Breaking
Mon. Dec 23rd, 2024

ಅನಾರೋಗ್ಯ ಕಾರಣದಿಂದ ಅಜಿತ್ ಕುಮಾರ್ ಅವರು ಆಸ್ಪತ್ರೆ ಸೇರಿದ್ದಾರೆ. ಅವರ ಮಿದುಳಿನಲ್ಲಿ ಹುಣ್ಣಾಗಿದೆ ಎಂದು ಕೆಲವು ಕಡೆಗಳಲ್ಲಿ ವರದಿ ಆಗಿತ್ತು. ಆದರೆ ಮಾಹಿತಿ ಇಲ್ಲಿದೆ..!

ತಮಿಳು ಚಿತ್ರರಂಗದ ಸ್ಟಾರ್ ಹೀರೋಗಳಲ್ಲಿ ಅಜಿತ್ ಕುಮಾರ್  ಅವರಿಗೂ ಸ್ಥಾನ ಇದೆ. ಅವರಿಗೆ ಅಪಾರ ಅಭಿಮಾನಿ ಬಳಗ ಇದೆ. ಅನಾರೋಗ್ಯ ಕಾರಣದಿಂದ ಅಜಿತ್ ಕುಮಾರ್ ಅವರು ಆಸ್ಪತ್ರೆ ಸೇರಿದ್ದಾರೆ. ಅವರ ಮಿದುಳಿನಲ್ಲಿ ಹುಣ್ಣಾಗಿದೆ ಎಂದು ಕೆಲವು ಕಡೆಗಳಲ್ಲಿ ವರದಿ ಆಗಿತ್ತು. ಆದರೆ, ಆ ರೀತಿ ಇಲ್ಲ ಎಂದು ಅವರ ವಕ್ತಾರರು ತಿಳಿಸಿದ್ದಾರೆ. ಅಜಿತ್ ಅವರು ಅನೇಕ ವಿಚಾರಗಳಲ್ಲಿ ಎಕ್ಸ್ಪರ್ಟ್ ಇದ್ದಾರೆ ಆ ಬಗ್ಗೆ ಈ ಸ್ಟೋರಿಯಲ್ಲಿ ಇದೆ ವಿವರ.

ಅಜಿತ್ ಗೆ ದೊಡ್ಡ  ಅಭಿಮಾನಿ ಬಳಗ ಇದೆ. ಅಜಿತ್ ಕುಮಾರ್ ತಂದೆ ಪಿ. ಸುಬ್ರಮಣ್ಯಂ ಕೇರಳ ಮೂಲದವರು. 1971ರ ಮೇ 1ರಂದು ಅಜಿತ್ ಕುಮಾರ್ ಜನಿಸಿದರು. ಅಜಿತ್ಗೆ ಅನಿಲ್ ಕುಮಾರ್ ಮತ್ತು ಅನುಪ್ ಕುಮಾರ್ ಹೆಸರಿನ ಸಹೋದರು ಇದ್ದಾರೆ. ಅಜಿತ್ ಕುಮಾರ್ ಅವರ ತಂದೆ ಪಿ. ಸುಬ್ರಮಣ್ಯಂ ಕಳೆದ ವರ್ಷ ನಿಧನ ಹೊಂದಿದರು. ಅವರು ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು

ಅಜಿತ್ ಅವರಿಗೆ ಶಿಕ್ಷಣದ ಬಗ್ಗೆ ಅಷ್ಟಾಗಿ ಆಸಕ್ತಿ ಇರಲಿಲ್ಲ. ಅವರು 10ನೇ ತರಗತಿವರೆಗೆ ಮಾತ್ರ ಶಿಕ್ಷಣ ಪಡೆದಿದ್ದಾರೆ. ನಂತರ ಅವರು ಮೆಕ್ಯಾನಿಕ್ ಆಗಿ ಕೆಲಸ ಮಾಡಿದ್ದರು ಅನ್ನೋದು ವಿಶೇಷ. ಅಜಿತ್ ಕುಮಾರ್ ಓರ್ವ ಪ್ರೊಫೆಷನಲ್ ರೇಸರ್.

2004ರ ಬ್ರಿಟಿಷ್ ಫಾರ್ಮುಲಾ 3 ಹಾಗೂ ಫಾರ್ಮುಲಾ 2 ರೇಸ್ನಲ್ಲಿ ಅವರು ಸ್ಪರ್ಧಿಸಿದರು. ಅವರು ವೃತ್ತಿಪರ ಶೂಟರ್. ತಮಿಳುನಾಡಿನಲ್ಲಿ ನಡೆದ ಚಾಂಪಿಯನ್ಶಿಪ್ ಒಂದರಲ್ಲಿ ಅಜಿತ್ ಅವರು 4 ಚಿನ್ನದ ಪದಕ ಗೆದ್ದು ಬೀಗಿದ್ದರು.

ಹೀರೋಗಳು ಬೈಕ್ ಹಾಗೂ ಕಾರು ಓಡಿಸೋದರಲ್ಲಿ ಎಕ್ಸ್ಪರ್ಟ್ ಆಗಿರುತ್ತಾರೆ. ಅಜಿತ್ ಅವರು ವಿಮಾನ ಕೂಡ ಓಡಿಸಬಲ್ಲರು! ಅವರು ವಿಮಾನ ಓಡಿಸುವ ತರಬೇತಿ ಹೊಂದಿದ್ದಾರೆ. ಬೈಕ್ ಬಗ್ಗೆ ಅಜಿತ್ಗೆ ಸಖತ್ ಕ್ರೇಜ್ ಇದೆ. ಸಿನಿಮಾ ಕೆಲಸಗಳ ಮಧ್ಯೆ ಬ್ರೇಕ್ ಸಿಕ್ಕಾಗ ಈಶಾನ್ಯ ಭಾರತ ಹಾಗೂ ವಿದೇಶಗಳಲ್ಲಿ ಬೈಕ್ನಲ್ಲಿ ಸುತ್ತಾಡುತ್ತಾರೆ. ಇದರ ಫೋಟೋಗಳು ಆಗಾಗ ವೈರಲ್ ಆಗಿದ್ದಿದೆ.

ಅಮಿತ್ ಕುಮಾರ್ ಪತ್ನಿ ಶಾಲಿನಿ ದಕ್ಷಿಣ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಅವರು ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇಬ್ಬರ ಮಧ್ಯೆ ಸೆಟ್ನಲ್ಲಿ ಪ್ರೀತಿ ಮೂಡಿತ್ತು. ಇವರ ದಾಂಪತ್ಯಕ್ಕೆ ಎರಡು ಶತಕಗಳು ಪೂರ್ಣಗೊಂಡಿವೆ. ಈ ದಂಪತಿಗೆ ಇಬ್ಬರು ಮಕ್ಕಳು. ಅಜಿತ್ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದುಕೊಂಡಿದ್ದಾರೆ. ಉಳಿದ ಸ್ಟಾರ್ಗಳಂತೆ ಅವರು ಸೋಶಿಯಲ್ ಮೀಡಿಯಾ ಬಳಸುವುದಿಲ್ಲ.

ಅಜಿತ್ ಅವರ ಸಿನಿಮಾಗಳು ಒಳ್ಳೆಯ ಬಿಸ್ನೆಸ್ ಮಾಡುತ್ತವೆ. ಅವರು ಸಿನಿಮಾಗಾಗಿ ವಿಶೇಷ ಸಂದರ್ಶನ ನೀಡುವುದಿಲ್ಲ. ತಮ್ಮ ಹೇಳಿಕೆಗಳನ್ನು ಬೇರೆ ರೀತಿ ಅರ್ಥೈಸಲಾಗುತ್ತದೆ ಎನ್ನುವ ಭಯ ಅವರಿಗೆ ಇದೆ. 2022ರಲ್ಲಿ ರಿಲೀಸ್ ಆದ ‘ತುನಿವು’ ಅವರ ನಟನೆಯ ಕೊನೆಯ ಸಿನಿಮಾ.

ಸದ್ಯ ಅಜಿತ್ ಕುಮಾರ್ ಅವರು ‘ವಿದಾ ಮುಯರ್ಚಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ವಿದೇಶದಲ್ಲಿ ನಡೆಯುತ್ತಿದೆ. ಈ ಮಧ್ಯೆ ಅವರಿಗೆ ಅನಾರೋಗ್ಯ ಕಾಡಿರುವುದು ಅಭಿಮಾನಿಗಳ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

 

Related Post

Leave a Reply

Your email address will not be published. Required fields are marked *