Breaking
Mon. Dec 23rd, 2024

ರಾಷ್ಟ್ರೀಯ ತನಿಖಾ ದಳ ಮತ್ತು ಬೆಂಗಳೂರು ಸಿಸಿಬಿ ಅಧಿಕಾರಿಗಳು ಶಂಕಿತ ಬಾಂಬರ್ ನನ್ನು ಹುಡುಕುತ್ತಿದ್ದಾರೆ, ಅವನ ಬಗ್ಗೆ ಒಂದಷ್ಟು ಸುಳಿವು ಸಿಕ್ಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ..

ಬೀದರ್: ಬೀದರ ಜಿಲ್ಲೆ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಕಳೆದ ವಾರ ಬೆಂಗಳೂರು ನಗರದ ಬ್ರೂಕ್ಫೀಲ್ಡ್ ಪ್ರದೇಶದಲ್ಲ್ಲಿರುವ ದಿ ರಾಮೇಶ್ವರಂ ಕೆಫೆಯಲ್ಲಿ  ಐಈಡಿ ಬಾಂಬ್ ಇಟ್ಟು ಟೈಮರ್ ಮೂಲಕ ಸ್ಫೋಟಿಸಿದ ಶಂಕಿತ ಬಾಂಬರ್   ಒಂದಷ್ಟು ಸುಳಿವು ಸಿಕ್ಕಿದೆ ಎಂದು ಹೇಳಿದರು.

ಬಾಂಬ್ ಸ್ಫೋಟಗೊಂಡು ಒಂದು ವಾರಕ್ಕಿಂತ ಜಾಸ್ತಿ ಸಮಯವಾದರೂ ಶಂಕಿತನ ಬಗ್ಗೆ ಯಾವುದೇ ಸುಳಿವಿಲ್ಲವಲ್ಲ ಸರ್ ಅಂತ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ರಾಷ್ಟ್ರೀಯ ತನಿಖಾ ದಳ ಮತ್ತು ಬೆಂಗಳೂರು ಸಿಸಿಬಿ ಅಧಿಕಾರಿಗಳು ಶಂಕಿತ ಬಾಂಬರ್ ನನ್ನು ಹುಡುಕುತ್ತಿದ್ದಾರೆ, ಅವನ ಬಗ್ಗೆ ಒಂದಷ್ಟು ಸುಳಿವು ಸಿಕ್ಕಿದೆ ಆದರೆ ಆ ಮಾಹಿತಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಳ್ಳಲಾಗಲ್ಲ ಎಂದು ಹೇಳಿದರು.

ಎನ್ ಐಎ ಅಧಿಕಾರಿಗಳು ಶಂಕಿತನನ್ನು ಬಳ್ಳಾರಿಯಲ್ಲಿ ಹುಡುಕಾಡಿದ್ದಾರೆ. ಅರಣ್ಯ ಖಾತೆ ಸಚಿವ ಈಶ್ವರ್ ಖಂಡ್ರೆ ಮತ್ತು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಅವರನ್ನು ಮುಖ್ಯಮಂತ್ರಿಯವರೊಂದಿಗೆ ನೋಡಬಹುದು.

 

Related Post

Leave a Reply

Your email address will not be published. Required fields are marked *