Breaking
Tue. Dec 24th, 2024

ಶ್ರೀಚಳ್ಳಕೆರೆಯಮ್ಮ ದೇವಿ ಜಾತ್ರೆಯ ನಾಲ್ಕನೇ ದಿನವಾದ ಗುರುವಾರ ಸಿಡಿ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು : ಕರ್ನಾಟಕ ಮಾತ್ರವಲ್ಲದೆ ಆಂಧ್ರ ಪ್ರದೇಶದಿಂದಲೂ ಸಾವಿರಾರು ಭಕ್ತರು

ರಾಮಾಂಜನೇಯ ಚನ್ನಗಾನಹಳ್ಳಿ ಚಳ್ಳಕೆರೆ : ಕಳೆದ ದಿನಗಳಿಂದ ನಡೆಯುತ್ತಿರುವ ಹೆಂಗಳೆಯರ ಆರಾಧ್ಯ ದೈವ ಶ್ರೀಚಳ್ಳಕೆರೆಯಮ್ಮ ದೇವಿ ಜಾತ್ರೆ ನಾಲ್ಕನೇ ದಿನವಾದ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಜರುಗಿತು.  ಪ್ರತಿ ನಾಲ್ಕು ವರುಷಕ್ಕೊಮ್ಮೆ ನಡೆಯುವ ಈ ಜಾತ್ರೆಗೆ ಕರ್ನಾಟಕದಲ್ಲಿ ಆಂಧ್ರ ಪ್ರದೇಶದಿಂದಲೂ ಸಾವಿರಾರು ಭಕ್ತರು ಬಂದು ದೇವಿಯ ದರ್ಶನ ಪಡೆದರು.

ಬುಧವಾರ ಮತ್ತು ಗುರುವಾರ ದೇವಿಯ ಜಾತ್ರೆಗೆ ಬಂದು ಹರಕೆ ಹೊತ್ತ ಮಹಿಳೆಯರು, ಮಕ್ಕಳು, ಪುರುಷರು ಸಿಡಿ ಕಂಬವನ್ನೇರಿ ದೇವಿಯ ಹರಿಕೆ ತೀರಿಸಿದರು. ಉತ್ಸವದಲ್ಲಿ ನಡೆಯುವ ಡೊಳ್ಳು ಕುಣಿತ, ವೀರನಾಟ್ಯ, ಕೋಲಾಟ, ಪೋತರಾಜರ ವೀರನಾಟ್ಯ, ನಂದಿಕೋಲು ವಿವಿಧ ಜಾನಪದ ಕಲಾತಂಡಗಳು ಜನರ ಗಮನ ಸೆಳೆದವು. ಸಿಡಿ ಉತ್ಸಕ್ಕೂ ಮುನ್ನ ಮುಕ್ತಿ ಬಾವುಟ ಹರಾಜು, ಪ್ರಕ್ರಿಯೆ ಹಳೆನಗರದ ಎಂ.ಸುಧಾಕ ರವರಿಗೆ ಸು. 25 ಸಾವಿರ ರೂಪಾಯಿಗಳಿಗೆ ಹರಾಜು ಪಡೆದು ದೇವಿ ಕೃಪೆಗೆ ಪಾತ್ರರಾದರು.

ನಂತರ ದೇವಿಗೆ ಹರಕೆ ಹೊತ್ತ ಭಕ್ತರು ಒಪ್ಪೊತ್ತಿನಿಂದ ಸಿಡಿ ಉತ್ಸವದ ಕಂಬ ಹೇರುವ ಮೂಲಕ ದೇವಿ ಹರಕೆಯನ್ನು ತೀರಿಸಿದರು. ಸಿಡಿ ದೇವಿಯ ಪವಾಡ : ಸಂಪ್ರದಾಯದಅತೆ ದೇವಿಯ ಸಿಡಿ ಕಂಬವನ್ನು ಹರಿಜನ ಮಹಿಳೆಯೇ ಹೇರಿದ ನಂತರವೇ ಮುಂದಿನ ಭಕ್ತರು ಹೇರುವುದು ವಾಡಿಕೆಯಾಗಿದೆ. ಇನ್ನೂ ಪ್ರತಿ ವರ್ಷ ಈ ದೇವಿ ವರವನ್ನಿತ ಮಹಿಳೆ ಒಪ್ಪತ್ತಿನಿಂದ ಸಿಡಿ ಕಂಬವೆರಲು ಸಜ್ಜಾಗುತ್ತಾರೆ.

ಮನೆಯಿಂದ ದೇವ ಸ್ವದೃಪದಿಂದ ಅಲಂಕಾರಗೊಂಡ ಈ ದೇವಿ ಮಹಿಳೆ ನಗರದ ಹಳೆಟೌನ್‌ನಿಂದ ನಗರದ ಎಲ್ಲಾ ಮುತ್ತೈದೆಯರು. ಕಂಭವನ್ನೇರಿ ಸಾವಿರ ಭಕ್ತರ ಹರ್ಷೋದ್ಗಾರಕ್ಕೆ ಉದೋ ಚಳ್ಳಕೆರಮ್ಮ ಎಂಬ ಜಯಘೋಷಗಳು ಮೊಳಗುತ್ತಾವೆ, ನಂತರ ದೇವಿಗೆ ವಿವಿಧ ಮಹಿಳಾ ತಮ್ಮ ಸಂಘ, ಸಂಸ್ಥೆಯವರು ಹಾಗೂ ಗ್ರಾಮದ ಮುತ್ಯಂದೆಯರು ದೇವಿಗೆ ಉಡಿಯಕ್ಕಿ, ಕುಪ್ಪಸ, ಸೀರೆ, ಹಸಿರುಬಳೆ, ಅರಶಿನ, ಕುಂಕುಮಗಳನ್ನು ನೀಡಿ ಇಷ್ಟಾರ್ಥಗಳನ್ನು ಕೋರಿದರು. ದೇವಿಗೆ ವಿವಿಧ ಹೂಗಳಿಂದ ಅಲಂಕರಿಸಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

ಇದರ ಜೊತೆಯಲ್ಲಿ ಗ್ರಾಮ ದೇವರುಗಳಾದ ಶ್ರೀವೀರಭದ್ರಸ್ವಾಮಿ, ಓರಗಲ್ಲಮ್ಮ, ಬಿಡಾರದಮ್ಮ ಸಿದ್ದರಾಮೇಶ್ವರ, ಉಡಿಸಲಮ್ಮ ಮುಂತಾದ ದೇವರುಗಳು ಚಳ್ಳಕೆರೆ ದೇವಸ್ಥಾನದಲ್ಲಿ ಕುಳಿತು ಸಾವಿರಾರು ಭಕ್ತರಿಗೆ ದರ್ಶನ.

ಚಳ್ಳಕೆರೆ ನಗರದ ಗ್ರಾಮ ದೇವತೆ ಶ್ರೀಚಳ್ಳಕೆರೆಯಮ್ಮ ದೇವಿ ಜಾತ್ರೆ ಅಂಗವಾಗಿ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಿಡಿ ಉತ್ಸವ ನಡೆಯಿತು.  ಚಳ್ಳಕೆರೆ ಗುರುವಾರ ನಡೆದ ಶ್ರೀಚಳ್ಳಕೆರೆಯಮ್ಮ ದೇವಿ ಜಾತ್ರೆಯ ಸಿಡಿ ಉತ್ಸವದಲ್ಲಿ ಭಾಗವಹಿಸಿದ್ದ ವಿವಿಧ ಜಾನಪದ ಕಲಾ ತಂಡಗಳು. 

ರಾಮಾಂಜನೇಯ ಚನ್ನಗಾನ ಚಳ್ಳಕೆರೆ : ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಹೆಂಗಳೆಯರ ಆರಾಧ್ಯ ದೈವ ಶ್ರೀಚಳ್ಳಕೆರೆಯಮ್ಮ ದೇವಿ ಜಾತ್ರೆ ನಾಲ್ಕನೇ ದಿನವಾದ ಗುರುವಾರ ಸಾವಿರಾರುನಹಳ್ಳಿ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು. ಪ್ರತಿ ನಾಲ್ಕು ವರುಷಕ್ಕೊಮ್ಮೆ ನಡೆಯುವ ಈ ಜಾತ್ರೆಗೆ ಕರ್ನಾಟಕದಲ್ಲಿ ಆಂಧ್ರ ಪ್ರದೇಶದಿಂದಲೂ ಸಾವಿರಾರು ಭಕ್ತರು ಬಂದು ದೇವಿಯ ದರ್ಶನ ಪಡೆದರು.

ಬುಧವಾರ ಮತ್ತು ಗುರುವಾರ ದೇವಿಯ ಜಾತ್ರೆಗೆ ಬಂದ ನೆಂಟರಿಷ್ಟರಿಂದ ನಗರ ತುಂಬಿತ್ತು. ಸಿಡಿಯ ಇಡೀ ದಿನ ಸಂಭ್ರಮ ಸಡಗರ ಭಕ್ತರಲ್ಲಿ ಮನೆ ಮಾಡಿತ್ತು. ಈ ಜಾತ್ರೆಯ ವಿಶೇಷವೆಂದರೆ ಸಿಡಿ ಉತ್ಸವ. ಈ ಉತ್ಸವವನ್ನು ನೋಡಲು ದೇವಸ್ಥಾನದಿಂದ ನೆಹರೂ ವೃತ್ತದವರೆಗೂ ಭಕ್ತಾಧಿಗಳು ಸಾಲುಗಟ್ಟಿ ಉತ್ಸವದ ಬಂಡಿಯನ್ನು ವೀಕ್ಷಿಸಿದರು.   

Related Post

Leave a Reply

Your email address will not be published. Required fields are marked *