ಹೊಸದುರ್ಗ ತಾಲೂಕಿನ ಬಾಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನ 25 ಕೋಟಿ ರೂಪಾಯಿಗಳ ಅನುದಾನದಲ್ಲಿ 85 ಲಕ್ಷ ರು ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ, ಕರ್ನಾಟಕ ರಾಜ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ನೇಮದ ಅಧ್ಯಕ್ಷ ಬಿ.ಜೆ.ಗೋವಿಂದಪ್ಪ ಭೂಮಿ ಪೂಜ ನೆರವೇರಿಸಿದರು.
ಭಾಗೂರಿನ ಶ್ರೀ ಮೈಲಾರಲಿಂಗೇಶ್ವರ ದೇವಾಲಯದ ಪ್ರಾರ್ಥನಾ ಮಂದಿರ 15 ಲಕ್ಷ ರೂ, ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದ ಮಂದಿರ 25 ಲಕ್ಷ ರೂ, ಶ್ರೀರಂಗಪುರದ ಗ್ರಾಮದ ಭೂತಪ್ಪನ ದೇವಾಲಯದ ಪ್ರಾರ್ಥನಾ ಮಂದಿರಕ್ಕೆ 6 ಲಕ್ಷ ರೂ, ಭಾಗೂರಿನ ಪೊಲೀಸ್ ಸ್ಟೇಷನ್ ಮುಂಭಾಗದ ರಸ್ತೆ ಕಾಮಗಾರಿ ನಿರ್ಮಾಣಕ್ಕೆ 15 ಲಕ್ಷ ರೂ, ಐಲಾಪುರದ ಶಾಲೆಯ ಮುಂಭಾಗದ ಚರಂಡಿ ನಿರ್ಮಾಣಕ್ಕೆ 15 ಲಕ್ಷ ರೂ ಕಾಮಗಾರಿಗೆ ಭೂಮಿ ಪೂಜ ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಭಾಗೂರಿನ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರು ಮತ್ತು ಸ್ಥಳೀಯ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.