ಬಾಯ್ ಫ್ರೆಂಡ್ಸ್ ವಿಚಾರಕ್ಕೆ ಹುಡುಗಿಯರು ಹೊಡೆದಾಡಿಕೊಳ್ಳುವುದು ಹೊಸದೇನಲ್ಲ. ಈ ಮೊದಲು ಕೂಡ ಒಬ್ಬ ಹುಡುಗನಿಗಾಗಿ ಇಬ್ಬರು ಹುಡುಗಿಯರು ರಂಪ ರಾಮಾಯಣ ಮಾಡಿದ ಸುದ್ದಿಗಳು ವೈರಲ್ ಆಗಿದ್ದವು. ಇದೀಗ ಅಂತಹದ್ದೇ ಒಂದು ಘಟನೆ ನಡೆದಿದ್ದು, ಯಾವುದೇ ಫಾರಿನ್ ಕಂಟ್ರಿಯಲ್ಲಿ ಬಾಯ್ ಫ್ರೆಂಡ್ ಗೆ ಮೆಸೇಜ್ ಮಾಡಿದ ವಿಚಾರವಾಗಿ ವಿದ್ಯಾರ್ಥಿನಿಯರಿಬ್ಬರು ಶಾಲೆಯ ಕ್ಯಾಂಪಸ್ ನಲ್ಲಿ ಪರಸ್ಪರ ಫೈಟ್ ಆರಂಭಿಸಿದ್ದಾರೆ. ಈ ಜಡೆ ಜಗಳದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ವೈರಲ್ ವಿಡಿಯೋದಲ್ಲಿ ನೀಲಿ ಬಣ್ಣದ ಪ್ಯಾಂಟ್ ಧರಿಸಿ ಬಂದಂತಹ ವಿದ್ಯಾರ್ಥಿನಿಯೊಬ್ಬಳು ಅಲ್ಲೇ ನಿಂತಿದ್ದ ವಿದ್ಯಾರ್ಥಿನಿಯ ಮೇಲೆ, ಕರಾಟೆ ಶೈಲಿಯಲ್ಲಿ ಕಾಲಿನಿಂದ ಒಡೆಯುತ್ತಾಳೆ. ನನ್ ಮೇಲೆನ್ಯಾಕೆ ಕೈ ಮಾಡುತ್ತೀಯಾ ಎಂದು ಆ ಹುಡುಗಿಯೂ ಸಹ ಅವಳ ಮೇಲೆ ಕೈ ಮಾಡುತ್ತಾಳೆ. ಹೀಗೆ ಜಗಳ ತಾರಕಕ್ಕೇರಿ, ಇಬ್ಬರೂ ಜುಟ್ಟು ಹಿಡಿದುಕೊಂಡು ಹೊಡೆದಾಡಿಕೊಳ್ಳುತ್ತಾರೆ. ಅಲ್ಲಿದ್ದ ಇತರ ವಿದ್ಯಾರ್ಥಿಗಳು ಇವರ ಜಡೆ ಜಗಳವನ್ನು ನೋಡುತ್ತಾ ಎಂಜಾಯ್ ಮಾಡುತ್ತಾ, ಶಿಳ್ಳೆ ಹೊಡೆಯುತ್ತಾ ನಿಂತಿದ್ದರು. ಕೊನೆಗೆ ಪೊಲೀಸರೊಬ್ಬರು ಮಧ್ಯ ಪ್ರವೇಶಿಸಿ ಇವರಿಬ್ಬರ ಜಗಳವನ್ನು ನಿಲ್ಲಿಸಿ, ನೀಲಿ ಬಣ್ಣದ ಪ್ಯಾಂಟ್ ಧರಿಸಿದಂತಹ ಯುವತಿಯನ್ನು ಹಿಡಿದುಕೊಂಡು ಹೋಗುತ್ತಿರುವಂತಹ ದೃಶ್ಯವನ್ನು ಕಾಣಬಹುದು.
ಮಾರ್ಚ್ 05 ರಂದು ಹಂಚಿಕೊಳ್ಳಲಾದ ಈ 40 ಸಾವಿರ ಅಧಿಕ ವೀಕ್ಷಣೆಯ ವೀಡಿಯೊಗಳು ಹಾಗೂ ಹಲವಾರು ಕಾಮೆಂಟ್ಸ್‌ಗಳಿವೆ. ಒಬ್ಬ ಬಳಕೆದಾರರು ʼಯಾವುದೇ ದೇಶವಿರಲಿ ಈ ಹುಡುಗಿಯರು ಹುಡುಗರ ವಿಚಾರಕ್ಕಾಗಿ ಜಗಳವಾಡುವುದು ಕಮ್ಮಿಯಿಲ್ಲʼ ಎಂಬ ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಸೇವಿಸಿದ ಬಳಕೆದಾರರು `ಇವರ ಜಡೆ ಜಗಳವನ್ನು ಅಲ್ಲಿದ್ದ ಎಲ್ಲರೂ ಬಹಳ ಎಂಜಾಯ್ ಮಾಡುತ್ತ ನೋಡುತ್ತಿದ್ದ ದೃಶ್ಯ ನೋಡಲು ತುಂಬಾ ತಮಾಷೆಯಾಗಿದೆ~ ಎಂದು ಹೇಳಿದ್ದಾರೆ.