Breaking
Mon. Dec 23rd, 2024

ಮಿಷನ್ ದಿವ್ಯಾಸ್ತ್ರ ಯಶಸ್ವಿ ಉಡಾವಣೆಯಾಗಿದೆ ಎಂದು ಪ್ರಧಾನಿ ಮೋದಿ ಅವರು ಘೋಷಣೆ ಡಿ.ಆರ್‌.ಡಿ.ಒ ವಿಜ್ಞಾನಿಗಳು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಅಗ್ನಿ-5 ಕ್ಷಿಪಣಿಯ ಮೊದಲ ಪರೀಕ್ಷಾರ್ಥ ಹಾರಾಟ..!

Agni-5 missile : ಇಂದು ಮಿಷನ್ ದಿವ್ಯಾಸ್ತ್ರ ಯಶಸ್ವಿ ಉಡಾವಣೆಯಾಗಿದೆ ಎಂದು ಪ್ರಧಾನಿ ಮೋದಿ ಅವರು ಘೋಷಣೆ ಮಾಡಿದ್ದಾರೆ. ಡಿ.ಆರ್‌.ಡಿ.ಒ ವಿಜ್ಞಾನಿಗಳು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಅಗ್ನಿ-5 ಕ್ಷಿಪಣಿಯ ಮೊದಲ ಪರೀಕ್ಷಾರ್ಥ ಹಾರಾಟ ನಡೆಸಿದ್ದಾರೆ. ಈ ಕ್ಷಿಪಣಿ ಮಲ್ಟಿಪಲ್ ಇಂಡಿಪೆಂಡೆಂಟ್ಲಿ ಟಾರ್ಗೆಟೆಬಲ್ ರೀ-ಎಂಟ್ರಿ ವೆಹಿಕಲ್ (ಎಂಐಆರ್‌ವಿ) ತಂತ್ರಜ್ಞಾನವನ್ನು ಹೊಂದಿದೆ.

ಮಿಷನ್ ದಿವ್ಯಾಸ್ತ್ರ (Mission Divyastra) ಯಶಸ್ವಿ ಉಡಾವಣೆಯನ್ನು ನಡೆಸಿದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ವಿಜ್ಞಾನಿಗಳಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ತಮ್ಮ ಎಕ್ಸ್ ಖಾತೆಯಲ್ಲಿ ಅಭಿನಂದನೆ ತಿಳಿಸಿದ್ದಾರೆ.

ಡಿಆರ್‌ಡಿಒ ವಿಜ್ಞಾನಿಗಳು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಅಗ್ನಿ-5 ಕ್ಷಿಪಣಿಯ ಮೊದಲ ಪರೀಕ್ಷಾರ್ಥ ಹಾರಾಟ ನಡೆಸಿದ್ದಾರೆ. ಈ ಕ್ಷಿಪಣಿ ಮಲ್ಟಿಪಲ್ ಇಂಡಿಪೆಂಡೆಂಟ್ಲಿ ಟಾರ್ಗೆಟೆಬಲ್ ರೀ-ಎಂಟ್ರಿ ವೆಹಿಕಲ್ (ಎಂಐಆರ್‌ವಿ) ತಂತ್ರಜ್ಞಾನವನ್ನು ಹೊಂದಿದೆ. ಇದು ನಮ್ಮ ಭಾರತಕ್ಕೆ ಹೆಮ್ಮೆಯ ಕ್ಷಣ ಎಂದು ಮೋದಿ ಹೇಳಿದ್ದಾರೆ.

ಈ ಕ್ಷಿಪಣಿ ಪಾಕಿಸ್ತಾನ ಮತ್ತು ಚೀನಾದಂತಹ ದೇಶಗಳಿಂದ ಬಹು ರಂಗಗಳಲ್ಲಿ ಸವಾಲುಗಳನ್ನು ಎದುರಿಸುತ್ತಿರುವ ಭಾರತೀಯ ರಕ್ಷಣಾ ಪಡೆಗಳಿಗೆ ಉತ್ತೇಜನವಾಗಿದೆ.

ಅಗ್ನಿ-5 ಬ್ಯಾಲಿಸ್ಟಿಕ್ ಕ್ಷಿಪಣಿ : DRDO 2012ರ ಸುಮಾರಿಗೆ ಅಗ್ನಿ-V ಕ್ಷಿಪಣಿಗಳ ಪ್ರಯೋಗವನ್ನು ಪ್ರಾರಂಭಿಸಿತು. ಅಂದಿನಿಂದ, ಇದು ನವೀಕರಿಸಿದ ಸಾಮರ್ಥ್ಯಗಳೊಂದಿಗೆ ಅಗ್ನಿ-Vನ ಬಹು ಆವೃತ್ತಿಗಳನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದೆ. 2021ರಲ್ಲಿ, ಡಿಆರ್‌ಡಿಒ ಒಡಿಶಾದ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಸರ್ಫೇಸ್ ಟು ಸರ್ಫೇಸ್ ಬ್ಯಾಲಿಸ್ಟಿಕ್ ಕ್ಷಿಪಣಿ ಅಗ್ನಿ-5ನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು.

ಮೂರು-ಹಂತದ ಘನ-ಇಂಧನ ಎಂಜಿನ್ ಅನ್ನು ಬಳಸುವ ಕ್ಷಿಪಣಿಯು 5,000 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಗುರಿಗಳನ್ನು ಅತಿ ಹೆಚ್ಚು ನಿಖರತೆಯೊಂದಿಗೆ ತಲುಪುವ ಸಾಮರ್ಥ್ಯವನ್ನು ಹೊಂದಿದೆ.

Related Post

Leave a Reply

Your email address will not be published. Required fields are marked *