Breaking
Mon. Dec 23rd, 2024

ಹರಿಯಾಣ ಮೂಲದ ವ್ಯಾಪಾರಿಯ ಮೇಲೆ 30 ರಿಂದ 35 ಗುಂಡು ಹಾರಿಸಿ ಹತ್ಯೆ..!

ಚಂಡೀಗಢ : ಎಸ್ ಯು ವಿ ಕಾರಿನಲ್ಲಿ ಮಲಗಿದ್ದ ವ್ಯಾಪಾರಿ ಒಬ್ಬನನ್ನು ಕಾರುಣ್ಯ ಸುಮಾರು 35 ಸುತ್ತು ಗುಂಡು ಹಾರಿಸಿ ಹೊಂದಿರುವ ಘಟನೆ ಹರಿಯಾಣದ ಡಾಬಾವೊಂದರ ಪಾರ್ಕಿಂಗ್ ಸ್ಥಳದಲ್ಲಿ ನಡೆದಿದೆ.

ಭಾನುವಾರ ಬೆಳಗ್ಗೆ 8:30ರ ಸುಮಾರಿಗೆ ಹರಿಯಾಣದ ಮುರ್ತಾಲ್ ಗುಲ್ಯಾನ್ ಡಾಬದಲ್ಲಿ ಘಟನೆ ನಡೆದಿದ್ದು, ಗೊಹಾನಾದ ಸರಗ್ತಾಲ್ ಗ್ರಾಮದ ಸುಂದರ್ ಮಲ್ಲಿಕ್ 38 ಎಂದು ಗುರುತಿಸಲಾಗಿದೆ. ಈತ ಮಧ್ಯದ ವ್ಯಾಪಾರಿ ಎಂಬುದು ಪ್ರಾಥಮಿಕ ಮೂಲಗಳಿಂದ ತಿಳಿದುಬಂದಿದೆ.

ಇಬ್ಬರು ದುಷ್ಕರ್ಮಿಗಳು ಗುಂಡಿನ ಮಳೆ ತೋರಿಸಿದ ದೃಶ್ಯಾವಳಿ ಸಿಸಿಟಿವಿಯಲ್ಲಿ ಸರಿಯಾಗಿದೆ ಕಾರಿನಲ್ಲಿ ಕುಳಿತಿದ್ದ ವ್ಯಾಪಾರಿಯನ್ನು ಕೆಳಗೆ ಎಳೆಯುತ್ತಿದ್ದಂತೆ ಆತ ಇನ್ನೊಬ್ಬನಿಗೆ ಗುದ್ದಾಟಕ್ಕೆ ಎಳೆಯುತ್ತಾನೆ. ಅಷ್ಟರಲ್ಲಿ ಮತ್ತೊಬ್ಬ ದುಷ್ಕರ್ಮಿ ಏಕಾಏಕಿ ಗುಂಡು ಹಾರಿಸಿ ಹತ್ಯೆಗೈದಿದ್ದಾನೆ. ಘಟನೆ ತಿಳಿದ ಕೂಡಲೇ ಡಾಬಾ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸರು ಒಂದು ಕ್ಷಣಕ್ಕೆ ಶಾಕ್ ಗೆ ಒಳಗಾಗಿದ್ದರು. ದುಷ್ಕರ್ಮಿಗಳು ಸುಮಾರು (30) ರಿಂದ 35 ಸುತ್ತು ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಆರೋಪಿ ಪತ್ತೆಗಾಗಿ ಎಂಟು ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಅವರ ಕುಟುಂಬದ ಸದಸ್ಯರನ್ನು ವಿಚಾರಣೆಗೆ ನಡೆಸಲಾಗುವುದು ಎಂದು ಹಾಗೂ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸ ಅಧಿಕಾರಿ ಗೌರವ್ ರಾಜ್ ಪುರೋಹಿತ್ ಹೇಳಿದ್ದಾರೆ.

ಈ ಘಟನೆಯು ಗ್ಯಾಂಗ್ವಾರ್  ದೃಷ್ಟಿಕೋನ ಒಳಗೊಂಡಿಲ್ಲ ಅನ್ನೋದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.

ಕಳೆದ ಫೆಬ್ರವರಿ 26ರಂದು ಭಾರತೀಯ ಲೋಕದಳ ಹರಿಯಾಣ ಘಟಕದ ಅಧ್ಯಕ್ಷ ನಫೆ  ಸಿಂಗ್ ರಾಠಿ  ಅವರನ್ನು ಇದೇ ರೀತಿ ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿತ್ತು.

Related Post

Leave a Reply

Your email address will not be published. Required fields are marked *