ದಾಬಸ್ ಪೇಟೆ : ಸೋಂಪುರ ಗ್ರಾಮ ಪಂಚಾಯಿತಿಯಿಂದ ಇಂದು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಉದ್ಯಾನವನ ಇನ್ನಿತರ ಕಟ್ಟಡಗಳ ಲೋಕಾರ್ಪಣೆ ಸೋಂಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮ ತೀರ್ಥ ಪ್ರಸಾದ್.
ವಿವಿಧ ಉದ್ಘಾಟನೆಗಳು : ಗುರುಸಿದ್ದಪ್ಪ ಹಾಗೂ ಅನ್ನಪೂರ್ಣೇಶ್ವರಿ ಬಡಾವಣೆಯಲ್ಲಿ ಉದ್ಯಾನವನ, ಸಭಾಭವನ, ಗರಡಿ ಮನೆ, ಸಂಕೀರ್ಣ ಘನ ತ್ಯಾಜ್ಯ, ಸಂಪನ್ಮೂಲ ನಿರ್ವಹಣಾ ಘಟಕ, ದಾಬಸ್ ಪೇಟೆ ಪೊಲೀಸ್ ಠಾಣೆ, ಸಿಸಿ ಟಿವಿ ಮತ್ತು ಕಂಟ್ರೋಲ್ ರೂಂ ಸೇವೆ, ವಿದ್ಯುತ್ ದೀಪ ಮತ್ತು ಹೈ ಮಾಸ್ಕ್ ದೀಪಗಳು, ಜನರಿಗೆ ಅನುಕೂಲವಾಗಲಿವೆ ಮತ್ತು ಸಸಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಚಿವರಾದ ಕೆ.ಎಚ್.ಮುನಿಯಪ್ಪ ಮತ್ತು ಪ್ರಿಯಾಂಕ ಖರ್ಗೆ ಅಧ್ಯಕ್ಷತೆಯಲ್ಲಿ ಸ್ಥಳೀಯ ಶಾಸಕ ಶ್ರೀನಿವಾಸ್ ಭಾಗವಹಿಸಿದ್ದು, ಸಂಸದ ಬಚ್ಚೇಗೌಡ ಘನ ಉಪಸ್ಥಿತಿಯಲ್ಲಿ ವಿಧಾನ ಪರಿಷತ್ ಸದಸ್ಯ ರವಿ ರವಿ ಭಾಗವಹಿಸಿದ್ದು, ಡಾಕ್ಟರ್ ಕೆ ಎನ್ ಅನುರಾಧಾ ಭಾಗವಹಿಸಿದ್ದರು.
ಸೋಂಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮ ತೀರ್ಥ ಪ್ರಸಾದ್, ಉಪಾಧ್ಯಕ್ಷ ಲಾವಣ್ಯ ಜಗದೀಶ್, ತಾಲೂಕು ಪಂಚಾಯಿತಿ ಇ ಎಲ್ ಮಧು, ಪಿಡಿಒ ರವಿಶಂಕರ್, ಕಾರ್ಯದರ್ಶಿ ಹನುಮಂತ ರಾಜು, ದ್ವಿತೀಯ ದರ್ಜೆ ಸಹಾಯಕ ಮಂಜುನಾಥ್ ಭಾಗವಹಿಸಿದ್ದರು ಮತ್ತು ಗ್ರಾಮ ಪಂಚಾಯಿತಿಯ ಎಲ್ಲ 25 ಜನ ಪೊಲೀಸ್ ಸಿಬ್ಬಂದಿಗಳ ಮಾಜಿ ಅಧ್ಯಕ್ಷರು ಮುಖ್ಯ ಪಂಚಾಯತಿ ಸಿಬ್ಬಂದಿ ಆಗಮಿಸಿದ್ದರು.