ಬೋನಸ್ ಹಣ ಎನ್ನುವುದು ಇಡೀ ವರ್ಷದ ದುಡಿಮೆಯ ಫಲ. ಹಾಗಾಗಿ ಹೆಚ್ಚಿನವರು ಈ ಹಣವನ್ನು ಖರ್ಚು ಮಾಡಲು ಹೋಗದೆ ಭವಿಷ್ಯದ ದೃಷ್ಟಿಯಿಂದ ಕೂಡಿರುತ್ತಾರೆ.
ಆದರೆ ಇಲ್ಲೊಬ್ಬ ನಿಸ್ವಾರ್ಥ ಮನಸ್ಸಿನ ಶಿಕ್ಷಕ ತನ್ನ ವಿದ್ಯಾರ್ಥಿಗಳ ಕಲಿಕೆಗೆ ಉತ್ತಮ ವಾತಾವರಣವನ್ನು ರೂಪಿಸಬೇಕು ಎಂಬ ಕಾರಣದಿಂದ ತನಗೆ ಲಭಿಸಿದ ಬೋನಸ್ ಹಣದಿಂದ ತರಗತಿಯ ನವೀಕರಣ ಕೆಲಸ ಮಾಡಿದ್ದಾರೆ. ಶಿಕ್ಷಕನ ಈ ಉತ್ತಮ ಕಾರ್ಯಕ್ಕೆ ನೆಟ್ಟಿಗರಿಂದ ಭರಪೂರ ಮೆಚ್ಚುಗೆ ಲಭಿಸಿದೆ.
ಘಟನೆ ಮಲೇಷ್ಯಾದಲ್ಲಿ ನಡೆದದ್ದು ಎಂದು ಹೇಳಲಾಗುತ್ತಿದೆ. ಇಲ್ಲಿನ ಶಾಲೆಯೊಂದರ ಶಿಕ್ಷಕರಾದ ಕಮಲ್ ಡಾರ್ವಿನ್ ಎಂಬವರು ತಮ್ಮ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಕಲಿಕೆ ಮತ್ತು ಕಲಿಕಾ ಸಾಮಾರ್ಥ್ಯವನ್ನು ಸುಧಾರಿಸಲು ತಮ್ಮ ಬೋನಸ್ ಹಣದಿಂದ ತರಗತಿಯ ನವೀಕರಣ ಕೆಲಸ ಮಾಡಿದ್ದಾರೆ. ಇಂದಿಗೂ ಪ್ರಪಂಚದಲ್ಲಿನ ಅದೆಷ್ಟೋ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಬೇಕಾಗಿರುವ ಸೌಲಭ್ಯಗಳು ಇಲ್ಲವೇ ಇಲ್ಲ.
ಮೂತಭೂತ ಸೌಕರ್ಯದ ಕೊರತೆಯಿಂದ ಮಕ್ಕಳು ಸರಿಯಾಗಿ ಕಲಿಯುತ್ತಾ ಗಮನ ಕೂಡಾ ಹರಿಸುವುದಿಲ್ಲ. ಆದ್ದರಿಂದ ನನ್ನ ವಿದ್ಯಾರ್ಥಿಗಳು ಉತ್ತಮ ವಾತಾವರಣದಲ್ಲಿ ಕೂತು ಪಾಠ ಕೇಳಬೇಕು, ಅವರು ಯಾವುದೇ ರೀತಿಯ ಸೌಕರ್ಯಗಳಿಂದ ವಂಚಿತರಾಗಬಾರದೆಂದು ಕಮಲ್ ಡಾರ್ವಿನ್ ಬೋನಸ್ ಹಣವನ್ನು ತನಗಾಗಿ ಉಪಯೋಗಿಸಿಕೊಳ್ಳದೆ, ತರಗತಿಯನ್ನು ನವೀರಕಣಗೊಳಿಸಲು ಬಳಸಿಕೊಂಡಿದ್ದಾರೆ.
ವಿದ್ಯಾರ್ಥಿಗಳಿಗಾಗಿ ಹೊಸ ಟೇಬಲ್, ಚೇರ್, ಕಪಾಟುಗಳನ್ನು ತರಿಸಿದ್ದಾರೆ. ಹೀಗೆ ಸುಸಜ್ಜಿತ ಸೌಕರ್ಯಗಳೊಂದಿಗೆ ತರಗತಿಯನ್ನು ಸುಂದರವಾಗಿ ಮೇಕ್ ಓವರ್ ಮಾಡಿದ್ದಾರೆ. ಇವರ ಈ ನಿಸ್ವಾರ್ಥ ಕಾರ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭರಪೂರ ಮೆಚ್ಚುಗೆ ಲಭಿಸಿದೆ.