Breaking
Mon. Dec 23rd, 2024

ಪರಿಣಿತಿ ಪ್ರೆಗ್ನೆಂಟ್  ಸುದ್ದಿ ವೈರಲ್ ; ಸುದ್ದಿ ನಿಜನಾ ಎಂಬುದರ ಬಗ್ಗೆ ಪರಿಣಿತಿ ಟೀಮ್ ಸ್ಪಷ್ಟನೆ

ಬಾಲಿವುಡ್ ಬೆಡಗಿ ಪರಿಣಿತಿ ಚೋಪ್ರಾ  ಅವರು ರಾಜಕಾರಣಿ ರಾಘವ್ ಚಡ್ಡಾ  ಜೊತೆ ಮದುವೆಯಾಗಿ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಪರಿಣಿತಿ ನಟನೆಯ ‘ಅಮರ್ ಸಿಂಗ್ ಚಮ್ಕಿಲಾ’ ಚಿತ್ರದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿ ತಂಡಕ್ಕೆ ನಟಿ ಸಾಥ್ ನೀಡುತ್ತಿದ್ದಾರೆ. ಇದೀಗ ಪರಿಣಿತಿ ಪ್ರೆಗ್ನೆಂಟ್  ಸುದ್ದಿ ವೈರಲ್ ಆದ ಬೆನ್ನಲ್ಲೇ ತಂಡ ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿದೆ.

ಕೆಲ ದಿನಗಳಿಂದ ಪರಿಣಿತಿ ಚೋಪ್ರಾ ಪ್ರೆಗ್ನೆಂಟ್ ಆಗಿದ್ದಾರೆ ಎಂದು ಸುದ್ದಿಯಾಗಿತ್ತು. ಅದಕ್ಕೆ ಸರಿಯಾಗಿ ಲೂಸ್ ಟಾಪ್ ಧರಿಸಿ ಪರಿಣಿತಿ ಕಾಣಿಸಿಕೊಂಡಿದ್ದರು. ಈ ಸುದ್ದಿಗೆ ಪರಿಣಿತಿ ಲುಕ್ ಮತ್ತಷ್ಟು ಪುಷ್ಠಿ ನೀಡಿತ್ತು. ಈ ಸುದ್ದಿ ನಿಜನಾ ಎಂಬುದರ ಬಗ್ಗೆ ಪರಿಣಿತಿ ಟೀಮ್ ಸ್ಪಷ್ಟನೆ ಕೊಟ್ಟಿದೆ. ನಟಿಯ ಪ್ರೆಗ್ನೆಂಟ್ ಸುದ್ದಿ ಸುಳ್ಳು ಎಂದಿದ್ದಾರೆ.

ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ  ಶೀಘ್ರದಲ್ಲೇ ಲಂಡನ್‌ಗೆ ತೆರಳಲಿದ್ದಾರೆ. ಅದರ ತಯಾರಿಯಲ್ಲಿ ನಟಿ ಬ್ಯುಸಿಯಿದ್ದಾರೆ ಎಂದು ತಂಡ ಮಾಹಿತಿ ನೀಡಿದ್ದಾರೆ.

ವಿಮಾನ ನಿಲ್ದಾಣಕ್ಕೆ ಎಂಟ್ರಿ ಕೊಟ್ಟಾಗ ಬಿಳಿ ಶರ್ಟ್ಸ್ ಮತ್ತು ಶಾಟ್ಸ್ ಅನ್ನು ನಟಿ ಧರಿಸಿದ್ದರು. ಡ್ರೆಸ್ ತುಂಬಾ ಲೂಸ್ ಆಗಿತ್ತು. ನಿಧಾನವಾಗಿ ನಡೆಯುತ್ತಾ ಪಾಪರಾಜಿಗಳಿಗೆ ನಟಿ ಸ್ಮೈಲ್ ಮಾಡಿದ್ದರು. ಪರಿಣಿತಿ ಲುಕ್ ನೋಡಿದ್ರೆ ಪ್ರೆಗ್ನೆಂಟ್ ಎಂದೇ ಹೇಳಲಾಗಿತ್ತು. ನಟಿ ಪ್ರೆಗ್ನೆಂಟ್ ಆದ್ರಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದರು.

ಹಲವು ವರ್ಷಗಳು ಪ್ರೀತಿಸಿ ಕಳೆದ ವರ್ಷ ಸೆ.24ರಂದು ಉದಯ್‌ಪುರದಲ್ಲಿ ಅದ್ಧೂರಿಯಾಗಿ ಪರಿಣಿತಿ-ರಾಘವ್ ಮದುವೆಯಾಗಿದ್ದಾರೆ.

Related Post

Leave a Reply

Your email address will not be published. Required fields are marked *