ಶಿವಮೊಗ್ಗ : ಇತ್ತೀಚಿಗೆ ಯುವಕರ ಕ್ರೇಜ್ ಹಾಗೂ ಬೈಕ್ಗಳಲ್ಲಿ ಕರ್ಕಶವಾದ ಶಬ್ದ ಮತ್ತು ವೀಲಿಂಗ್ ಇತ್ಯಾದಿಗಳನ್ನು ಯುವಕರು ಹೆಚ್ಚಾಗಿ ಮಾಡುತ್ತಿದ್ದಾರೆ ಇದಕ್ಕೆ ಕಡಿವಾಣ ಇಲ್ಲದಂತಾಗಿದೆ. ಯುವಕರು ತಮ್ಮ ಕ್ರೇಜ್ ಮಾಡುತ್ತಾ ಇನ್ಸ್ಟಾಲ್ ಗ್ರಾಂ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಇಂತಹ ವೀಲಿಂಗ್ ಕಾರ್ಯಕ್ರಮ ಮತ್ತು ಸೌಂಡ್ ಸಾರ್ವಜನಿಕರಿಗೆ ಹೆಚ್ಚಾಗಿ ತೊಂದರೆ ಉಂಟು ಮಾಡಿ ಶಾಲೆ, ಆಸ್ಪತ್ರೆ, ಕಾಲೇಜು ಇತ್ಯಾದಿ ಸ್ಥಳಗಳಲ್ಲಿ ಇಂತಹ ಶಬ್ದಗಳನ್ನು ಮಾಡುತ್ತಾರೆ.
ಆದರೆ ಇಂತಹ ಕೃತತೆಗಳನ್ನು ಮಾಡಬಾರದೆಂದು ತಿಳಿಸಿದರು. ಯುವಕರು ಹೆಚ್ಚಾಗಿ ತಮ್ಮ ಕ್ರೇಜ್ ಮೂಲಕ ಇತರರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ. ಎಂದು ಅನೇಕ ದೂರುಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದಾವೆ, ಇದರ ಬೆನ್ನಲ್ಲೇ ಶಿವಮೊಗ್ಗದ ಯುವಕನೋರ್ವನಿಗೆ ಶಿವಮೊಗ್ಗ ಜಿಲ್ಲಾ ನ್ಯಾಯಾಲಯ ಬಾರಿ ಮೊತ್ತದ ದಂಡವನ್ನು ವಿಧಿಸುವ ಮೂಲಕ ಕ್ರೇಜ್ ಮಾಡುವ ಸವಾರರಿಗೆ ನಡುಕ ಹುಟ್ಟಿಸಿದ್ದೆ.
ಶಿವಮೊಗ್ಗ: ಬೈಕ್ ಆಲ್ಟ್ರೇಷನ್ ಮಾಡಿಸಿ ಕರ್ಕಶ ಶಬ್ಧದೊಂದಿಗೆ ಚಲಾಯಿಸುತ್ತಿದ್ದ ಸವಾರನಿಗೆ 8200 ರೂ. ದಂಡ ವಿಧಿಸಲಾಗಿದೆ. ನಗರದ ವಿವಿಧ ಸರ್ಕಲ್ ಗಳಲ್ಲಿ ಡಿಸ್ಕವರಿ ಬೈಕ್ ನ್ನು Altration ಮಾಡಿಕೊಂಡು ಮತ್ತು ಬೀಟ್/ಡಿಫೆಕ್ಟಿವ್ ಸೈಲೆನ್ಸರ್ ಅಳವಡಿಸಿಕೊಂಡು ಕರ್ಕಶ ಶಬ್ದ ಉಂಟಾಗುವ ರೀತಿಯಲ್ಲಿ ತನ್ನ ವಾಹನವನ್ನು ಚಲಾಯಿಸುತ್ತಿದ್ದಾನೆಂದು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಪೂರ್ವ ಸಂಚಾರ ಪೊಲಸ್ ಠಾಣೆಯ PSI ನವೀನಕುಮಾರ್ ಮಠಪತಿ ಮತ್ತು ಸಿಬ್ಬಂದಿಗಳಾದ ಸಂತೋಷ ಕೆ,ಹೆಚ್ ಅವರು ಪತ್ತೆ ಮಾಡಿದ್ದಾರೆ.
ಪೂರ್ವ ಸಂಚಾರ ಪೊಲಸ್ ಠಾಣೆಯ PSI ನವೀನಕುಮಾರ್ ಮಠಪತಿ ರಿಂದ ಬಿತ್ತು 82000/- ಸಾವಿರದ ಭಾರಿ ದಂಡ..!
ವಾಹನದ ಸವಾರ ರಿಯಾನ್ ಡಾಮಿವಿಕ್ ಬಿನ್ ಆನಂದ ಡಾಮಿವಿಕ್(22) ರಾಗಿಗುಡ್ಡ ಶಿವಮೊಗ್ಗ ಈತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದು, ನ್ಯಾಯಾಲಯ ಇಂದು ಒಟ್ಟು 8200 ರೂ. ದಂಡ ವಿಧಿಸಿದೆ.