Breaking
Tue. Jan 14th, 2025

ದೆಹಲಿಯಲ್ಲಿರುವ ಐಟಿಸಿ ಗ್ರ್ಯಾಂಡ್ ಭಾರತ್ ನಲ್ಲಿ ವಿವಾಹ ನಡೆಯಲಿದೆ ; ಹಿಂದೂ ಸಂಪ್ರದಾಯದಂತೆ ವಿವಾಹ ..!

ದೆಹಲಿಯಲ್ಲಿರುವ ಐಟಿಸಿ ಗ್ರ್ಯಾಂಡ್ ಭಾರತ್ನಲ್ಲಿ ವಿವಾಹ ನಡೆಯಲಿದೆ. ಹಿಂದೂ ಸಂಪ್ರದಾಯದಂತೆ ವಿವಾಹ ಜರುಗಳಿದೆ. ಈ ಹೋಟೆಲ್ನಲ್ಲಿ ಯುರೋಪ್ನ ವಾಸ್ತುಶಿಲ್ಪ ಇದೆ. ಈ ಹೋಟೆಲ್ 300 ಎಕರೆಗೂ ದೊಡ್ಡ ಜಾಗದಲ್ಲಿದೆ. ಅರಾವಳಿ ಶ್ರೇಣಿಯಲ್ಲಿ ಈ ಹೋಟೆಲ್ ಇದೆ. ಈ ಹೋಟೆಲ್ನಲ್ಲಿ ನಾಲ್ಕು ವಿಲ್ಲಾ, 100 ಡಿಲಕ್ಸ್ ರೂಮ್, ಸ್ವಿಮ್ಮಿಂಗ್ ಪೂಲ್ಸ್ಗಳು ಕೂಡ ಇವೆ.

ಕೃತಿ ಕರಬಂಧ ಹಾಗೂ ಅವರ ಬಾಯ್ಫ್ರೆಂಡ್ ಪುಲ್ಕಿತ್ ಸಾಮ್ರಾಟ್ ಅವರ ಮದುವೆ ವಿಚಾರ ಇತ್ತೀಚೆಗೆ ಜೋರಾಗಿ ಚರ್ಚೆಯಲ್ಲಿದೆ. ಅವರ ಮದುವೆ ಆಮಂತ್ರಣ ಪತ್ರ ಕೂಡ ಇತ್ತೀಚೆಗೆ ವೈರಲ್ ಆಗಿತ್ತು. ಈ ಜೋಡಿ ಶೀಘ್ರವೇ ಮದುವೆ ಆಗಲಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಎಗ್ಸೈಟ್ ಆಗಿದ್ದಾರೆ. ಈವರೆಗೆ ಈ ಜೋಡಿ ಎಲ್ಲಿ ಮದುವೆ ಆಗಲಿದೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಈಗ ಇದಕ್ಕೆ ಉತ್ತರ ಸಿಕ್ಕಿದೆ. ದೆಹಲಿಯ ಐಷಾರಾಮಿ ಹೋಟೆಲ್ನಲ್ಲಿ ಕೃತಿ ಹಾಗೂ ಪುಲ್ಕಿತ್ ಸಾಮ್ರಾಟ್ ವಿವಾಹ ಆಗಲಿದ್ದಾರೆ ಎಂದು ತಿಳಿದು ಬಂದಿದೆ.

ಬಾಲಿವುಡ್ ಹಂಗಾಮ ಮಾಡಿರೋ ವರದಿ ಪ್ರಕಾರ ದೆಹಲಿಯಲ್ಲಿರುವ ಐಟಿಸಿ ಗ್ರ್ಯಾಂಡ್ ಭಾರತ್ನಲ್ಲಿ ಮದುವೆ ನಡೆಯಲಿದೆ. ಪಕ್ಕಾ ಹಿಂದೂ ಸಂಪ್ರದಾಯದಂತೆ ವಿವಾಹ ಕಾರ್ಯ ಜರುಗಳಿದೆ. ಈ ಹೋಟೆಲ್ನಲ್ಲಿ ಯುರೋಪ್ನ ವಾಸ್ತುಶಿಲ್ಪ ಇದೆ. ಈ ಹೋಟೆಲ್ 300 ಎಕರೆಗೂ ದೊಡ್ಡ ಜಾಗದಲ್ಲಿದೆ ಅನ್ನೋದು ವಿಶೇಷ. ಅರಾವಳಿ ಶ್ರೇಣಿಯಲ್ಲಿ ಈ ಹೋಟೆಲ್ ಇದೆ. ಈ ಹೋಟೆಲ್ನಲ್ಲಿ ನಾಲ್ಕು ವಿಲ್ಲಾ, 100 ಡಿಲಕ್ಸ್ ರೂಮ್, ಸ್ವಿಮ್ಮಿಂಗ್ ಪೂಲ್ಸ್ಗಳು ಕೂಡ ಇವೆ. ಗಾಲ್ಫ್ ಮೈದಾನ, ಸ್ಪಾ ಮೊದಲಾದ ಸೇವೆಗಳು ಲಭ್ಯವಿದೆ. ಡೆಸ್ಟಿನೇಷನ್ ವೆಡ್ಡಿಂಗ್ಗೆ ಈ ಜಾಗ ಹೇಳಿ ಮಾಡಿಸಿದಂತೆ ಇದೆ.

ಕೃತಿ ಹಾಗೂ ಪುಲ್ಕಿತ್ ದೆಹಲಿಯಲ್ಲಿ ಹುಟ್ಟಿ ಬೆಳೆದವರು. ಈ ಕಾರಣಕ್ಕೆ ದೆಹಲಿಯಲ್ಲೇ ಮದುವೆ ಆಗಬೇಕು ಎಂದು ಅವರು ನಿರ್ಧರಿಸಿದ್ದಾರೆ. ಇದೇ ಹೋಟೆಲ್ನಲ್ಲಿ ಮದುವೆಗೂ ಪೂರ್ವದ ಕಾರ್ಯಗಳಾದ ಸಂಗೀತ್, ಮೆಹಂದಿ ಕಾರ್ಯಕ್ರಮಗಳು ಕೂಡ ನಡೆಯಲಿವೆ.

ಪುಲ್ಕಿತ್ ಹಾಗೂ ಕೃತಿ ‘ಪಾಗಲ್ಪಂತಿ’ ಸಿನಿಮಾದಲ್ಲಿ ಭೇಟಿ ಆದರು. ಈ ವರ್ಷದ ಆರಂಭದಲ್ಲಿ ಇವರು ಎಂಗೇಜ್ಮೆಂಟ್ ಮಾಡಿಕೊಂಡರು. ಈ ಫೋಟೋಗಳು ವೈರಲ್ ಆಗಿತ್ತು. ಇವರು ಪ್ರೀತಿ ವಿಚಾರವನ್ನು ನೇರವಾಗಿ ಹೇಳಿಕೊಂಡಿಲ್ಲ. ಬದಲಿಗೆ ಪುಲ್ಕಿತ್ ಜೊತೆ ಇರೋ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ.

ಕೃತಿ ಕರಬಂಧ ಅವರು 2009ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟರು. 2010ರಲ್ಲಿ ಕನ್ನಡದ ‘ಚಿರು’ ಸಿನಿಮಾದಲ್ಲಿ ನಟಿಸಿದರು. ಆ ಬಳಿಕ ಅವರಿಗೆ ಕನ್ನಡದಿಂದ ಸಾಕಷ್ಟು ಆಫರ್ಗಳು ಬಂದವು. ‘ಗೂಗ್ಲಿ’ಯಲ್ಲಿ ನಟಿಸಿ ಅವರು ಫೇಮಸ್ ಆದರು. ಸದ್ಯ ಹಿಂದಿ ಚಿತ್ರರಂಗದಲ್ಲಿ ಅವರು ಬ್ಯುಸಿ ಇದ್ದಾರೆ.

Related Post

Leave a Reply

Your email address will not be published. Required fields are marked *