Breaking
Tue. Dec 24th, 2024

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ; ನಿವಾಸದ 13ನೇ ಅಂತಸ್ತಿನ ಕಟ್ಟಡದ ಕಿಚನ್ ಒಂದರಲ್ಲಿ ಅಗ್ನಿ ಅವಘಡ..!

ಮುಂಬೈನ ಬಾಂದ್ರಾದಲ್ಲಿರುವ ಪಾಲಿ ಹಿಲ್ನ ನವ್ರೋಜ್ ಹಿಲ್ ಸೊಸೈಟಿ ಅಪಾರ್ಟ್ಮೆಂಟ್ನ ಕಟ್ಟಡದಲ್ಲಿ ಬುಧವಾರ (ಮಾರ್ಚ್ 6) ಅಗ್ನಿ ಅವಘಡ ನಡೆದಿದೆ. ಮಾಹಿತಿ ತಿಳಿದ ತಕ್ಷಣ ನಾಲ್ಕು ಅಗ್ನಿ ಶಾಮಕ ವಾಹನ, ಮೂರು ಜಂಬೋ ಟ್ಯಾಂಕರ್ಸ್ ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿದ್ದಾರೆ. ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಇಲ್ಲಿಯೇ ವಾಸವಾಗಿದ್ದಾರೆ. 17 ಅಂತಸ್ತನ್ನು ಈ ಕಟ್ಟಡ ಹೊಂದಿದೆ. ಸದ್ಯದ ಮಟ್ಟಿಗೆ ಯಾರಿಗೂ ಹಾನಿ ಉಂಟಾಗಿಲ್ಲ. ಬೆಂಕಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ ಎನ್ನಲಾಗಿದೆ.
13ನೇ ಅಂತಸ್ತಿನ ಕಟ್ಟಡದ ಕಿಚನ್ ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಇದೇ ಬಿಲ್ಡಿಂಗ್ನಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ವಾಸವಾಗಿದ್ದಾರೆ. ಅವರದ್ದು ಐದು ಬಿಎಚ್ಕೆ ಮನೆ ಹೊಂದಿದ್ದಾರೆ. 2023ರಲ್ಲಿ ಅವರು ಇಲ್ಲಿ ಮನೆ ಖರೀಸಿ ಮಾಡಿದ್ದರು. ಕಳೆದ ವರ್ಷ ಜುಲೈ ತಿಂಗಳಲ್ಲಿ ಅವರ ಮನೆಯ ವಿಡಿಯೋ ವೈರಲ್ ಆಗಿತ್ತು.
ಈ ಕಟ್ಟಡದಲ್ಲಿ ಹಲವು ಉದ್ಯಮಿಗಳು, ಗಣ್ಯರು ವಾಸವಾಗಿದ್ದಾರೆ ಎನ್ನಲಾಗಿದೆ. ಈ ಭಾಗದಲ್ಲಿ ಸ್ಯೂಟ್ಸ್, ಪೆಂಟ್ಹೌಸ್, ಸ್ಕೈ ವಿಲ್ಲಾ ಹಾಗೂ ಮ್ಯಾನ್ಶನ್ ರೀತಿಯ ಆಯ್ಕೆಗಳು ಇಲ್ಲಿವೆ. ಇಲ್ಲಿ ಅಕ್ಕಪಕ್ಕದಲ್ಲಿ ಸೈಫ್ ಅಲಿ ಖಾನ್, ಕರೀನಾ ಕಪೂರ್, ರಣಬೀರ್ ಕಪೂರ್, ಆಲಿಯಾ ಭಟ್ ಹಾಗೂ ಇತರರು ವಾಸವಾಗಿದ್ದಾರೆ.
ಶಾರುಖ್ ಖಾನ್, ರೀನಾ ಕಪೂರ್, ರಣಬೀರ್ ಕಪೂರ್, ಆಲಿಯಾ ಭಟ್ ಹಾಗೂ ಇತರರು ವಾಸವಾಗಿದ್ದಾರೆ. ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಮನೆ ಕೂಡ ಈ ಕಟ್ಟಡದಿಂದ ಸಮೀಪದಲ್ಲಿ ಇದೆ. ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಕೂಡ ಈ ಭಾಗದಲ್ಲಿ ಮನೆ ಖರೀದಿಸುವ ಆಲೋಚನೆಯಲ್ಲಿ ಇದ್ದಾರೆ.
ಜಾಕ್ವೆಲಿನ್ ಫರ್ನಾಂಡಿಸ್ ಅವರು ಹಾಲಿವುಡ್ಗೆ ಕಾಲಿಡುತ್ತಿದ್ದಾರೆ. ಆ್ಯಕ್ಷನ್ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಇತ್ತೀಚೆಗೆ ಸೆಟ್ನ ಫೋಟೋ ಹಂಚಿಕೊಂಡು ಅವರು ಸುದ್ದಿ ಆಗಿದ್ದರು. ಈ ಸಿನಿಮಾದ ಶೂಟಿಂಗ್ ಇಟಲಿಯಲ್ಲಿ ನಡೆಯುತ್ತಿದೆ. ಇದು ಅವರ ಮೊದಲ ಹಾಲಿವುಡ್ ಸಿನಿಮಾ. 200 ಕೋಟಿ ರೂಪಾಯಿ ವಂಚನೆ ಪ್ರಕರಣದ ಆರೋಪಿ ಸುಕೇಶ್ ಚಂದ್ರಶೇಖರ್ ಜೊತೆಗಿನ ರಿಲೇಶನ್ಶಿಪ್ನಿಂದ ಅವರು ಸಾಕಷ್ಟು ಸಾಕಷ್ಟು ಅನುಭವಿಸಿದ್ದಾರೆ.

Related Post

Leave a Reply

Your email address will not be published. Required fields are marked *