ಕೊಪ್ಪಳ : ಮಕ್ಕಳ ಬ್ಯಾಂಕ್ ಖಾತೆಗೆ ಹಣವನ್ನು ಹಾಕಬೇಕಾದ ಮುಖ್ಯ ಶಿಕ್ಷಕ ತಾನೇ ಬಳಸಿಕೊಂಡಿರುವ ಘಟನೆ ಜಿಲ್ಲೆಯ ಕನಕಗಿರಿ ತಾಲೂಕಿನ ಬೈಲಕ್ಕಂಪುರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಉಮೇಶ ಎಂಬ ಮುಖ್ಯ ಶಿಕ್ಷಕರಿಂದ ಹಣ ದುರ್ಬಳಕೆ ಮಾಡಲಾಗಿದೆ.
ಸುಮಾರು 20 ಸಾವಿರ ರೂಪಾಯಿ ಸ್ವಂತಕ್ಕೆ ಬಳಸಲಾಗಿದೆ. ಕೊರೊನಾ ಸಂದರ್ಭದಲ್ಲಿ ಬಿಸಿಯೂಟದ ವಿದ್ಯಾರ್ಥಿಗಳ ಖಾತೆಗೆ ಸರ್ಕಾರ ಸೂಚನೆ ನೀಡಿತ್ತು.
ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಬೈಲಕ್ಕಪುರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಬ್ಯಾಂಕ್ ಖಾತೆಗೆ ಹಾಕಬೇಕಾದ ಹಣವನ್ನು ಮುಖ್ಯ ಶಿಕ್ಷಕ ತಾನೇ ಬಳಸಿಕೊಂಡಿರುವ ಘಟನೆ ನಡೆದಿದೆ.
ಕೊರೊನಾ ಸಂದರ್ಭದಲ್ಲಿ ಬಿಸಿಯೂಟದ ವಿದ್ಯಾರ್ಥಿಗಳ ಖಾತೆಗೆ ಸರ್ಕಾರ ಸೂಚನೆ ನೀಡಿತ್ತು. ತನಿಖೆಗೆ ಹೆದರಿ ರಾತ್ರೋರಾತ್ರಿ ವಿದ್ಯಾರ್ಥಿಗಳ ಕುಟುಂಬದವರಿಗೆ ಮುಖ್ಯ ಶಿಕ್ಷಕ ಹಣ ನೀಡಿದ್ದಾರೆ.
ಪ್ರತಿ ವಿದ್ಯಾರ್ಥಿಗೆ 248 ರೂಪಾಯಿ ಡಿಬಿಟಿ ಮೂಲಕ ನೀಡಬೇಕಿತ್ತು. ಡಿಬಿಟಿ ಮಾಡಬೇಕಾದ ಸ್ವಂತ ಖಾತೆಗೆ ಮುಖ್ಯ ಶಿಕ್ಷಕ ಹಾಕಿಸಿಕೊಂಡಿದ್ದಾರೆ. ಆದರೆ ಇಲಾಖೆಯಿಂದ ತನಿಖೆ ಹಿನ್ನೆಲೆ ಎಚ್ಚೆತ್ತು ಬಳಿಕ ರಾತ್ರೋರಾತ್ರಿ ವಿದ್ಯಾರ್ಥಿಗಳಿಗೆ ಮುಖ್ಯ ಶಿಕ್ಷಕ ಹಣ ನೀಡಿದ್ದಾರೆ.