Breaking
Mon. Dec 23rd, 2024

ಬಳ್ಳಾರಿ ಹೊಸ ಬಸ್ ನಿಲ್ದಾಣದಲ್ಲೇ ಮಾರ್ಚ 1 ರ ರಾತ್ರಿ 9 ಗಂಟೆ ಸುಮಾರಿಗೆ ಶಂಕಿತ ಓಡಾಡಿದ್ದಾನೆ…!

ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ (Rameshwaram Cafe) ಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಹೊಸ ಬಸ್ ನಿಲ್ದಾಣದಲ್ಲೇ ಮಾರ್ಚ 1 ರ ರಾತ್ರಿ 9 ಗಂಟೆ ಸುಮಾರಿಗೆ ಶಂಕಿತ ಓಡಾಡಿದ್ದಾನೆ.

ಬಸ್ ನಿಲ್ದಾಣದಲ್ಲಿ ಕೆಲ ಕಾಲ ಓಡಾಡಿರುವ ಶಂಕಿತ ಬಳಿಕ ಆಟೋ ಹತ್ತಿ ಹೋಗಿದ್ದಾನೆ. ಹೀಗಾಗಿ ಆಟೋ ಚಾಲಕನನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬಳ್ಳಾರಿ ನಗರದ ರಾಯಲ್ ಸರ್ಕಲ್ ಮುಖಾಂತರ ಕೌಲ ಬಜಾರ್‌ಗೆ ಬಾಂಬರ್ ಹೋಗಿದ್ದಾನೆ. ಲೈಟ್ ಬ್ಲೂ ಕಲರ್ ಟಿ ಶಟ್೯, ಬ್ಲಾಕ್ ಪ್ಯಾಂಟ್, ಬ್ಲಾಕ್ ಬ್ಯಾಗ್, ಮುಖಕ್ಕೆ ಮಾಸ್ಕ, ಕೈಯಲ್ಲಿ ವಾಚ್, ನೀಲಿ ಮತ್ತು ಬಿಳಿ ಮಿಶ್ರಿತ ಶ್ಯೂವನ್ನು ಬಾಂಬರ್ ಹಾಕಿದ್ದಾನೆ.

ಬಳ್ಳಾರಿ ಮೂಲದ ಮಿನಾಜ್ ಅಲಿಯಾಸ್ ಸುಲೇಮಾನ್, ಬಳ್ಳಾರಿಯ ಸೈಯದ್ ಸಮೀರ್, ಮುಂಬೈನ ಅನಾಸ್ ಇಕ್ಬಾಲ್ ಶೇಕ್ ಹಾಗೂ ದೆಹಲಿಯ ಶ್ಯಾನ್ ರೆಹಮಾನ್ ಅಲಿಯಾಸ್ ಹುಸೇನ್ ಎಂಬ ನಾಲ್ವರನ್ನು ವಶಕ್ಕೆ ಪಡೆದ ಎನ್ಐಎ ರಾಮೇಶ್ವರಂ ಕೆಫೆಯ ಸ್ಫೊಟದಲ್ಲಿ ಇವರ ಪಾತ್ರ ಇತ್ತಾ ಎಂಬ ವಿಚಾರಣೆ ಆರಂಭಿಸಿದೆ.

ಸೈಯದ್‌ ಸಮೀರ್‌, ಮಿನಾಜ್ ಅಲಿಯಾಸ್‌ ಸುಲೇಮಾನ್‌ನ ಸಹಚರ ಆಗಿದ್ದ. ಕಳೆದ ಅಕ್ಟೋಬರ್‌ನಲ್ಲಿ ರಸಗೊಬ್ಬರ ಅಂಗಡಿಯೊಂದರಲ್ಲಿ ಒಂದು ಕೆಜಿ ಅಮೋನಿಯಂ ನೈಟ್ರೇಟ್‌ ಖರೀಸಿದ್ದರು. ಸ್ಫೋಟಕ್ಕೆ ಈ ವಸ್ತುವನ್ನ ಬಳಸಲಾಗುತ್ತೆ. ಬಳ್ಳಾರಿಯ ಕೌಲ್‌ಬಜಾರ್‌ನಲ್ಲಿರುವ ಶಾಪ್‌ನಲ್ಲೇ ಅಮೋನಿಯಂ ನೈಟ್ರೇಟ್ ಖರೀಸಿದ್ದರು. ಹೀಗಾಗಿ ಕೌಲ್‌ಬಜಾರ್‌ನಲ್ಲೇ ಬೀಡು ಬಿಟ್ಟಿರುವ NIA ಹತ್ತಾರು ಶಾಪ್‌ಗಳಲ್ಲಿ ವಿಚಾರಣೆ ಮಾಡುತ್ತಿದೆ. ಸಮೀರ್‌ ಹಾಗೂ ಸುಲೇಮಾನ್‌ ಹಿಸ್ಟರಿ ಭಯಾನಕವಾಗಿದೆ.

 

Related Post

Leave a Reply

Your email address will not be published. Required fields are marked *