Breaking
Tue. Dec 24th, 2024

ಪಕ್ಷ ಉಳಿಸಿಕೊಳ್ಳಲು‌ ಬಿಜೆಪಿಯೊಂದಿಗೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು : ಜೆಡಿಎಸ್-ಬಿಜೆಪಿ ಅಪವಿತ್ರ ಮೈತ್ರಿ ಮಾಡಿಕೊಂಡಿವೆ. ಮುಂದಿನ ಜನ್ಮ ಇದ್ದರೇ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೇಳಿದ್ದರು. ಈಗ ಪಕ್ಷ ಉಳಿಸಲು ಬಿಜೆಪಿ ಜೊತೆಗೆ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಬೆಂಗಳೂರಿನ ಸೂಲಿಕೆರೆ ಮೈದಾನದಲ್ಲಿ ನಡೆದ ಶಿಕ್ಷಕರ ಕೃತಜ್ಞತೆ ಸಭೆಯಲ್ಲಿ ಅವರು, ಕೋಮುವಾದಿಗಳ ಜೊತೆ ಹೋಗಲ್ಲ. ಅವರ ವಿರುದ್ಧ ಇರುತ್ತೇವೆ, ಅವರ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧೆ ನಡೆಯಲಿದೆ ಅಂದಿದ್ದರು. ಈಗ ಪಕ್ಷವನ್ನು ಉಳಿಸಿಕೊಳ್ಳಲು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು

ಶಿಕ್ಷಕರ ಚುನಾವಣೆ ಬಹಳ ಪ್ರಮುಖ ಚುನಾವಣೆ. ಈ ಚುನಾವಣೆ ಲೋಕಸಭೆ ಚುನಾವಣೆಯ ದಿಕ್ಸೂಚಿ ಚುನಾವಣೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.

ನರೇಂದ್ರ ಮೋದಿ ಹೆಸರಲ್ಲಿ ಗೆದ್ದು ಬಿಡುತ್ತೇವೆ ಅಂತ ಬಿಜೆಪಿ ನಾಯಕರು ಅಂದುಕೊಂಡಿದ್ದಾರೆ. ಪಿ ರಾಜೀವ್ ಹೇಳಿದ್ದ, ಅಭ್ಯರ್ಥಿ ಮುಖ್ಯವಲ್ಲ ಮೋದಿ ಹೆಸರಲ್ಲಿ ಗೆಲ್ಲುತ್ತೇವೆ ಎಂದಿದ್ದರು. ಆದರೆ ಈಗ ಏನಾಯ್ತು? ಎಂದು ಪ್ರಶ್ನಿಸಿದರು.

ಹೆಚ್ಡಿ ಕುಮಾರಸ್ವಾಮಿಯನ್ನು ಯಾರ ಅಧಿಕಾರದಿಂದ ಇಳಿಸಿದರೂ ಅವರ ಜೊತೆಯಲ್ಲೇ ಇದ್ದಾರೆ. ದೇವೇಗೌಡರು, ಅವರ ಕುಟುಂಬದ ರಾಜಕಾರಣ ಉಳಿಯಬೇಕಾದರೆ ಏನು ಬೇಕಾದರೂ ಮಾಡುತ್ತಾರೆ. ಪಕ್ಷ ಉಳಿಸುವ ಬಿಜೆಪಿ ಜತೆ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ. ನಾವು ಏನೇ ತೀರ್ಮಾನ ಮಾಡಿದರೂ ಜನ ಕಣ್ಣು ಮುಚ್ಚಿ ಬೆಂಬಲಿಸುತ್ತಾರೆ ಅಂದುಕೊಂಡಿದ್ದಾರೆ.

ನಮ್ಮ ಗೌಡರಿಗೆ ಅದೇನು ಆಗಿದ್ಯೋ’ ಗೊತ್ತಿಲ್ಲ. ಮೋದಿ ಗೆದ್ದರೆ ವಿದೇಶಕ್ಕೆ ಹೋಗುತ್ತೇನೆ ಅಂದಿದ್ದರು. ಈಗ ಅದೇನ ಹೊಗಳುವುದು, ಹಳೇ ಸಂಬಂಧ ಅಂತೇ. ನೆವರ್ ಎಕ್ಸಪೆಕ್ಟೆಡ್ ಫ್ರಾಂ ದೇವೇಗೌಡ. ಅವರು ಪ್ರಧಾನಿ. ಈ ರೀತಿ ಮಾಡುತ್ತಾರೆ ಅಂತ ಅಂದುಕೊಂಡಿರಲಿಲ್ಲ ಎಂದು ಹೇಳಿದರು.

ಕಳೆದ ವಿಧಾನಸಭೆಯಲ್ಲಿ ಪ್ರಧಾನಿ ಮೋದಿ ರಾಜ್ಯ ಪ್ರವಾಸ ಮಾಡಿದ್ದು, ಆದರೆ ಏನಾಯ್ತು, ನಾವು 136 ಸೀಟು ಗೆದ್ವಿ. ಇವರು 4 ವರ್ಷ ಲೂಟಿ ಮಾಡಿದ್ದಾರೆ. 28ಕ್ಕೆ 28 ಗೆದ್ದು ಬಿಡುತ್ತೇವೆ ಅಂತಿದ್ದಾರೆ. 2023-24 ರಲ್ಲಿ ಕರ್ನಾಟಕದಲ್ಲಿ 4 ಲಕ್ಷ 36 ಸಾವಿರ ಕೋಟಿ ತೆರಿಗೆ ಸಂಗ್ರಹವಾಗಿದೆ.

ರಾಜ್ಯಕ್ಕೆ ವಾಪಾಸ್ 50 ಸಾವಿರ ಕೋಟಿ ವಾಪಾಸ್ ಬಂದಿದೆ. ಅಂದರೆ 100 ರೂಪಾಯಿ ನೀಡಿದರೇ 13 ರೂ. ವಾಪಸ್ ಬರುತ್ತೆ. ನಮ್ಮ ದುಡ್ಡನ್ನು ಉತ್ತರ ಭಾರತದ ರಾಜ್ಯಗಳಿಗೆ ಕೊಡುತ್ತಾರೆ. ಕೊಡಿ ನಾನೇನು ಬೇಡ ಅನ್ನಲ್ಲ. ಆದರೆ ಈ ತಾರತಮ್ಯ ಏಕೆ? ಎಂದು ಪ್ರಶ್ನೆ ಮಾಡಿದರು.

ಪುಟ್ಟಣ್ಣ ಶಿಕ್ಷಕರ ಸಮಸ್ಯೆಯ ಬಗ್ಗೆ ಹೇಳಿದ್ದಾರೆ. ಕೂಡಲೇ ಸಭೆ ಮಾಡಿ ನಿಮ್ಮ ಸಮಸ್ಯೆಯ ಬಗ್ಗೆ ಚರ್ಚಿಸುತ್ತೇವೆ. 7ನೇ ವೇತನ ಆಯೋಗದ ಪಿಂಚಣಿ ಬಗ್ಗೆ ಚರ್ಚೆ ನಡೆಯಲಿದೆ.

Related Post

Leave a Reply

Your email address will not be published. Required fields are marked *