ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಭಾರತೀಯ ವಾಯುಪಡೆಯ ತೇಜಸ್ ಯುದ್ಧ ವಿಮಾನ ಪತನವಾಗಿದೆ. ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಸೇನೆ ಆದೇಶಿಸಿದೆ. ಭಾರತೀಯ ವಾಯುಪಡೆಯ ಲಘು ಯುದ್ಧ ವಿಮಾನ (ಎಲ್‌ಸಿಎ) ತೇಜಸ್ ಕಾರ್ಯಾಚರಣೆಯ ತರಬೇತಿಯ ಸಮಯದಲ್ಲಿ ಜೈಸಲ್ಮೇರ್ ಬಳಿ ಪತನಗೊಂಡಿತು. ಪೈಲಟ್‌ಗಳು ಸುರಕ್ಷಿತವಾಗಿವೆ.
ಭಾರತೀಯ ವಾಯುಪಡೆಯ ಒಂದು ತೇಜಸ್ ವಿಮಾನವು ಇಂದು ಕಾರ್ಯಾಚರಣೆಯ ತರಬೇತಿಯ ಸಮಯದಲ್ಲಿ ಜೈಸಲ್ಮೇರ್‌ನಲ್ಲಿ ಅಪಘಾತಕ್ಕೀಡಾಯಿತು. ಪೈಲಟ್ ಹೊರಬಂದಿದ್ದಾರೆ ಅಪಘಾತದ ಕಾರಣವನ್ನು ಕಂಡು ಹಿಡಿಯುತ್ತಿದ್ದಾರೆ ಎಂದು ಅಧಿಕಾರಿಗಳು.
ಭಾರತ್ ಶಕ್ತಿ ತರಬೇತಿ ವೇಳೆ ಫೈಟರ್ ಜೆಟ್ ಜೈಸಲ್ಮೇರ್‌ನಲ್ಲಿ ಪತನಗೊಂಡಿತು. ಫೈಟರ್ ಜೆಟ್ ಪತನವಾಗಿರುವ ಘಟನೆ ಜವಾಹರ್ ಕಾಲೋನಿ ಬಳಿ ನಡೆದಿದೆ. ಮಧ್ಯಾಹ್ನ 2 ಗಂಟೆಗೆ ಫೈಟರ್ ಜೆಟ್ ಹಾಸ್ಟೆಲ್ ಮೇಲ್ಛಾವಣಿಯ ಮೇಲೆ ಬಿದ್ದು ಬೆಂಕಿಯ ಉಂಡೆಯಾಗಿ ಮಾರ್ಪಟ್ಟಿತು. ಹೇಗೋ ಇಬ್ಬರೂ ಪೈಲಟ್‌ಗಳು ಫೈಟರ್ ಜೆಟ್‌ನಿಂದ ಜಿಗಿದು ತಮ್ಮ ಪ್ರಾಣ ಉಳಿಸಿಕೊಂಡರು.