ರಾಯಚೂರು : 34ನೇ ದಿನ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಮುಂದುವರೆದ ಹೋರಾಟದ ವಾಲ್ಮೀಕಿ ಸಮಾಜ ರಾಯಚೂರು ಜಿಲ್ಲೆ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಸಂಬಂಧಪಟ್ಟ 15 ಪ್ರಮುಖ ಬೇಡಿಕೆಯಾಗಿದ್ದು, ಈ ಹೋರಾಟದಲ್ಲಿ ಯಾವ ಅಧಿಕಾರಿಗಳು ಮತ್ತು ನಮ್ಮ ಜನಾಂಗದ ಸ್ವಾಮೀಜಿಗಳು ಸಹ ಈ ಹೋರಾಟಕ್ಕೆ ಕೈಜೋಡಿಸದೆ ಇರುವುದು ವಿಪರ್ಯಾಸವೇ ಸರಿ.
ಇದೇ ತಿಂಗಳು 11 ನೇ ತಾರೀಕು ಸೋಮವಾರ ಬೆಳಗ್ಗೆ 10 ಗಂಟೆಗೆ ರಾಯಚೂರು ನಗರದ ಡಿಸಿ ಕಚೇರಿಗೆ ಹೋಗಿ ಕರ್ನಾಟಕದ ವಾಲ್ಮೀಕಿ ಜನಾಂಗದ ಸಂಘ ಸಂಸ್ಥೆಯವರು ಎಲ್ಲರೂ ಸೇರಿ ವೆಂಕಟೇಶ್ ನಾಯಕ ಅಸ್ಕಿ ಹಾಳ ಅವರ ಮುಂದಾಳತ್ವದಲ್ಲಿ ನೈಜ ನಾಯಕ ಬೇಡರ ಪಡೆಯ ಸಹಯೋಗದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿ ಮನವಿ ಕೊಡಲಾಗುವುದು.
ಕರ್ನಾಟಕದಲ್ಲಿರುವ ಎಲ್ಲಾ ವಾಲ್ಮೀಕಿ ಜನಾಂಗದ ಕಿರಿಯರು ಬುದ್ಧಿಜೀವಿಗಳು ಹೋರಾಟಗಾರರು ಕಾನೂನು ಸಲಹೆಗಾರರು ನಕಲಿ ಪ್ರಮಾಣ ಪತ್ರಗಳ ವಿರುದ್ಧ ಹೋರಾಟ ಮಾಡುತ್ತಿರುವವರು. ಸಮಾಜದ ಬಂಧುಗಳು ಸಮಾಜದ ಹಿತೈಷಿಗಳು ಮಾರ್ಚ್ 11 ಸೋಮವಾರ ಬೆಳಗ್ಗೆ 10 ಗಂಟೆಗೆ ರಾಯಚೂರು ಡಿಸಿ ಕಚೇರಿಯ ಮುಂಭಾಗ ಬರಬೇಕಾಗಿ ವಿನಂತಿಸಿಕೊಳ್ಳುತ್ತೇವೆ . ಈ ಕಾರ್ಯಕ್ರಮವನ್ನು ಉದ್ದೇಶಿಸಿ ವೆಂಕಟೇಶ್ ನಾಯಕ ಅಸ್ಕಿಹಾಳ ರಾಯಚೂರು ಜಿಲ್ಲಾ ವಾಲ್ಮೀಕಿ ಸಮಾಜ ಸೇವಕರು 37ನೇ ದಿನಕ್ಕೆ ಮಾರ್ಚ್ 11 ದಿನಾಂಕದಂದು ಬೃಹತ್ ಹೋರಾಟದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತಮ್ಮ ಬೇಡಿಕೆಯನ್ನು ಮಂಡಿಸಲು ಎಲ್ಲ ನಾಯಕ ಜನಾಂಗದವರು ಆಗಮಿಸಬೇಕೆಂದು ಈ ಸಭೆಯಲ್ಲಿ ಉದ್ದೇಶಿಸಿ ಮಾತನಾಡಿದರು.
ಅಂದು ಕರ್ನಾಟಕದಲ್ಲಿರುವ ಎಲ್ಲಾ ವ್ಯಕ್ತಿಗಳು ಸಮಾಜ ಸೇವಕರು ಸಮಾಜದ ಹೆನ್ನತಿರುವ ಮೀಸಲಾತಿ ಕ್ಷೇತ್ರದಲ್ಲಿ ಗೆದ್ದಿರುವ ವ್ಯಕ್ತಿಗಳು ಸೋತಿರುವ ವ್ಯಕ್ತಿಗಳು ಮಠಾಧಿಪತಿಗಳು 21 ಜನ ಮಠಾಧೀಶರು ಬರಬೇಕಾಗಿ ನೈಜ ನಾಯಕ ಬೇಡರ ಪಡೆ ರಾಜ್ಯ ಅಧ್ಯಕ್ಷ ಕರಿಯಪ್ಪ ನಾಯಕ ದಾವಣಗೆರೆ ಹಾಗೂ ರಾಜ್ಯದ ಎಲ್ಲಾ ಪದಾಧಿಕಾರಿಗಳು ಎಲ್ಲಾ ಜಿಲ್ಲೆಯ ಪದಾಧಿಕಾರಿಗಳು ವಿನಂತಿಸಿಕೊಳ್ಳುತ್ತಾರೆ.