ಮಡಿಕೇರಿ : ಬಿಸಿಲಿನ ತಾಪದಿಂದ ತತ್ತರಿಸಿ ಹೋಗಿದ್ದ ತಾಲ್ಲೂಕಿನ (ಮಡಿಕೇರಿ) ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಇಲ್ಲಿನ ಮೂರ್ನಾಡು ಹಾಗೂ ಕಿಗ್ಗಲೂ ಗ್ರಾಮದಲ್ಲಿ ಧಿಡೀರ್ ಮಳೆ ಜೊತೆಗೆ ಗ್ರಾಮಗಳ ಸುತ್ತಮುತ್ತ ಕೂಲ್ ಕೂಲ್ ವಾತಾವರಣ ಸೃಷ್ಟಿಯಾಗಿದೆ.
ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆಯಾದ ಪರಿಣಾಮ ಕೊಡಗಿನ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗಿತ್ತು. ಪ್ರಸ್ತುತ ಜಿಲ್ಲೆಯ ಹಲವೆಡೆಯ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಎದುರಾಗಿದೆ. ಕಾಡು ಪ್ರಾಣಿಗಳಿಗೆ ನೀರಿಲ್ಲದೇ ನಾಡಿನತ್ತ ಲಗ್ಗೆ ಇಡುತ್ತಿವೆ. ಇಂತಹ ಹೊತ್ತಿನಲ್ಲಿ ಮಳೆ ಜನ ಸಂಭ್ರಮಿಸಿದ್ದಾರೆ.
ಮಳೆ ಇಲ್ಲದೇ ಕಂಗಾಲಾಗಿದ್ದ ಕಾಫಿ ಬೆಳೆಗಾರರ ಮೊಗದಲ್ಲಿ ಈಗ ಮಂದಹಾಸ ಮೂಡಿದೆ. ಇನ್ನೂ ನಾಪೋಕ್ಲು ಅಯ್ಯಗೇರಿ, ಭಾಗಮಂಡಲ ರಚನೆ ಮೋಡ ಕವಿದಿದ್ದು, ವಾತಾವರಣ ತಂಪಾಗಿದೆ. ಮಳೆಯಿಂದಾಗಿ ವಾಹನ ಸವಾರರು ಕೆಲವೆಡೆ ಪರದಾಡಿದ್ದಾರೆ.