ತುಮಕೂರು : ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆಯ ಯಶ್ವಂತ ಗುರೂಜಿ ಅವರು ಮತ್ತೊಂದು ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬೀಗಲಿದ್ದು ದೇಶಕ್ಕೆ ಮಾಹಿಳಾ ಪ್ರಧಾನಿ ಸಿಗಲಿದ್ದಾರೆ. ಬಳಿಕ ಅವರು ಪುರುಷರಿಗೆ ಬಿಟ್ಟುಕೊಡಲಿದ್ದಾರೆ ಎಂದು ಯಶ್ವಂತ ಗುರೂಜಿ ಭವಿಷ್ಯ ನುಡಿದಿದ್ದಾರೆ.
ಲೋಕಸಭಾ ಚುನಾವಣೆಗೆ ರಣಕಣ ರಂಗೇರಿದೆ. ರಾಜಕೀಯ ಪಕ್ಷಗಳು ಗೆಲುವಿಗಾಗಿ ನಾನಾ ಸರ್ಕಸ್ ಮಾಡ್ತಿದ್ದಾರೆ. ಈ ನಡುವೆ ತಿಪಟೂರು ತಾಲೂಕಿನ ನೊಣವಿನಕೆರೆಯ ಯಶ್ವಂತ ಗುರೂಜಿ ಮತ್ತೊಂದು ಸ್ಪೋಟಕ ಭವಿಷ್ಯ ನುಡಿದಿದ್ದು ಈ ಬಾರಿ ಮಾಹಿಳಾ ಪ್ರಧಾನಿ ದೇಶಕ್ಕೆ ಸಿಗಲಿದ್ದಾರೆ ಎಂದಿದ್ದಾರೆ.
ಈ ಬಾರಿ ದೇಶದ ಚುಕ್ಕಾಣಿಯನ್ನು ಕಾಂಗ್ರೆಸ್ ಪಕ್ಷ ಹಿಡಿಯಲಿದೆ. ಮಹಿಳಾ ಪ್ರಧಾನಿಯಾಗಿ ಪ್ರಿಯಾಂಕ ಗಾಂಧಿ ದೇಶದ ಗದ್ದುಗೆ ಏರಲಿದ್ದಾರೆ ಎಂದು ಯಶ್ವಂತ ಗುರೂಜಿ ಶಿವರಾತ್ರಿಯ ಕಾಲಜ್ಞಾನ ಭವಿಷ್ಯ ನುಡಿದಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ 135 ಸೀಟು ಪಡೆಯಲಿದೆ ಎಂದು ಈ ಹಿಂದೆ ಯಶ್ವಂತ ಗುರೂಜಿ ನಿಖರ ಭವಿಷ್ಯ ನುಡಿದಿದ್ದರು. ಅಲ್ಲದೆ ಕೊರೊನಾ ಮಹಾಮಾರಿ ಬರುವ ಬಗ್ಗೆ, ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋ ಬಗ್ಗೆ ಗುರೂಜಿ ಭವಿಷ್ಯ ನುಡಿದಿದ್ದರು. ಸದ್ಯ ಈಗ ಮತ್ತೊಂದು ಸ್ಪೋಟಕ ಭವಿಷ್ಯ ನುಡಿದಿದ್ದಾರೆ.
ಈ ಬಾರಿ ಒಬ್ಬಳು ಸ್ತ್ರೀ, ಪುರುಷನ ಎದುರು ದುರ್ಗಿಯಾಗಿ ನಿಂತು ಪುರುಷನಿಗೆ ಭಯ ಹುಟ್ಟಿಸಿ ತಾನೇ ಅಧಿಕಾರವನ್ನ ಮಾಡುವಳು. ತಾಯಿ ಮಮತೆಯಿಂದ ತನ್ನ ಅಧಿಕಾರವನ್ನ ಮಾತೃ ವಾತ್ಸಲ್ಯದಿಂದ ಪರರಿಗೆ ಬಿಟ್ಟುಕೊಡುವಳು. ಹೀಗಂತಾ ಕಾಲಜ್ಞಾನದಲ್ಲಿ ಉಲ್ಲೇಖವಾದ ಚುನಾವಣಾ ಭವಿಷ್ಯವನ್ನು ಯಶ್ವಂತ ಗುರೂಜಿ ನುಡಿದಿದ್ದಾರೆ.
ಕಾಲಜ್ಞಾನದ ಪ್ರಕಾರ ಪ್ರಧಾನಿಯಾಗೋ ಯೋಗ ಹೊಂದಿರೋದು ಪ್ರಿಯಾಂಕ ಗಾಂಧಿ ಅವರು. ಬಳಿಕ ರಾಹುಲ್ ಗಾಂಧಿಗೆ ಬಿಟ್ಟು ಕೊಡುವ ಸಾಧ್ಯತೆ ಇದೆ. ಶಿವರಾತ್ರಿಗೂ ಮುನ್ನ ಚುನಾವಣೆ ನಡೆದಿದ್ದರೇ ಮೋದಿ ಅವರಿಗೆ ಪ್ರಧಾನಿಯಾಗೋ ಯೋಗವಿತ್ತು. ಆದರೇ ಈಗ ಮೋದಿ ಅವರಿಗೆ ಆ ಯೋಗ ಇಲ್ಲ.
ಅವರಿಗೆ ಅನಾರೋಗ್ಯ ಕಾಡಬಹುದು. ಸದ್ಯ ಪ್ರಿಯಾಂಕ ಗಾಂಧಿಗೆ ಹಂಸಕ, ಚಂದ್ರಮಂಗಳ, ಬುಧಾಧಿತ್ಯ ಯೋಗ ಶುರುವಾಗಿದೆ. ಈ ಯೋಗದಿಂದಲೇ ಪ್ರಧಾನಿ ಪಟ್ಟ ಸಿಗೋ ಅವಕಾಶ ಒದಗಿಬರಲಿದೆ. ಅನ್ಯ ಪಕ್ಷಗಳ ಬಲದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತಾ ಭವಿಷ್ಯ ಇದೆ ಎಂದು ಯಶ್ವಂತ ಗುರೂಜಿ ನೊಣವಿನಕೆರೆಯಲ್ಲಿ ಕಾಲಜ್ಞಾನ ಭವಿಷ್ಯ ನುಡಿದಿದ್ದಾರೆ.