ನಟಿ ಚೈತ್ರಾ ಜೆ ಆಚಾರ್, ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿಯರಲ್ಲಿ ಒಬ್ಬರು. ‘ಟೋಬಿ’, ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾಗಳಲ್ಲಿ ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ನಟಿ ಚೈತ್ರಾ ಆಚಾರ್ ಇದೀಗ ಹಲವು ಹೊಸ ಅವಕಾಶಗಳ ಪಡೆದಿದ್ದಾರೆ. ಪರಭಾಷೆಯ ಸಿನಿಮಾದಲ್ಲಿಯೂ ಚೈತ್ರಾ ನಟಿಸಲಿದ್ದಾರೆ.
ನಟಿ ಚೈತ್ರಾ ಜೆ ಆಚಾರ್, ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿಯರಲ್ಲಿ ಒಬ್ಬರು. ‘ಟೋಬಿ’, ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾಗಳಲ್ಲಿ ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಚೈತ್ರಾ ಆಚಾರ್ ನಟಿಸಿರುವ ‘ಬ್ಲಿಂಕ್’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಹಲವು ವಿಮರ್ಶಕರು ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳಾಡಿದ್ದಾರೆ.
‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಬಳಿಕ ಚೈತ್ರಾ ಆಚಾರ್ಗೆ ಬೇಡಿಕೆ ಹೆಚ್ಚಾಗಿದ್ದು, ಕೆಲವು ಹೊಸ ಸಿನಿಮಾಗಳನ್ನು ಚೈತ್ರಾ ಒಪ್ಪಿಕೊಂಡಿದ್ದಾರೆ.
ಚೈತ್ರಾ ಆಚಾರ್ ಪ್ರಸ್ತುತ ‘ಸ್ಟ್ರಾಬೆರ್ರಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ‘ಹ್ಯಾಪಿ ಬರ್ತ್ಡೇ ಟು ಮೀ’ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.
ಚೈತ್ರಾ ಆಚಾರ್ಗೆ ಕನ್ನಡ ಸಿನಿಮಾಗಳಿಂದ ಮಾತ್ರವಲ್ಲದೆ ಪರಭಾಷೆಯ ಸಿನಿಮಾಗಳಿಂದಲೂ ಅವಕಾಶಗಳು ಅರಸಿ ಬಂದಿವೆ. ಶೀಘ್ರವೇ ಪರಭಾಷೆ ಸಿನಿಮಾದ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ.
ಚೈತ್ರಾ ಆಚಾರ್ ಇನ್ಸ್ಟಾಗ್ರಾಂನಲ್ಲಿಯೂ ಬಹಳ ಸಕ್ರಿಯವಾಗಿದ್ದು, ಆಗಾಗ್ಗೆ ತಮ್ಮ ಗ್ಲಾಮರಸ್ ಚಿತ್ರಗಳನ್ನು ಚೈತ್ರಾ ಹಂಚಿಕೊಳ್ಳುತ್ತಿರುತ್ತಾರೆ.
ಚೈತ್ರಾ ಆಚಾರ್ ಇದೀಗ ತಮ್ಮ ಕೆಲವು ಹಾಟ್ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಒಳ್ಳೆಯ ನಟಿಯಾಗಿರುವ ಜೊತೆಗೆ ಹಾಟ್ ಆಗಿಯೂ ಕಾಣಿಸಿಕೊಳ್ಳಬಲ್ಲೆ ಎಂಬುದನ್ನು ತೋರಿಸಿದ್ದಾರೆ.