ಚಿತ್ರದುರ್ಗ ಬಸವೇಶ್ವರ ಚಿತ್ರಮಂದಿರಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಭುದೇವ್ ನಾನು ನಟಿಸಿರುವ ಕರಟಕ ದಮನಕ ಚಿತ್ರದಲ್ಲಿ ನೀರಿಗೆ ಎಷ್ಟೊಂದು ಮಹತ್ವವಿದೆ ಎನ್ನುವ ಸಂದೇಶವಿದೆ.
ಬೇಸಿಗೆ ಕಾಲವಾಗಿರುವುದರಿಂದ ಎಲ್ಲಾ ಕಡೆ ನೀರಿನ ಸಮಸ್ಯೆಯಿದೆ. ಅಮೂಲ್ಯವಾದ ನೀರನ್ನು ವ್ಯರ್ಥಮಾಡಬಾರದು ಎನ್ನುವ ಸಂದೇಶವನ್ನು ಅಭಿಮಾನಿಗಳಿಗೆ ನೀಡಿದ್ದೇವೆ. ಹೆಚ್ಚಿನ ಹಣ ಗಳಿಸುವ ಆಸೆಗಾಗಿ ಬೇರೆ ದೇಶಗಳಿಗೆ ಹೋದವರು ತಮ್ಮ ಹುಟ್ಟೂರನ್ನು ಮರೆಯಬಾರದು.
ನಾನು ಹುಟ್ಟಿದ್ದು, ತಮಿಳುನಾಡಿನಲ್ಲಿ ನನ್ನ ತಂದೆ ಜನಸಿದ್ದು, ಗಾಜನೂರಿನಲ್ಲಿ ಹಾಗಾಗಿ ನಾನು ಗಾಜನೂರಿಗೆ ಹೋದರೆ ಸಿಗುವ ಖುಷಿ ಅಷ್ಟಿಷ್ಟಲ್ಲ. ಇದು ನನ್ನ 126 ನೇ ಸಿನಿಮಾ. ಅಪ್ಪುನನ್ನು ಮಿಸ್ ಮಾಡಿಕೊಂಡಿದ್ದೇವೆಂದು ಎಲ್ಲಿಯೂ ನನಗೆ ಅನಿಸುತ್ತಿಲ್ಲ. ಅಭಿಮಾನಿಗಳ ಮನಸ್ಸಿನಲ್ಲಿದ್ದಾನೆಂದುಕೊಂಡಿದ್ದೇನೆ.
ಹುಟ್ಟಿದ ಊರಿನ ಬೇರು ನಂಟನ್ನು ಕಾಪಾಡಿಕೊಳ್ಳಬೇಕು. ಊರು ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ಹೆಚ್ಚಾಗಿ ಪ್ರತಿಯೊಬ್ಬರು ಊರಿಗೆ ನಾವೇನು ಕೊಟ್ಟಿದ್ದೇನೆಂದು ಚಿಂತಿಸಿಬೇಕಿದೆ. ತಪ್ಪದೆ ಎಲ್ಲರೂ ಕರಟಕ ದಮನಕ ಚಿತ್ರ ನೋಡಿ ಉತ್ತಮ ಸಂದೇಶವಿದೆ ಎಂದು ಅಭಿಮಾನಿಗಳಲ್ಲಿ ಶಿವರಾಜ್‍ಕುಮಾರ್ ಮನವಿ ಮಾಡಿದರು.
ಈ ಚಿತ್ರದಲ್ಲಿ ಕೇವಲ ಮನರಂಜನೆಯಷ್ಟೆ ಅಲ್ಲ. ಸಾಮಾಜಿಕ ಸಂದೇಶ ಕೂಡ ಅಡಗಿದೆ. ಅಭಿಮಾನಿಗಳ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿ ಎಂದರು.
ಚಿತ್ರದ ನಿರ್ದೇಶಕ ಯೋಗರಾಜ್‍ಭಟ್, ನಿರ್ಮಾಪಕ ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್, ನಗರಸಭೆ ಸದಸ್ಯ ದೀಪು, ಮಾಜಿ ಸದಸ್ಯ ತಿಪ್ಪೇಸ್ವಾಮಿ, ಬಸವೇಶ್ವರ ಚಿತ್ರಮಂದಿರದ ಮಾಲೀಕರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.