ಕಲಬುರಗಿ, ಮಾರ್ಚ್ 13: ಒಂದೇ ದಿನಕ್ಕೆ ಬಿಜೆಪಿ ಖಜಾನೆಗೆ 335 ಕೋಟಿ ರೂಪಾಯಿ ಬಂದಿದೆ. ಬಿಜೆಪಿಯವರಿಗೆ ಇಷ್ಟು ಬೇಗ ಅಷ್ಟು ದುಡ್ಡು ಹೇಗೆ ಬಂತು ಎಂದು ಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ ಮಾಡಿದ್ದಾರೆ.
ನಗರದ ಎನ್ವಿ ಮೈದಾನದಲ್ಲಿ ನಡೆಯುತ್ತಿರುವ ಗ್ಯಾರಂಟಿ ಸಮಾವೇಶದಲ್ಲಿ ಅವರು ಮಾತನಾಡಿದರು, ನಮಗೆ ಖರ್ಚು ಮಾಡಲು ಹಣವಿಲ್ಲ. ಖಾತೆ ಬಂದ್ ಮಾಡಿದ್ದಾರೆ. ಐಟಿ ಇಲಾಖೆ ಮೂಲಕ ನಮಗೆ ದಂಡ ಹಾಕಿ ಲಾಕ್ ಮಾಡಿದೆ. ಆದರೆ ಬಿಜೆಪಿಯವರಿಗೆ ಇಷ್ಟು ಬೇಗ ಅಷ್ಟು ದುಡ್ಡು ಹೇಗೆ ಬಂತು ಎಂದು ಕಿಡಿಕಾರಿದ್ದಾರೆ.
ಮೋದಿ ಒಬ್ಬ ನೊಣವನ್ನೂ ಹೊಡೆದಿಲ್ಲ, ಪ್ರಚಾರನೇ ಜಾಸ್ತಿ. ಸಿಕ್ಕಿದ್ರೆ ಅಲ್ಲಿ ಎಲ್ಲಿ ಬೆಂಕಿ ಇಡುವ ಕೆಲಸವನ್ನು ಮಾಡುತ್ತಾರೆ. ಹೇಳಿದಂತೆ ಮಾಡೋದು ಕಷ್ಟ, ಬೆಂಕಿ ಹಚ್ಚೋದು ಸುಲಭ. ಗುಜರಾತ್‌ನಲ್ಲಿ 5 ವರ್ಷದ 500 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಜೆಪಿಯವರು ಮೋಸಗಾರರು, ಬಿಜೆಪಿ ನಾಯಕರ ಮಾತಿಗೆ ಮರಳಾಗಬೇಡಿ ಎಂದು ವಾಗ್ದಾಳಿ ಮಾಡಿದ್ದಾರೆ.
ಬರೀ ಧ್ವಜ ತೋರಿಸಿದರೆ ಅಭಿವೃದ್ಧಿ ಆಗುತ್ತಾ? ಹಳಿ ನಮ್ಮದೂ ಅದರ ಮೇಲೆ ಬರುವುದು ನಿಮ್ಮ ಬರೀ ಡಬ್ಬಿ ಮಾತ್ರ. ನಾವು ಪಕ್ಷದ ಮೇಲೆ ಕೆಲಸ ಮಾಡಿಲ್ಲ. ಜನ ಹಿತಕ್ಕಾಗಿ ಕೆಲಸ ಮಾಡಿದ್ದೇವೆ. ನನ್ನ ಹಲವು ಕಡೆಗಳಲ್ಲಿ ನಾವು ರೈಲುಗಳನ್ನು ಬಿಟ್ಟಿದ್ದೇವೆ. ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳಕ್ಕೆ ಏನ್ ಮಾಡಿದ್ದಾರೆ. ಇವರಿಗೆ ಓಟ್ ಕೊಡಬೇಕಾ ಎಂದು ಪ್ರಶ್ನಿಸಿದ್ದಾರೆ.
ನುಡಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ನಡೆದಿದೆ. ನಡಿದಂತೆ ನಡೆಯೋದು ಅಷ್ಟು ಸುಲಭವಲ್ಲ. ಮೋದಿ ಕೂಡ ಬಹಳ ಗ್ಯಾರಂಟಿಗಳನ್ನ ಕೊಟ್ಟಿದ್ದರು. ಮೋದಿ ಕಲಬುರಗಿಗೆ ಮಾರ್ಚ್ 18 ರಂದು ಬರುತ್ತಿದ್ದಾರೆ. ಬರಲೀ, ಬಂದ್ರೆ ಏನಾದ್ರು ಕೊಟ್ಟು ಹೋಗಬೇಕಲ್ಲ. ಮೋದಿ ಈ ಭಾಗಕ್ಕೆ ಏನ್ ಕೊಟ್ಟಿದ್ದಾರೆ ಹೇಳಿ ಎಂದು ನೆರೆದ ಜನತೆಯನ್ನ ಕೇಳಿದರು.
ನೀವು ನಮಗೆ ಬೈದರೂ ಬೈಗುಳ ತಿನ್ನುವೆ, ಆದರೆ ನೀವು ಕೆಲಸ ಮಾಡಿ. ಮೋದಿ ಅವರಿಗೆ ಬೇಕು ಅಲ್ಲಿ ಯೋಜನೆಗಳನ್ನು ತೆಗೆದುಕೊಳ್ಳುತ್ತಾರೆ. ಮೋದಿ ಗ್ಯಾರಂಟಿ ಏನ್? ಉದ್ಯೋಗ ಕೊಡ್ತಿನಿ ಅಂದ್ರು ಕೊಡಲಿಲ್ಲ. ಎಂಎಸ್ಪಿ ಕೊಡ್ತಿವಿ ಅಂತಾ ಅಂದ್ರು ಕೊಡಲಿಲ್ಲ. ನಾವು ಅಧಿಕಾರಕ್ಕೆ ಬಂದರೆ ಎಂಎಸ್ಪಿ ಜಾರಿಯಾಗುತ್ತದೆ. ಮೋದಿ ಹೈತೋ ಮುಮಕೀನ್ ಹೈ ಅಂತಾರೇ, ಅರೇ ಭಾಯ್ ಆಪ್ ಹೈತೋ ಕಾಮ್ ಕ್ಯೂಂ ನಹಿ ಹೋರಾ ಎಂದು ಕಿಡಿಕಾರಿದ್ದಾರೆ.