ಕೃಷಿ ಮತ್ತು ರೈಲ್ವೇ ಸಾರಿಗೆ ಕುರಿತಂತೆ ಬೃಹತ್ ಯೋಜನೆಗಳು ಜಾರಿಯಾದವು. ಆದರೆ ಅವುಗಳ ಮಹತ್ವದ ಅರಿವು ಜನಸಾಮಾನ್ಯರಿಗೆ ಮೂಡಿರಲಿಲ್ಲ. ಈಗ ಅವುಗಳ ಅನುಷ್ಠಾನವಾಗುತ್ತಿರುವುದು ಅವುಗಳ ಮಹತ್ವದ ಮನದಟ್ಟಾಗುತ್ತಿದೆ. ಅದೂ 2014ರಲ್ಲಿ ಜನಾರ್ದನ ಸ್ವಾಮಿಯವರ ಜನಾಂಗದ ಗೂಳಿಹಟ್ಟಿ ಶೇಖರ್ ಜನತಾದಳದಿಂದ ಚುನಾವಣೆಗೆ ಎರಡು ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದರು. ಅದು ಕಾಂಗ್ರೆಸ್ ಗೆ ಲಾಭದಾಯಕವಾಯಿತು. ಜನಾರ್ದನ ಸ್ವಾಮಿಯವರಿಗೆ ಹಿನ್ನೆಡೆಯಾಯಿತು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಗೆ ಸ್ವಲ್ಪ ಹಿನ್ನಡೆ ಅನಿಸುತ್ತದೆ ಆದರೆ ಪಕ್ಷದ ಅಭ್ಯರ್ಥಿ ಆಯ್ಕೆಯ ಆಧಾರದ ಮೇಲೆ ಬಿಜೆಪಿ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂಬ ಸಾರ್ವಜನಿಕ ಅಭಿಪ್ರಾಯ. ಈ ಹಿನ್ನಲೆಯಲ್ಲಿ ಒಂದು ಪುಟ್ಟ ಸಮೀಕ್ಷೆಯ ವರದಿ ಹೇಗಿದೆ.
ಈ ಸಮೀಕ್ಷೆಯು ಚಿತ್ರದುರ್ಗ ಕ್ಷೇತ್ರದಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದೆ. ಸಮೀಕ್ಷೆಯು 20 ರಿಂದ 55 ವರ್ಷದೊಳಗಿನ ಮತದಾರರನ್ನು ಗುರಿಯಾಗಿಸಿಕೊಂಡಿದೆ.
ಸಮೀಕ್ಷೆಯ ವಿಧಾನ : ಮಾದರಿ ಗಾತ್ರ : 7000 ಪ್ರತಿಕ್ರಿಯೆ ನೀಡಿದವರು : ಪುರುಷರು 44,100 (63%) ಸ್ತ್ರೀಯರು 20900 (37%)
ವಯಸ್ಸಿನ ವಿವರಣೆ : 20 ರಿಂದ 35 ವರ್ಷದವರು 28,000 36 ರಿಂದ 45 ವರ್ಷದವರು 25200 46 ರಿಂದ 55 ವರ್ಷದವರು 16800.
ಸಮೀಕ್ಷೆಯ ಪ್ರಮುಖ ಫಲಿತಾಂಶಗಳು : ಮುಂದಿನ ಸಂಸದ ಅಭ್ಯರ್ಥಿ ಯಾರಾಗಬೇಕು ಜನರ ಆದ್ಯತೆ.
- ನಾರಾಯಣಸ್ವಾಮಿ ಪ್ರಸ್ತುತ ಸಂಸದರು 20000 (29%)
- ಜನಾರ್ಧನ ಸ್ವಾಮಿ 30,000 (43%).
- ರಘು ಚಂದನ್ 10500 (15%).
- ನಿರ್ಧರಿಸಿದ/ಇತರೆ 9500 (13%).
ಜನಾರ್ಧನ ಸ್ವಾಮಿ ಅಭ್ಯರ್ಥಿ ಆದರೆ ಅವರಿಗೆ ಹೆಚ್ಚಿನ ಮತಗಳು ಸಿಗುವ ಸಾಧ್ಯತೆ ಇದೆ. •
- ತುಂಬಾ ಸಾಧ್ಯತೆ : 15,000 (21%).
- ಸಾಧ್ಯತೆ: 20,000 (29%)
- ಅಸಂಭವ : 10,500 (15%)
- ತೀರಾ ಅಸಂಭವ 10,500 (15%)
ಅಭ್ಯರ್ಥಿಯ ಬೆಂಬಲದ ಮೇಲೆ ಪ್ರಭಾವ ಬೀರುವ ಅಂಶಗಳು
ಈಗ ಜನಾರ್ದನ ಸ್ವಾಮಿಯವರಿಗೆ ಅನುಕೂಲ ವಾತಾವರಣ ಇದೆ ಎಂದು
- ಸಾರ್ವಜನಿಕ ಸೇವೆಯ ದಾಖಲೆ : 28,000 (40%)
- ಬಿಜೆಪಿಯ ಸಿದ್ಧಾಂತದೊಂದಿಗೆ ಹೊಂದಾಣಿಕೆ : 20,000 (28%)
- ವೈಯಕ್ತಿಕ ಗುಣಗಳು ಮತ್ತು ನಾಯಕತ್ವದ ಸಾಮರ್ಥ್ಯಗಳು : 15,000 (21%)
- ಕ್ಷೇತ್ರಕ್ಕೆ ನೀತಿಗಳು ಮತ್ತು ಭರವಸೆಗಳು : 7,000 (21%)
ಪ್ರಸ್ತುತ ಸಂಸದ ನಾರಾಯಣಸ್ವಾಮಿಯವರ ಕಾರ್ಯ ವೈಖರಿಯ ಬಗ್ಗೆ:
- ತುಂಬಾ ತೃಪ್ತಿ : 7,000 (10%)
- ತೃಪ್ತಿ : 9,000 (12.85%)
- ತಟಸ್ಥ : 20,000 (28.5%)
- ಅತೃಪ್ತರು : 20,500 (29%)
- ತುಂಬಾ ಅತೃಪ್ತಿ : 13,500 (19%)
ಈ ಕ್ಷೇತ್ರಕ್ಕೆ ಸ್ಥಳೀಯರ ಪ್ರಾತಿನಿಧ್ಯದ ಪ್ರಾಮುಖ್ಯತೆ :
- ಬಹಳ ಮುಖ್ಯ : 35,000 (50%)
- ಪ್ರಮುಖ : 21,000 (30%)
- ತಟಸ್ಥ : 7,000 (10%)
- ಬಹಳ ಮುಖ್ಯವಲ್ಲ : 4,900 (7%)
- ಮುಖ್ಯವಲ್ಲ : 2,100 (3%)
ಕ್ಷೇತ್ರದಲ್ಲಿ ಬಿಜೆಪಿಯ ಪ್ರಸ್ತುತ ಸಾಧನೆ :
- ಅತ್ಯುತ್ತಮ 5,000 (7%)
- ಉತ್ತಮ : 10,500 (15%)
- ಸಾಧಾರಣ : 15,000 (21%)
- ಕಳಪೆ : 21,000 (28.5%)
- ಅತ್ಯಂತ ಕಳಪೆ : 18,500 (26%)
2009 ರಿಂದ 2014ರಲ್ಲಿ ಬಿಜೆಪಿಯ ಸಾಧನೆ :
- ಅತ್ಯುತ್ತಮ : 15,000 (21%)
- ಉತ್ತಮ : 17,500 (25%)
- ಸಾಧಾರಣ : 25,000 (36%)
- ಕಳಪೆ : 7,000 (10%)
- ಅತ್ಯಂತ ಕಳಪೆ : 5,500 (8%)
ಚುನಾವನಾ ಕಾರ್ಯತಂತ್ರಜ್ಞರು ಹೇಳುತ್ತಾರೆ. ಕಾರಣ ನಾರಾಯಣಸ್ವಾಮಿ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿರುವುದು. ಎರಡನೆಯದಾಗಿ ಅವರ ಅತಿ ಸಾಧಾರಣ ಸಾಧನೆಯಿಂದಾಗಿ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆಗಳು ಕಡಿಮೆ. ಕೊಟ್ಟರೆ ಗೆಲ್ಲುವುದು ಕಷ್ಟ. ಜನಾರ್ದನ ಸ್ವಾಮಿ ಅಭ್ಯರ್ಥಿ ಆದರೆ ಅವರ ಹಿಂದಿನ ಸಾಧನೆಗಳು ಖಂಡಿತಾ ಈ ಬಾರಿ ಇವರಿಗೆ ಪ್ರೋತ್ಸಾಹ ನೀಡುತ್ತವೆ. ಜೊತೆಗೆ ಜೆ.ಡಿ.ಎಸ್ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಗೆಲುವಿನ ಹಾದಿ ಸುಗಮವಾಗಿದೆ. ಮೇಲಾಗಿ ಜನಾರ್ದನ ಸ್ವಾಮಿ ಇಂಟರ್ನ್ಯಾಷನಲ್-ಟೆಕ್ನಾಲಜಿಯಲ್ಲಿದೆ. ಕ್ಷೇತ್ರದ ಸಮಸ್ಯೆಗಳು, ಇಲ್ಲಿ ಅವಶ್ಯವಿರುವ ಯೋಜನೆಗಳನ್ನು ಲೋಕಸಭೆಯಲ್ಲಿ ಮಂಡಿಸುವ ಭಾಷೆ ಮತ್ತು ಪ್ರತಿಭೆಯುಳ್ಳವರು. ಭ್ರಷ್ಟ್ಯತೆಯಿಲ್ಲದ ಮೆರಿಟೋರಿಯಸ್ ವ್ಯಕ್ತಿ. ಇವರಲ್ಲದೇ ಇತರ ಆಕಾಂಕ್ಷಿಗಳು ಒಳ್ಳೆಯವರಿದ್ದರೂ ದೆಹಲಿಯಲ್ಲಿ ಮಾತನಾಡುವ ಕೆಲಸ ಮಾಡುವ ಸಾಧ್ಯತೆಗಳು ಕಡಿಮೆ. ಒಟ್ಟಾರೆ ಚಿತ್ರದುರ್ಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕೆಂದರೆ ಜನಾರ್ದನ ಸ್ವಾಮಿಯಂತವರು ಜನಪ್ರತಿನಿಧಿಯಾದರೆ ಒಳ್ಳೆಯದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.