ಸರ್ಕಾರವು ಜಾರಿ ತಂದಿರುವ ಕೃಷಿಭಾಗ್ಯ ಯೋಜನೆಯಿಂದ ನೀರನ್ನು ಬಳಸಿ ರೈತರು ಕೃಷಿಯನ್ನು ಮಾಡುತ್ತಿದ್ದಾರೆ. ಒಣಭೂಮಿ ರೈತರಿಗೆ ಕೃಷಿಭಾಗ್ಯ ಯೋಜನೆ ವರದಾನವಾಗಿದ್ದು. ಕೃಷಿಭಾಗ್ಯ ಯೋಜನೆಗಾಗಿ ಸರ್ಕಾರ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡಿದೆ. ಕೃಷಿಹೊಂಡ ಮಾಡಿಕೊಂಡಿರುವ ರೈತರು ನೀರನ್ನು ಬಳಸಿಕೊಂಡು ಕೃಷಿ ಮಾಡುತ್ತಿದ್ದಾರೆ. ಯೋಜನೆಯ ಫಲವನ್ನು ಪಡೆದುಕೊಂಡ ರೈತರು ಸ್ವಾವಲಂಭಿಗಳಾಗಿ ಬದುಕು ಕಟ್ಟಿಕೊಂಡಿದ್ದಾರೆ. ಯೋಜನೆಯಿಂದ ಮನಸೂರೆಗೊಂಡಿದ್ದೇವೆ ಎಂದು ಸ್ವತಃ ರೈತರೆ ಹೇಳಿಕೊಂಡಿದ್ದಾರೆ.
ಕೃಷಿಭಾಗ್ಯ ಸಿದ್ದರಾಮಯ್ಯ ಸರ್ಕಾರದ ಅತ್ಯಂತ ಫಲಪ್ರಧ, ಫಲದಾಯಕ ಯೋಜನೆ ಎನ್ನಲಾಗುತ್ತದೆ. ಈ ಯೋಜನೆ ರಾಜ್ಯದ ಕೃಷಿ ಪದ್ಧತಿಯನ್ನು ಮೇಲ್ದರ್ಜೆಗೆ ಕೊಂಡೊಯ್ಯುವ ಜೊತೆಗೆ, ಕೃಷಿಯನ್ನು ಲಾಭದಾಯಕ ಉದ್ದಿಮೆ ಮಾಡುವತ್ತ ಹೆಜ್ಜೆ ಇಟ್ಟಿದೆ.
ಕೃಷಿ ಅಧಿಕಾರಿಗಳೇ ಹೇಳುವ ಪ್ರಕಾರ ಕೃಷಿ ಭಾಗ್ಯ ಯೋಜನೆ ಚಟುವಟಿಕೆಗೆ ಆದ್ಯತೆ ನೀಡುವ ಯೋಜನೆ, ಕೇವಲ ಕೃಷಿಗೆ ಮಾತ್ರವೇ ಒತ್ತು ನೀಡದೆ, ಕೃಷಿಯ ಉಪ ಕಸುಬುಗಳಿಗೂ ಈ ಯೋಜನೆ ಉತ್ತೇಜನ ನೀಡುತ್ತಿದೆ. ಕೃಷಿ ಹೊಂಡ, ಬದು ನಿರ್ಮಾಣ ಮುಂತಾದ ಕಾರ್ಯಕ್ರಮಗಳ ಮೂಲಕ ದೂರಗಾಮಿ ಕೃಷಿಗೆ ಆದ್ಯತೆ ನೀಡುವ ಕಾರ್ಯ ಮಾಡಲಾಗುತ್ತಿದೆ.
ಪ್ರಾದೇಶಿಕ ಅಸಮತೋಲನದಿಂದಾಗಿ ಅಭಿವೃದ್ಧಿಯಲ್ಲಿ ಹಿನ್ನಡೆ ಕಂಡಿದ್ದ ಕಲ್ಯಾಣ ಕರ್ನಾಟಕ ಇಂದು ಆರೋಗ್ಯ, ಶಿಕ್ಷಣ, ಉದ್ಯೋಗ, ಆಡಳಿತಾತ್ಮಕ ದೃಷ್ಟಿಯಿಂದ ರಾಜ್ಯದ ಇತರೆ ಜಿಲ್ಲೆಗಳಿಗೆ ಸಮಾನವಾಗಿ ಮುನ್ನಡೆಯುತ್ತಿದೆ. ಕರ್ನಾಟಕದಲ್ಲಿ ಅಭಿವೃದ್ಧಿಯ ಹೊಸ ಶಕೆ ಆರಂಭಗೊಂಡಿದೆ. “ಕೃಷಿ ಅವಲಂಬಿತ ಉದ್ಯೋಗ ಸೃಜನೆಗಾಗಿ ಕೃಷಿ ನವೋದ್ಯಮ ಕಾರ್ಯಕ್ರಮ”
ಕೃಷಿ ಕ್ಷೇತ್ರದಲ್ಲಿ ಉದ್ಯಮಶೀಲತೆ ಹೆಚ್ಚಿಸಲು ಹಾಗೂ ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗ ಸೃಜನೆಗಾಗಿ ಕೃಷಿಯಲ್ಲಿನ ನೂತನ ತಾಂತ್ರಿಕತೆಗಳು ಮತ್ತು ನವೀನ ಪರಿಕಲ್ಪನೆಗಳ ವಾಣಿಜ್ಯೀಕರಣವನ್ನು ಉತ್ತೇಜಿಸುವ ಗುರಿಯೊಂದಿಗೆ ಕೃಷಿ ನವೋದ್ಯಮ ಕಾರ್ಯಕ್ರಮದ ಅನುಷ್ಠಾನ.
“ಕೃಷಿ ಭಾಗ್ಯ – ಅನ್ನದಾತನಿಗೆ ಸೌಭಾಗ್ಯ”. ಹೊಸ ಕೃಷಿ ನವೋದಯಗಳಿಗೆ ಆರ್ಥಿಕ ನೆರವು ಶೇಕಡ 50ರಷ್ಟು ಸಹಾಯಧನ (ಕನಿಷ್ಠ 5 ಲಕ್ಷದಿಂದ ಗರಿಷ್ಠ 20 ಲಕ್ಷದವರೆಗೆ) ಬ್ಯಾಂಕ್ ಗಳ ಸಬ್ಸಿಡಿ ಮೂಲಕ ಸಾಲ ಒದಗಿಸಲಾಗುವುದು.
ಅಂತರ್ಜಲ ವೃದ್ಧಿ ಮತ್ತು ಮಳೆಯಾಶ್ರಿತ ಕೃಷಿ ಭೂಮಿಯಲ್ಲಿ ಬೇಸಿಗೆಯಲ್ಲಿಯೂ ಕೃಷಿ ಚಟುವಟಿಕೆ ಕೈಗೊಳ್ಳಲು ಅನುಕೂಲ ಕಲ್ಪಿಸುವ ಕೃಷಿಭಾಗ್ಯ ಯೋಜನೆಯನ್ನು ರಾಜ್ಯದ 24 ಜಿಲ್ಲೆಗಳ 106 ತಾಲ್ಲೂಕುಗಳಲ್ಲಿ ಪ್ಯಾಕೇಜ್ ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
ಕೃಷಿ ಭಾಗ್ಯದಡಿ ಕ್ಷೇತ್ರ ಬದು ನಿರ್ಮಾಣ, ಕೃಷಿ ಹೊಂಡ, ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ, ಪಂಪ್ ಸೆಟ್ ಹಾಗೂ ಸೂಕ್ಷ್ಮ ನೀರಾವರಿ ಘಟಕಗಳ ಅಳವಡಿಕೆ ಮಾಡಿಕೊಡಲಾಗುತ್ತದೆ.
ಅರ್ಹ ರೈತರು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿನೀಡಿ ಅರ್ಜಿ ಸಲ್ಲಿಸಿ, ಯೋಜನೆಯ ಗರಿಷ್ಠ ಉಪಯೋಗ ಪಡೆಯಬಹುದಾಗಿದೆ. ಕೃಷಿಭಾಗ್ಯ ಯೋಜನೆಯ ಪ್ರಮುಖ ಕಾರ್ಯಕ್ರಮ ಕೃಷಿ ಹೊಂಡ ನಿರ್ಮಾಣ. ಈ ಕಾರ್ಯಕ್ರಮ ರಾಜ್ಯದ ಬಹುತೇಕ ಕೃಷಿಕರ ಜೀವನ ಬದಲಾಯಿಸಿದೆ. ಕೃಷಿ ಹೊಂಡ ನಿರ್ಮಿಸಿ, ನೀರು ಆವಿಯಾಗದಂತೆ ಅಥವಾ ಇಂಗದಂತೆ ನೋಡಿಕೊಂಡು ಬೇಸಿಗೆ ಸಮಯದಲ್ಲಿ ಕೃಷಿಗೆ ಬಳಸಿಕೊಂಡು ಕೃಷಿ ಮಾಡಬಹುದಾಗಿದೆ.
ಕೃಷಿ ಹೊಂಡ ನಿರ್ಮಾಣ ಮತ್ತು ಅದಕ್ಕೆ ಹಾಕುವ ಪ್ಲಾಸ್ಟಿಕ್ ಕವರ್, ಫೆನ್ಸ್ ಎಲ್ಲದಕ್ಕೂ ಕೃಷಿ ಭಾಗ್ಯ ಯೋಜನೆಯಲ್ಲಿ ಸಹಾಯಧನ ನೀಡಲಾಗುತ್ತದೆ. ಅಷ್ಟೆ ಅಲ್ಲದೆ ಕೃಷಿ ಹೊಂಡದಿಂದ ಬೆಳೆಗೆ ನೀರು ಹಾಯಿಸಲು ಅಗತ್ಯವಾದ ಡೀಸೆಲ್ ಮೋಟಾರ್ ಖರೀದಿಗೆ ಕೃಷಿ ಭಾಗ್ಯ ಯೋಜನೆಯಡಿ ಸಬ್ಸಿಡಿ ನೀಡಲಾಗುತ್ತದೆ.