ಬೆಳಗಾವಿ : ಇಂದಿನ ಯುವಕರು ಡಾಕ್ಟರ್, ಯುವಕರು ಸೇರಿದಂತೆ ಬೇರೆ ಬೇರೆ ಅಧ್ಯಯನ ಮಾಡಿ ಹಳ್ಳಿಯಲ್ಲಿರುವವರು ಕೃಷಿ ಕಡೆ ಗಮನ ಹರಿಸುವುದು ಅಪಾಯಕಾರಿ ಬೆಳವಣಿಗೆ, ಕೃಷಿಯಲ್ಲಿ ಆಸಕ್ತಿ ಹುಟ್ಟಿಸುವ ಅವಶ್ಯಕತೆ ಇದ್ದಿದ್ದು, ಯುವಕರು ಬೇರೆ ಬೇರೆ ವಿಷಯದಲ್ಲಿ ಅಧ್ಯಯನ ಮಾಡಿ, ಆದರೆ ರಜೆ ವೇಳೆಯಲ್ಲಿ ಹಳ್ಳಿಗೆ ಬಂದು ಕೃಷಿ ಭೂಮಿಯ ಬಗ್ಗೆ ಗಮನ ಹರಿಸಿ ಭೂಮಿ ಸೇವೆ ಮಾಡಿ ಎಂದು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಶುಕ್ರವಾಗಿ ಇಲ್ಲಿನ ಸಿಪಿಎಡ್ ಮೈದಾನದಲ್ಲಿ ಆಧುನಿಕ, ಜಿಪಂ, ಇಲಾಖೆ ಹಾಗೂ ರೋಟರಿ ಕ್ಲಬ್ ಆಫ್ ಬೆಳಗಾಂ ಸೆಂಟ್ರಲ್ ಸಂಸ್ಥೆಯಲ್ಲಿ ಐದು ದಿನಗಳ ಕಾಲ ನಡೆಯುವ ಕೃಷಿ ಉತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ಇಂದಿನ ಯುವಕರಲ್ಲಿ ಕೃಷಿಯ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ, ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿ ಕೃಷಿಗೆ ಸಹಕಾರಿಯಾಗುವ ಸೌಲಭ್ಯದ ಬಗ್ಗೆ ರೋಟರಿ ಕ್ಲಬ್ ಆಫ್ ಸೆಂಟ್ರಲ್ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ವಿಎಚ್ ಪಿಯ ಪ್ರಮುಖರಾದ ವಿಠ್ಠಲ್ ಜಿ. ಮಾತನಾಡಿ, ಹುಕ್ಕೇರಿ ಹಿರೇಮಠದ ಶ್ರೀಗಳು ಕೃಷಿಯ ಬಗ್ಗೆ ತುಂಬಾ ಆಸಕ್ತಿ ವಹಿಸಿದ್ದಾರೆ. ಎಲ್ಲರಿಗೂ ಮಾರ್ಗದರ್ಶನ ಮಾಡುತ್ತ ಬಂದಿದ್ದಾರೆ. ಮಂಜುನಾಥ ಅಳವಾಣಿ ಅವರು ರೋಟರಿ ಕ್ಲಬ್ ಆಫ್ ಬೆಳಗಾಂ ಸೆಂಟ್ರಲ್ ಅಧ್ಯಕ್ಷರಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ.
ಬೆಳಗಾವಿಯಲ್ಲಿ ಕೃಷಿ ಉತ್ಸವ ಮಾಡುವುದರ ಮೂಲಕ ಈ ಭಾಗದ ಜನರಿಗೆ ವಿಶೇಷ ಮಾರ್ಗದರ್ಶನ ನೀಡುತ್ತಿದೆ ಎಂದು ಸಂತಸ ತಂದಿದೆ.
ರೋಟರಿ ಕ್ಲಬ್ ಆಫ್ ಬೆಳಗಾಂ ಸೆಂಟ್ರಲ್ ಅಧ್ಯಕ್ಷ ಮಂಜುನಾಥ ಅಳವಣಿ ಮಾತನಾಡಿ, ಹುಕ್ಕೇರಿ ಚಂದ್ರಶೇಖರ ಸ್ವಾಮೀಜಿ ಅವರು ಬೆಳಗಾವಿ ಕೃಷಿ ಉತ್ಸವಕ್ಕೆ ತಾವೇ ಆಗಮಿಸಿದ ಕೃಷಿ ಬಗ್ಗೆ ನಮಗೆ ಹೆಚ್ಚಿನ ಮಾರ್ಗದರ್ಶನ ನೀಡಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿರುವ ಎಲ್ಲಾ ಮಠಾಧೀಶರು ಮಾ.11ರವರೆಗೆ ಜರಗುವ ಕೃಷಿ ಉತ್ಸವದಲ್ಲಿ ಭಾಗವಹಿಸಿ ಮಾರ್ಗದರ್ಶನ ಮಾಡುವಂತೆ ಕೇಳಿಕೊಳ್ಳುತ್ತೇವೆ.
ಮಾಜಿ ಶಾಸಕ ಅರವಿಂದ ಪಾಟೀಲ, ಕಾರ್ಯದರ್ಶಿ ಅಭಯ ಜೋಶಿ, ದಿನೇಶ ಕಾಳೆ, ಅಜಯ ಹೆಡಾ, ಅಮಿತ ಪಾಟೀಲ, ಸಂತೋಷ ಗವಳಿ, ಕಿರಣ ಬೆನಕಟ್ಟಿ, ಧರಶೆಟ್ಟಿ, ಪ್ರಸನ್ನ ದೊಡಮನಿ, ಅಭಯ ಶಿಂಧೆ, ದಾಮೋದರ ಮಾದವ, ಶಕೀಲ್ ಶೇಖ ಅಲಿ, ವಿಠ್ಠಲ್ ಮಾಳಿ, ವಿದ್ಯಾ ಮುರಕುಂಬಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.