ಚಿತ್ರದುರ್ಗ : ತಾಲೂಕಿನ ಹಿರೆಗಂಟನೂರು ಹೋಬಳಿಯ ಭೀಮಸಮುದ್ರ ಬಸವಪುರದ ಶ್ರೀ ಮಾವಿನಹಳ್ಳಿ ಬಸವೇಶ್ವರ ಸ್ವಾಮಿಯ ರಥೋತ್ಸವದ ಅಂಗವಾಗಿ ಮಾರ್ಚ್ 15 ರಿಂದ 20ರವರೆಗೆ ವಿವಿಧ ರೀತಿಯ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾವಿನಹಳ್ಳಿ ಬಸವೇಶ್ವರ ಸ್ವಾಮಿ ಟ್ರಸ್ಟ್ ನ ಉಪಾಧ್ಯಕ್ಷರಾದ ಬಿ ಎಸ್ ವಿಶ್ವನಾಥಪ್ಪ ಪಾಟೀಲ್ ತಿಳಿಸಿದ್ದಾರೆ.
ಮಾರ್ಚ್ 15ರಂದು ರುದ್ರಾಭಿಷೇಕ, ಕಂಕಣ ಧಾರಣೆ, ಪಲ್ಲಕ್ಕಿ ಉತ್ಸವ ಧ್ವಜಾರೋಹಣ ಕಾರ್ಯಕ್ರಮವೂ ನಲ್ಲಿ ಕಟ್ಟೆ ಗ್ರಾಮಸ್ಥರಿಂದ ನೆರವೇರಲಿದೆ. ಮಾರ್ಚ್ 16ರಂದು ಅಶೋತ್ಸವ ಬೆಟ್ಟದ ನಾಗೇನಹಳ್ಳಿ ಗ್ರಾಮಸ್ಥರಿಂದ ಮಾರ್ಚ್ 17 ರಂದು ವೃಷಭೋತ್ಸವ ಬಸವಪುರ ಗ್ರಾಮಸ್ಥರಿಂದ, ಮಾರ್ಚ್ ಹದಿನೆಂಟರಂದು ಬೆಳಗ್ಗೆ 6:00ಗೆ ಹೂವಿನ ಉತ್ಸವ ಸೇವೆ, ಸ್ವಾಮಿಗೆ ಗಜೋತ್ಸವ ಹಾಗೂ 10 ಗಂಟೆಗೆ ಕೆಂಡಾರ್ಚನೆ ಸೇವೆಯನ್ನು ತಿರುಮಲಾಪುರ ಹಾಗೂ ಲಿಂಗದಳ್ಳಿ ಗ್ರಾಮಸ್ಥರಿಂದ, ಮಾರ್ಚ್ 19 ರಂದು ಸ್ವಾಮಿಯ ಸನ್ನಿಧಾನದಲ್ಲಿ ಬೆಳಗ್ಗೆ 11:00ಗೆ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮ ನಡೆಯಲಿದ್ದು, ಈ ಸಂದರ್ಭದಲ್ಲಿ ವಧು ವರನಿಗೆ ಬಟ್ಟೆ ವಧುವಿಗೆ ತಾಳಿಯನ್ನು ನೀಡಲಾಗುವುದು.
ವಿವಾಹ ಆಗಲಿಚ್ಚಿಸುವವರು ದೇವಾಲಯದಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಸಂಜೆ 4:00ಗೆ ಹೂವಿನ ಹಡ್ಡಪಲ್ಲಕ್ಕೆ ನಂತರ ಐದು ಗಂಟೆಗೆ ಸ್ವಾಮಿಯ ರಥೋತ್ಸವ ಕಾರ್ಯಕ್ರಮ ನಡೆಯಲಿದ್ದು, ಮಾರ್ಚ್ 20ರಂದು ಕಂಕಣ ವಿಸರ್ಜನೆ ಹಾಗೂ ಮಂಗಳಾರತಿಯೊಂದಿಗೆ ಸ್ವಾಮಿಯ ಸೇವೆಗಳು ಮುಕ್ತಾಯ ಮಾಡಲಾಗುವುದು.
ಇದೇ ಸಂದರ್ಭದಲ್ಲಿ ದೇವಾಲಯದ ಸ್ವಾಮಿಯ ನೂತನ ದೇವಾಲಯದ ನಿರ್ಮಾಣ ಕಾರ್ಯ ಪ್ರಾರಂಭವಾಗಿದ್ದು, ದೇವಾಲಯ ನಿರ್ಮಾಣಕ್ಕೆ ಸಹಾಯ ಮಾಡಲಾಗುವುದು ಎಂದು ವಾಗ್ವಾದನ ಮಾಡಿದರು. ಕೂಡಲೇ ಸಹಾಯ ಮಾಡುವವರ ಮೂಲಕ ಶೀಘ್ರವಾಗಿ ದೇವಾಲಯ ಕಟ್ಟಡ ಪೂರ್ಣವಾಗುವಂತೆ ಮನವಿ ಮಾಡಲಾಗುವುದು. ಅಲ್ಲದೆ ಈ ಎಲ್ಲಾ ಕಾರ್ಯಕ್ರಮಗಳು ಸರ್ವ ಭಕ್ತಾದಿಗಳು ಆಗಮಿಸುವುದರ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾಗಲು ಮನವಿ ಮಾಡಲಾಯಿತು.