ಚಿತ್ರದುರ್ಗ : ತಾಲೂಕಿನ ಸಾಣೀಕೆರೆ ಗ್ರಾಪಂ ವ್ಯಾಪ್ತಿಯ ಹೆಗ್ಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದಲ್ಲಿ ಶ್ರೀ ಕೊಳಾಳು ಕೆಂಚಾವಧೂತ ಸ್ವಾಮಿಗಳ ಕೃಪಾಶೀರ್ವಾದದೊಂದಿಗೆ
ಶ್ರೀ ದುರ್ಗಾಂಭಿಕಾ ಕೃಪಾ ಪೋಷಿತ ನಾಟಕ ಮಂಡಲಿವತಿಯಿಂದ ಶ್ರೀ ದುರ್ಗಾಂಕಾ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಹೆಗ್ಗೆರೆ ಗ್ರಾಮದಲ್ಲಿ, ಭಾನುವಾರ ರಾತ್ರಿ 9.30 ಕ್ಕೆ ಸರಿಯಾಗಿ ವಿಷ ಕೊಟ್ಟವಳಾಗಿದ್ದಾನೆ ಗೊತ್ತು ವಿಶ್ವಾಸದ ಬೆಲೆ ಅಥವಾ ಮರಣ ಪ್ರೇಮದ ಗೂಡು ಸೇರಿದ ಹಕ್ಕಿ ಎಂಬ ಸಾಮಾಜಿಕ ನಾಟಕದ ವಿಲನ್ ಪಾತ್ರದಾರಿ ಸಂತೋಷ್(35) ಮೊದಲನೇ ಬಾರಿಗೆ ನಾಟಕವಾಡುತ್ತಿರುವ ನಾಟಕವಾಡ ನೋವು ಕಾಣಿಸಿಕೊಂಡು ಹೃದಯಾಘಾತಕ್ಕೆ ಒಳಗಾಗಿ ನಾಟಕದ ಹೆಸರಿನಲ್ಲೇ ಬರುವಂತೆ ವಿಲನ್ ಪಾತ್ರದಾರಿ ಸಂತೋಷ್ ಪ್ರಾಣ ಪಕ್ಷಿ ಹಾರಿ ಹೋಗಿದೆ. ಈ ಘಟನೆಯಿಂದ ನಾಟಕ ಪ್ರದರ್ಶನ ಸ್ಥಗಿತಗೊಂಡಿದೆ.
ಪ್ರೇಮದ ಗೂಡು ಸೇರಿದ ಹಕ್ಕಿಯಂತೆ ಮರಳಿ ಬಾರದ ಊರಿಗೆ ಪಾತ್ರಧಾರಿ ತೆರಳಿದ್ದಾರೆ .ನಾಟಕ ವೀಕ್ಷಣೆಗೆ ಬಂದಿದ್ದ ಪ್ರೇಕ್ಷಕರು ಕಣ್ಣೀರು ಹಾಕಿದ ದೃಶ್ಯ ಮನಕಲುಕುವಂತಿತ್ತು.