Breaking
Mon. Dec 23rd, 2024

ಕುಡಿತದ ಚಟ ಬಿಡಿಸಲು ತಂದೆ-ಮಗನ ನಡುವೆ ಗಲಾಟೆ ; ಪುತ್ರ ಯೋಗೇಶ್ ಸಾವು..!

ಬೆಂಗಳೂರು , ಮಾರ್ಚ್ 10: ನಗರದ ಬಸವೇಶ್ವರನಗರದಲ್ಲಿ ನಡೆದ ಯುವಕ ಯೋಗೇಶ್ ಕೊಲೆ ಪ್ರಕರಣ ತಿರುವು ಸೇರಿದೆ. ಕುಡಿತದ ಚಟ ಬಿಡಿಸಲಾಗದೆ ತಂದೆ ಪ್ರಕಾಶ್ ಮಗ ಯೋಗೇಶ್ನನ್ನು ಕೊಲೆ ಮಾಡಿದ್ದಾನೆ. ಪುತ್ರ ಯೋಗೇಶ್ನನ್ನು ಹತ್ಯೆಗೈದು ಆತ್ಮಹತ್ಯೆ ಅಂತ ತಂದೆ ಪ್ರಕಾಶ್ ಬಿಂಬಿಸಿದ್ದನು. ಪೊಲೀಸರು ತನಿಖೆಯಲ್ಲಿ ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ಪ್ರಕಾಶ್ ಅವರನ್ನು ಬಂಧಿಸಿದ್ದಾರೆ.

ಯೋಗೇಶ್ ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತಿದ್ದನು. ಯೋಗೇಶ್ ಮದ್ಯಕ್ಕೆ ದಾಸನಾಗಿದ್ದನು. ಮಗನ ಕುಡಿತದ ಚಟದಿಂದ ತಂದೆ ಪ್ರಕಾಶ್ ಬೇಸತ್ತು ಹೋಗಿದ್ದನು. ಇದೇ ವಿಚಾರವಾಗಿ ತಂದೆ-ಮಗನ ನಡುವೆ ಹಲವು ಬಾರಿ ಜಗಳವಾಗಿದೆ. ಬುಧವಾರ (ಮಾ.06) ರಂದು ಇದೇ ವಿಚಾರವಾಗಿ ತಂದೆ-ಮಗನ ನಡುವೆ ಗಲಾಟೆಯಾಗಿದೆ.

ಜಗಳದ ನಡುವೆ ಆರೋಪಿ ಪ್ರಕಾಶ್ ಮಗ ಯೋಗೇಶ್ನ ಕತ್ತು ಬಿಗಿದು ಉಸಿರುಗಟ್ಟಿ ಕೊಲೆಗೈದಿದ್ದಾನೆ. ಬಳಿಕ ಆರೋಪಿ ಪ್ರಕಾಶ್ ಮಗ ಯೋಗೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ರೀತಿ ಬಿಂಬಿಸಿದ್ದಾನೆ. ಆದರೆ ಸ್ಥಳೀಯರು ಪ್ರಕಾಶ್ ಮೇಲೆ ಅನುಮಾನಗೊಂಡು, ಇದು ಆತ್ಮಹತ್ಯೆಯಲ್ಲ ಕೊಲೆ ಅಂತ ಪೊಲೀಸರ ಎದುರು ಶಂಕೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಯುವಕ ಸಾಯುವ ಹಿಂದಿನ ದಿನ ಮನೆಯಲ್ಲಾಗಿದ್ದ ಗಲಾಟೆ ಬಗ್ಗೆ ಸಹ ತಿಳಿಸಿದ್ದರು.

ವಿಚಾರ ತಿಳಿದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು. ಇತ್ತ ಮನೆ ಪರಿಶೀಲನೆ ವೇಳೆ ಸಹ ನೇಣು ಬಿಗಿದುಕೊಂಡ ಬಗ್ಗೆ ಯಾವುದೇ ಸಾಕ್ಷಿ ಇರಲಿಲ್ಲ. ಈ ನಡುವೆ ಮರಣೋತ್ತರ ಪರೀಕ್ಷೆ ವರದಿ ಪೊಲೀಸರ ಕೈ ಸೇರಿತು. ವರದಿಯಲ್ಲಿ ಆತ್ಮಹತ್ಯೆಯಲ್ಲ ಕೊಲೆ ಎಂದು ಉಲ್ಲೇಖವಾಗಿದೆ.

ಆರೋಪಿ ಪ್ರಕಾಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಸಂಗತಿ ಬಯಲಾಗಿದೆ. ಜಗಳದ ವೇಳೆ ಕೋಪಗೊಂಡ ಎಡವಟ್ಟು ಎಂದು ಪೊಲೀಸರು ಎದರು ಪ್ರಕಾಶ್ ಹೇಳಿದ್ದಾನೆ. ಬಸವೇಶ್ವರ ನಗರ ಕೊಲೆ ಪ್ರಕರಣ ದಾಖಲಾಗಿದೆ.

Related Post

Leave a Reply

Your email address will not be published. Required fields are marked *