ಬೆಂಗಳೂರು : ಇಂದು ಎಲ್ಲೆಡೆ ಮಹಾಶಿವರಾತ್ರಿ ಸಂಭ್ರಮ ಮನೆ ಮಾಡಿದೆ. ಈ ಶುಭ ದಿನದಂದು ಅಸ್ಸಾಂ ಮೂಲದ ಪ್ರೇಮಿಗಳು ಒಂದಾಗಿದ್ದಾರೆ. ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಮರಸೂರಿನ ಓಂಕಾರೇಶ್ವರ ಸ್ವಾಮಿ ದೇವಾಲಯದಲ್ಲಿ ಅಸ್ಸಾಂ ಮೂಲದ ಚಂಜಿತ್ ಮಹತಿ(23), ಪಾಂಪಿ ಭೇಂಗ್ರಾ(21) ಅವರು ಸರಳವಾಗಿ ವಿವಾಹವಾಗಿದ್ದಾರೆ.
ಇಂದು ಎಲ್ಲೆಡೆ ಮಹಾಶಿವರಾತ್ರಿ ಸಂಭ್ರಮ ಮನೆ ಮಾಡಿದೆ. ಈ ಶುಭ ದಿನದಂದು ಅಸ್ಸಾಂ ಮೂಲದ ಪ್ರೇಮಿಗಳು ಒಂದಾಗಿದ್ದಾರೆ.
ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಮರಸೂರಿನ ಓಂಕಾರೇಶ್ವರ ಸ್ವಾಮಿ ದೇವಾಲಯದಲ್ಲಿ ಅಸ್ಸಾಂ ಮೂಲದ ಚಂಜಿತ್ ಮಹತಿ(23), ಪಾಂಪಿ ಭೇಂಗ್ರಾ(21) ಅವರು ಸರಳವಾಗಿ ವಿವಾಹವಾಗಿದ್ದಾರೆ.
ಅಸ್ಸಾಂನಿಂದ ಕೆಲಸ ಅರಸಿಕೊಂಡು ಯುವಕ,ಯುವತಿ ಬೆಂಗಳೂರಿಗೆ ಬಂದಿದ್ದಾರೆ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾರೆ.
ಚಂಜಿತ್ ಮಹತಿ, ಪಾಂಪಿ ಭೇಂಗ್ರಾ ಅವರ ವಿವಾಹಕ್ಕೆ ಸ್ನೇಹಿತರು, ಸಂಬಂಧಿಗಳು ಸೇರಿ ಹಲವರು ಭಾಗವಹಿಸಿದ್ದು, ಆಶೀರ್ವಾದ ಮಾಡಿದ್ದಾರೆ.