Breaking
Mon. Dec 23rd, 2024

ಲಂಕೇಶ್ ಪತ್ರಿಕೆ ಪ್ರಭಾವ ಹೇಗಿತ್ತು ಎಂದರೆ ಹೋದವರು ಜಾತಕ ಪಕ್ಷಿಯಂತೆ ಕಾದು ಅವರ ಪತ್ರಿಕೆ ಓದುತ್ತಿದ್ದರು ಜಾಹೀರಾತು ಇಲ್ಲದೆ ಪತ್ರಿಕೆ ನಡೆಸಿದ ಹೆಗ್ಗಳಿಕೆ ; ಪ್ರಗತಿಪರ ಚಿಂತಕ ಯಾದವ ರೆಡ್ಡಿ ಸಮರ್ಥನೆ..!

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ ಮತ್ತೆ ಮತ್ತೆ ಲಂಕೇಶ್ ಮೇಷ್ಟ್ರು ಕಾರ್ಯಕ್ರಮದಡಿಯಲ್ಲಿ ತಮ್ಮ ಬರಹ ಮೂಲಕ ಒಂದು ತಲೆಮಾರು ಎಚ್ಚರಿಸಿ  ಸಾಹಿತ್ಯವಾಗಿ ಬರಹಗರನ್ನಾಗಿ ಬೆಳೆಸಿದವರು ಪತ್ರಕರ್ತರಾಗಿ ನೇರ ನಡೆ-ನುಡಿಯಿಂದ ಸಹಕಾರಗಳಿಸಿದ ಬಿಸಿ ತುಪ್ಪವಾಗಿದ್ದರು.

ತಮ್ಮ ಟಾಬ್ಲೆಟ್ ಪತ್ರಿಕೆಗೆ ಹೊಸ ಸ್ವರೂಪ ಆಯಾಮ ನೀಡಿದರು ಈ ಕಾಲಘಟ್ಟದ ಪತ್ರಕರ್ತರು ಬರಹಗಾರರು ಲಂಕೇಶ್ ಅವರನ್ನು ಓದಿಕೊಳ್ಳಬೇಕು. ಲಂಕೇಶ್ ವಿಚಾರ ವೇದಿಕೆ ರೂಪಿಸಿದ್ದೆವು ಅದಕ್ಕೆ ಡಾ. ಬಿ.ಎಂ. ಶರ ಬೇಂದ್ರೆಯ್ಯ ಒತ್ತಾಸೆಯಾಗಿ, ಇಲ್ಲಿ ಅನೇಕ ವಿಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಿನ್ನೆಲೆಯಲ್ಲಿ ಅದು ಸ್ಥಗಿತಗೊಂಡಿದ್ದು ಬೇಸರದ ವಿಚಾರ ಎಂದರು.

ಹಿರಿಯ ಪತ್ರಕರ್ತ ಚೆಕಪ್ನಳ್ಳಿ ಷಣ್ಮುಖಪ್ಪ ಮಾತನಾಡಿ ಲಂಕೇಶ್ ಅವರು ನನ್ನ ನೋಡಿ ಬದುಕಿನ ಆಲೋಚನೆ ಕ್ರಮವನ್ನೇ ಬದಲಾಯಿಸಿದವರು ಅವರು ಕಟ್ಟಿದ ಪ್ರಗತಿ ರಂಗದ ಜೊತೆ ನನ್ನ ಒಡನಾಟ ಇತ್ತು ಇಡೀ ಶಿವಮೊಗ್ಗ ಆರ್ ಎಸ್ ಎಸ್ ನ ಭದ್ರಕೋಟೆಯಾಗಿತ್ತು ಅದನ್ನು ಮೊದಲ ಬಾರಿಗೆ ಛಿದ್ರ ಮಾಡಿದ್ದು ಲಂಕೇಶ್ ಅವರು.

ರಾಜಕೀಯ ಪಕ್ಷಗಳು ಪ್ರಗತಿರಂಗದ ಪ್ರಣಾಳಿಕೆಯನ್ನು ಅಳವಡಿಸಿಕೊಂಡು ಇಡೀ ಕರ್ನಾಟಕದ ಚಿತ್ರಣವೆ ಬದಲಾಗುತ್ತಿತ್ತು ತಮ್ಮ ಆಲೋಚನೆಯಿಂದ ನಾಡನ್ನು ಪ್ರಭಾವಿಸಿದ ಲಂಕೇಶ್ ಅವರು ಅಂಬೇಡ್ಕರ್ ಚಿಂತನೆಗಳಿಗೆ ದಲಿತ ಚಳುವಳಿಗಳನ್ನೇಕೆ ಮಹತ್ವ ಕೊಡಲಿಲ್ಲ ಎನ್ನುವ ಕೊರಗು ಇನ್ನು ಇದೆ ಎಂದರು.

ಉಪನ್ಯಾಸಕರಾದ ಡಾ. ಗುರುನಾಥ್ ಮಾತನಾಡಿ ಲಂಕೇಶ್ ಅವರು ಇಡೀ ಕರ್ನಾಟಕದ ಮೇಷ್ಟ್ರು ಆಗಿದ್ದರು. ಹುಟ್ಟು ಹಬ್ಬದ ನೆಪದಲ್ಲಿ ಸ್ಮರಿಸುವ ಇರುವುದು ಲಂಕೇಶ್ ಅವರು ತಮ್ಮ ಕೃಷಿ ಸಾಹಿತ್ಯ ಪತ್ರಕ ಕೃಷಿಯ ಮೂಲಕ ತಮಗೆ ಅರಿವಿಲ್ಲದೆ ನಾಡಿನಾದ್ಯಂತ ಆ ತಲೆಮಾರಿನ ಬರಹಗಾರರನ್ನು ಪ್ರಭಾವಿಸಿ ಬೆಳೆಸಿದರು. ರಾಜಕಾರಣ ಜಾತಿ ಕುರಿತ ಅವರ ಗ್ರಹಿಕೆಗಳು ಅಪರೂಪದ ಒಳನೋಟ ಹೊಂದಿದ್ದವು ಎಂದರು.

ಪ್ರಗತಿಪರ ಚಿಂತಕ ಜೆ ಯಾದವ ರೆಡ್ಡಿ ಮಾತನಾಡಿ ಲಂಕೇಶ್ ಪತ್ರಿಕೆ ಪ್ರಭಾವ ಹೇಗಿತ್ತು ಎಂದರೆ ಹೋದವರು ಜಾತಕ ಪಕ್ಷಿಯಂತೆ ಕಾದು ಅವರ ಪತ್ರಿಕೆ ಓದುತ್ತಿದ್ದರು ಜಾಹೀರಾತು ಇಲ್ಲದೆ ಪತ್ರಿಕೆ ನಡೆಸಿದ ಹೆಗ್ಗಳಿಕೆ ಅವರದು. ಕೊನೆ ದಿನಗಳವರೆಗೂ ಅವರ ಬರವಣಿಗೆ ನಿಲ್ಲಿಸಲಿಲ್ಲ ಪತ್ರಕರ್ತರು ಹೆಚ್ಚು ಓದಬೇಕು ಅನ್ನೋದನ್ನ ತಿಳಿಸಿದ ಲಂಕೇಶ್ ಎಲ್ಲ ಸಿದ್ದಾಂತ ಮೀರಿ ಅಪ್ಪಟ ಜೀವನ ಪ್ರತಿಯನ್ನು ಹೊಂದಿದ್ದರು,ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಮಲ್ಲಾಪುರ ಹರೀಶ್ ನಾಗರಾಜ್ ಶ್ರೇಷ್ಠಿ , ದ್ವಾರಕನಾಥ ನಾಗೇಶ್ ದುರ್ಗಾವರ, ವರದರಾಜ್, ಶಿವರಾಜ್, ರವಿಕುಮಾರ್ ಉಗ್ರಾಣ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Related Post

Leave a Reply

Your email address will not be published. Required fields are marked *