ಚಿತ್ರದುರ್ಗ, ಮಾರ್ಚ್.11 : : ಈ ಬಾರಿಯ ಸಂಸತ್ ಚುನಾವಣೆಯಲ್ಲಿ ಮಾದಿಗ ಜನಾಂಗಕ್ಕೆ ಸೇರಿದ ಚಿತ್ರದುರ್ಗ ತಾಲೂಕಿನ ಸೂರನಹಳ್ಳಿ ವಿಜಯಣ್ಣನಿಗೆ ಟಿಕೆಟ್ ನೀಡುವಂತೆ ಅಪಾರ ಬಿಜೆಪಿ ಅಭಿಮಾನಿಗಳು ವರಿಷ್ಟರಲ್ಲಿ ಮನವಿ ಮಾಡಿದ್ದಾರೆ.
2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸೂರನಹಳ್ಳಿ ವಿಜಯಣ್ಣ ಟಿಕೆಟ್ ಕೇಳಿದ್ದರು. ಆದರೆ ಪಕ್ಷದ ನಾಯಕರು ಎ.ನಾರಾಯಣಸ್ವಾಮಿರವರನ್ನು ಚುನಾವಣಾ ಕಣಕ್ಕೆ ಇಳಿಸಿದರು ಅವರ ಪರವಾಗಿ ಕೆಲಸ ಮಾಡಲಿಲ್ಲ. ಅಂದಿನಿಂದ ಇಲ್ಲಿಯತನಕ ಕ್ಷೇತ್ರಾದ್ಯಂತ ಸುತ್ತಾಡಿ ಮತದಾರರ ಮನಗೆದ್ದಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಸೂರನಹಳ್ಳಿ ವಿಜಯಣ್ಣನಿಗೆ ಟಿಕೆಟ್ ನೀಡಿ ಮಾದಿಗ ಜನಾಂಗಕ್ಕೆ ಸಾಮಾಜಿಕ ನ್ಯಾಯ ಒದಗಿಸುವಂತೆ ಅವರ ನೂರಾರು ಅಭಿಮಾನಿಗಳನ್ನು ಒತ್ತಾಯಿಸಿದ್ದಾರೆ.