ಬೆಂಗಳೂರು , ಮಾ.11: ಸ್ವಂತ ಮನೆ ಕಟ್ಟುವವರಿಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಿದ ನಂಬಿಕೆ ರಕ್ಷೆ ಯೋಜನೆಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ವಿಧಾನಸೌಧದಲ್ಲಿ ಇಂದು ಚಾಲನೆ ನೀಡಲಾಗಿದೆ . ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರು ನಗರಕ್ಕೆ ಪಾರದರ್ಶಕ ನೀತಿ ರೂಪಿಸಿದ್ದೇವೆ. ಮನೆ ಕಟ್ಟುವವರಿಗೆ ಬಿ.ಬಿ.ಎಂ.ಪಿ ನಿರ್ಮಾಣ ಕ್ರಾಂತಿಕಾರಕ ವ್ಯವಸ್ಥೆ ಜಾರಿಯಲ್ಲಿದೆ.
50×80 ಅಡಿ ಅಳತೆಯ ನಿವೇಶನ ಆಟೋಮೇಟೆಡ್ ಕಟ್ಟಡ ನಕ್ಷೆ ಮಂಜೂರಾತಿ ಮಾಡಲಾಗುವುದು. ಆನ್‌ಲೈನ್‌ನಲ್ಲಿ ಮಂಜೂರಾತಿ ಮಾಡಲಾಗುವುದಿಲ್ಲ. ಆನ್‌ಲೈನ್‌ನಲ್ಲಿ ಅರ್ಜಿ ಹಾಕಿದ ನಂತರ ಇಂಜಿನಿಯರ್‌ಗಳಿಂದ ಮಂಜೂರಾತಿಗೆ ವ್ಯವಸ್ಥೆ ಮಾಡಲಾಗಿದೆ.
ಮೊದಲ ಹಂತದಲ್ಲಿ ರಾಜರಾಜೇಶ್ವರಿ ಹಾಗೂ ದಾಸರಹಳ್ಳಿ ವಲಯದಲ್ಲಿ ಪ್ರಾರಂಭವಾಯಿತು. ಆ ನಂತರ ಬೆಂಗಳೂರಿನಲ್ಲಿ ಜಾರಿಯಾಗುತ್ತದೆ. ಆನ್ ಲೈಲ್‌ನಲ್ಲಿ ಏನೆಲ್ಲಾ ಜಾಹೀರಾತು ಕೊಡಬೇಕು ಅದಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಬಿಬಿಎಂಪಿ ಮನೆ ಕಟ್ಟುವವರಿಗೆ ನಕ್ಷೆ ಮಂಜೂರಾತಿ ಒಂದು ಕ್ರಾಂತಿಕಾರಕ ವ್ಯವಸ್ಥೆಯಾದ `ನಂಬಿಕೆ ನಕ್ಷೆ’ ವಿಧಾನಸೌಧದಲ್ಲಿ ಇಂದು ಉದ್ಘಾಟಿಸಲಾಗಿದೆ. ಬ್ರ್ಯಾಂಡ್ ಬೆಂಗಳೂರು ಧ್ವನಿಯಡಿಯಲ್ಲಿ ಈ ಹೊಸ ವ್ಯವಸ್ಥೆ ಜಾರಿಗೆ ಬರುತ್ತಿದೆ 50×80 ಅಡಿಯಿಂದ 4 ಯೂನಿಟ್‌ನಿಂದ ಮನೆಗಳ ನಕ್ಷೆಯನ್ನು ಮನೆ ಬಾಗಿಲಿಗೆ ತಲುಪಿಸುವ ಮಹತ್ತರ ವ್ಯವಸ್ಥೆ ಇದೆ.
ಮನೆ ಕಟ್ಟಲು ಬಯಸುವವರು ಆನ್‌ಲೈನ್ ಮೂಲಕ ತಮ್ಮ ದಾಖಲೆಗಳನ್ನು ಸರ್ಕಾರವೇ ನಿಗದಿಪಡಿಸಿರುವ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿ ಮಾಡಿದರೆ, ಎಂ ಪ್ಯಾನಲ್ ಮೂಲಕ ನೋಂದಣಿಯಾದ ದಾಖಲೆಗಳನ್ನು ಪರಿಶೀಲಿಸಿ ನಕ್ಷೆಯನ್ನು ಅರ್ಜಿದಾರರ ಮನೆಬಾಗಿಲಿಗೆ ತಲುಪಿಸಲಾಗುತ್ತದೆ. ಸದ್ಯದ ಬಿಡುಗಡೆ ಮಾತ್ರ ಜಾರಿಯಾಗಲಿದೆ, ಮುಂಬರುವ ದಿನಗಳಲ್ಲಿ ಬಿಡಿಎ ವ್ಯಾಪ್ತಿಗೆ ಈ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕಟ್ಟಡದ ನಕ್ಷೆ ಅನುಮತಿ: ತಪ್ಪಿತು ಕಚೇರಿ ಅಲೆದಾಟ
ಈ ಹಿಂದೆ ಬೆಂಗಳೂರಿನಲ್ಲಿ ಮನೆ ಕಟ್ಟುವವರು ಕಟ್ಟಡದ ನಕ್ಷೆಗೆ ಅನುಮತಿ ಪಡೆಯಲು ಪಾಲಿಕೆ ಕಚೇರಿ ಅಲೆದಾಡಬೇಕಿತ್ತು. ಆದರೆ, ಈಗ 50X80 ವಿಸ್ತೀರ್ಣ ಹೊಂದಿರುವವರು ಹಾಗೂ 4 ಯುನಿಟ್ ಮನೆ ಕಟ್ಟಿಕೊಳ್ಳುವವರು ಸರ್ಕಾರದ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ವಾಸ್ತುಶಿಲ್ಪ ಅಥವಾ ಇಂಜಿನಿಯರ್ ಮೂಲಕ ಆನ್ ಲೈನ್ ಕಟ್ಟಡದ ನಕ್ಷೆಗೆ ಸ್ವಯಂ ಅನುಮತಿ ಪಡೆಯಲಾಗಿದೆ.
ಕಟ್ಟಡದ ನಕ್ಷೆಯನ್ನು ತಂತ್ರಜ್ಞಾನದ ಮೂಲಕ ಪರಿಶೀಲಿಸಲಾಗಿದೆ. ಕಳೆದ ವರ್ಷ 9 ಸಾವಿರ ಕಟ್ಟಡ ನಕ್ಷೆಯನ್ನು ನೀಡಬಹುದು, ಈ ಬಾರಿ 10 ಸಾವಿರ ನಕ್ಷೆ ಸಿಗಬಹುದು ಎಂದು ಅಂದಾಜಿಸಲಾಗಿದೆ.
ಹೊಸ ಆಸ್ತಿ ತೆರಿಗೆ ಪದ್ದತಿಯನ್ನು ಜಾರಿಗೆ ತರಲಾಗುತ್ತಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು. 2008 ರಲ್ಲಿ ಜಾರಿಯಲ್ಲದ ಆಸ್ತಿ ತೆರಿಗೆ ಪದ್ಧತಿಯಲ್ಲಿ ಒಟ್ಟು 18 ವರ್ಗೀಕರಣ ಮಾಡಲಾಗಿದೆ. ಇದರಿಂದ ತೆರಿಗೆ ಪಾವತಿಯಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಇದೀಗ ತೆರಿಗೆ ಪದ್ಧತಿಯನ್ನು ಸರಳೀಕರಣಗೊಳಿಸಲಾಗಿದೆ, 6 ವರ್ಗೀಕರಣಗಳನ್ನು ಮಾಡಲಾಗಿದೆ. ವಸತಿ (ಸ್ವಂತ ಬಳಕೆ ಮತ್ತು ಬಾಡಿಗೆದಾರರ ಬಳಕೆ), ವಾಣಿಜ್ಯ, ಕೈಗಾರಿಕಾ, ಸ್ಟಾರ್ ಹೋಟೆಲ್, ವಿನಾಯಿತಿ ನೀಡಲಾಗಿರುವುದು ಹಾಗೂ ಸಂಪೂರ್ಣ ಖಾಲಿ ಜಮೀನುಗಳು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬಿ.ಬಿ.ಎಂ.ಪಿ ಅಂತಹವರಿಗೆ ಆಸ್ತಿ ತೆರಿಗೆ ಸಂಖ್ಯೆ ಮತ್ತು ಬಿಬಿಎಂಪಿ ಖಾತೆ ನೀಡುತ್ತಿದೆ. ಬಿಬಿಎಂಪಿಯಿಂದ ದಾಖಲೆ ಸರಿಯಾಗಿ ಇರುವವರಿಗೆ ಒಂದು ಖಾತಾ. ಕನ್ವರ್ಷನ್ ಮಾಡಿಕೊಳ್ಳದೇ, ಯೋಜನೆ ಇಲ್ಲದವರಿಗೆ ಬಿ ಖಾತಾ ನೀಡಲಾಗುವುದು ಎಂದು ಡಿಸಿಎಂ ಹೇಳಿದ್ದಾರೆ.