ಚನ್ನಗಿರಿ : ತಾಲೂಕಿನ ದೇವರಹಳ್ಳಿ ಗ್ರಾಮದಲ್ಲಿ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ದೇವಸ್ಥಾನ ಮತ್ತು ಮುಜರಾಯಿ ಹಾಗೂ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಮಹಾ ಶಿವರಾತ್ರಿ ಪ್ರಯುಕ್ತ ನವ ವಿವಾಹ ಕಾರ್ಯಕ್ರಮವನ್ನು ಉದ್ಘಾಟನೆಯೊಂದಿಗೆ ಪ್ರಾರಂಭಿಸಿದರು.
ಚನ್ನಗಿರಿ ವಿಧಾನಸಭಾ ಕ್ಷೇತ್ರದ ದೇವರಹಳ್ಳಿ ಗ್ರಾಮದಲ್ಲಿರುವ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಮಾಡುವುದಾಗಿ ಹಾಗೂ ಎ ಗ್ರೇಟ್ ದೇವಸ್ಥಾನಗಳಲ್ಲಿ ಪ್ರತಿ ತಿಂಗಳು ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಆದ್ಯತೆ ನೀಡುವುದು. ಮತ್ತು ಪ್ರತಿ ಹಳ್ಳಿಗಳಿಗೂ ನೀರು ಬರುವಂತೆ ಮತ್ತು ಏನಂತ ಕೆರೆಗಳಿಗೆ ನೀರು ತುಂಬಿಸುವ ಕೆಲಸವನ್ನು ಮಾನ್ಯ ಶಾಸಕರಾದ ಬಸವರಾಜ್ ವಿ ಅವರು ಕಾರ್ಯಕ್ರಮದಲ್ಲಿ ಪ್ರತಿಜ್ಞೆಯನ್ನು ಮಾಡಿದರು.
ದೇವನಹಳ್ಳಿ ಗ್ರಾಮಸ್ಥರ ಜೊತೆಯಲ್ಲಿ ಶಾಸಕರು ಯಾವಾಗಲೂ ಇರುವುದಾಗಿ ರೈತರ ಕೆಲಸವನ್ನು ಚಾಚು ತಪ್ಪದೆ ಮಾಡುತ್ತೇವೆ. ರೈತರ ಕೆಲಸವೇ ನಮ್ಮ ಕೆಲಸ ಈ ಹಿಂದೆ ಇದ್ದಾ ಬಿಜೆಪಿ ಸರ್ಕಾರವು ರೈತರಿಗೆ ತುಂಬಾ ಅನ್ಯಾಯ ಮಾಡಿದೆ ಅದರಲ್ಲೂ ಕೆರೆಗಳಿಗೆ ನೀರು ತುಂಬಿಸುವ ಕಾರ್ಯದಲ್ಲಿ ವಿದ್ಯುತ್ತನ್ನು ಕಡಿತ ಮಾಡಿದ್ದಾರೆ ಆದರೆ ಜನರ ಪರವಾಗಿ ನಾವು ನಮ್ಮ ಸರ್ಕಾರ ಯಾವಾಗಲೂ ಇದ್ದೇ ಇರುತ್ತದೆ ಮುಂದೇನೂ ಇರುತ್ತೆ ಎಂದು ಶಾಸಕರು ತಿಳಿಸಿದರು.
ಕಾಂಗ್ರೆಸ್ ಸರ್ಕಾರವು ಜನಪರ ಸರ್ಕಾರ ಜನರಿಗಾಗಿ ಇರುವ ಸರ್ಕಾರ ಬಡ ಕುಟುಂಬಗಳಿಗೆ ನೆರವಾಗಲೆಂದು ಐದು ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಈ ಕಾರ್ಯಕ್ರಮದಿಂದ ಬಡವರಿಗೆ ತುಂಬಾ ಉಪಯುಕ್ತವಾಗಿದೆ ಎಂದು ಹೇಳಿದರು.
ದೇವನಹಳ್ಳಿ ಗ್ರಾಮಸ್ಥರ ಕೆರೆಗಳು ಸುಮಾರು ವರ್ಷಗಳಿಂದ ಒತ್ತೋವರೆ ಮಾಡಿದ್ದಾರೆ ಇದಕ್ಕೆ ಯಾವುದೇ ಸರ್ಕಾರವು ರೈತರಿಗೆ ಪರಿಹಾರ ನೀಡಿರುವುದಿಲ್ಲ ಆದ್ದರಿಂದ ಮಾನ್ಯ ಶಾಸಕರು ಕೆರೆಗಳ ಒತ್ತುವರಿಯಾಗಿರುವ ರೈತರಿಗೆ ಪರಿಹಾರವನ್ನು ಕೊಡಿಸುವುದಾಗಿ ಶಪಥ ಮಾಡಿದರು. ಹೀಗಾಗಲೇ ಮೂರು ಗ್ರಾಮಗಳ ಫೈಲ್ ಅನ್ನು ಕ್ಯಾಬಿನೆಟ್ ವರೆಗೆ ತೆಗೆದುಕೊಂಡ ಹೆಗ್ಗಳಿಕೆ ಮಾನ್ಯ ಶಾಸಕರಿಗೆ ಸೇರುತ್ತದೆ.
ಈ ಕಾರ್ಯಕ್ರಮದಲ್ಲಿ ಹೊಸದಾಗಿ ಮದುವೆಯಾಗಿರುವ ನವ ಜೋಡಿಗಳಿಗೆ ಯಾವುದೇ ರೀತಿಯ ಮನಸ್ತಾಪ ಮಾಡಿಕೊಳ್ಳದೆ ಕಷ್ಟ – ನಷ್ಟ, ನೋವು ನಲಿವು, ಸಮನಾಗಿ ತೆಗೆದುಕೊಂಡು ತಮ್ಮ ಜೀವನವನ್ನು ಮುಂದುವರಿಸಿಕೊಂಡು ಹೋಗಬೇಕು. ನವ ದಂಪತಿಗಳ ಮೊದಲನೇ ಮಗು ಗಂಡು ಆಗಲಿ ಎಂದು ಆಶಿಸುತ್ತಾ ಕಾರ್ಯಕ್ರಮ ಭಾಷಣವನ್ನು ಮುಕ್ತಾಯ ಗೊಳಿಸಿದರು.
ಚನ್ನಗಿರಿ ವಿಧಾನಸಭಾ ಕ್ಷೇತ್ರದ ದೇವರಹಳ್ಳಿ ಗ್ರಾಮದಲ್ಲಿರುವ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ದೇವಸ್ಥಾನ ಸುಕ್ಷೇತ್ರ ದೇವರಹಳ್ಳಿ ಇಲ್ಲಿ ಮುಜರಾಯಿ ಹಾಗೂ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಶಿವರಾತ್ರಿ ಪ್ರಯುಕ್ತ ಆಯೋಜಿಸಲಾಗಿದ್ದ ಎರಡು ನವ ಜೋಡಿಗಳಿಗೆ ವಿವಾಹ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರಾದ ಬಸವರಾಜು ವಿ ಶಿವಗಂಗಾ ಇವರು ಭಾಗವಹಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾದ ಯಾರ್ರಿ ಸ್ವಾಮಿ , ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ದೇವರ ಹಳ್ಳಿ ಗ್ರಾಮಸ್ಥರು ವಿವಾಹ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.