Breaking
Tue. Dec 24th, 2024

ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ರ ಸಂಬಂಧ ಮತದಾನ ಕೇಂದ್ರಗಳ ಹೆಸರು ಹಾಗೂ ವಿಳಾಸ ಬದಲಾವಣೆಗೆ ಪ್ರಸ್ತಾವನೆ ಭಾರತ ಚುನಾವಣಾ ಆಯೋಗ ಅನುಮೋದನೆ ಪಡೆಯುವ ಕುರಿತು ಸಭೆ..!

ಚಿತ್ರದುರ್ಗ ಮಾರ್ಚ್ 14 ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ರ ಸಂಬಂಧ ಮತದಾನ ಕೇಂದ್ರಗಳ ಹೆಸರು ಹಾಗೂ ವಿಳಾಸ ಬದಲಾವಣೆಗೆ ಪ್ರಸ್ತಾವನೆ ಭಾರತ ಚುನಾವಣಾ ಆಯೋಗ ಅನುಮೋದನೆ ಪಡೆಯುವ ಕುರಿತು ಬುಧವಾರ ಜಿಲ್ಲಾಧಿಕಾರಿ ಟಿ ವೆಂಕಟೇಶ್ ಅಧ್ಯಕ್ಷತೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಸಲಾಯಿತು.

ಚುನಾವಣಾ ಆಯೋಗದ ನಿಯಮ ಅನುಸಾರಕ್ಕೆ ಮತಗಟ್ಟೆಗಳ ಹೆಸರು ಬದಲಾವಣೆ ಪ್ರಸ್ತಾವನೆಯಲ್ಲಿದ್ದಲ್ಲಿ ಕೇಂದ್ರಗಳ ಪಟ್ಟಿಯನ್ನು ರಾಜಕೀಯ ಪಕ್ಷಗಳ  ಗಮನಕ್ಕೆ ತಂದು ಭಾರತ ಚುನಾವಣಾ ಆಯೋಗದ ಅನುಮೋದನೆಗೆ ಸಲ್ಲಿಸಬೇಕಾಗಿರುತ್ತದೆ.

ಅದರಂತೆ ಚಿತ್ರದುರ್ಗ ಜಿಲ್ಲೆಗೆ ಸಂಬಂಧಿಸಿದ ಮತಗಟ್ಟಗಳ ಪಟ್ಟಿಯನ್ನು ಹಾಜರಿಸಿದ ಎಲ್ಲಾ ರಾಜಕೀಯ ಪಕ್ಷಗಳ ಗಮನಕ್ಕೆ ತರಲಾಯಿತು. ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಾಲ್ಕು ಮತಗಟ್ಟೆಗಳ ಸ್ಥಳ ಹಾಗೂ ಹೆಸರು ಬದಲಾವಣೆಗೆ ಸಲ್ಲಿಸಲಾಗಿದೆ.

  • ಮತಗಟ್ಟೆ ಸಂಖ್ಯೆ 217 ರ ಸರ್ಕಾರಿ ಪ್ರೌಢಶಾಲೆ ಪಿ ಮಹದೇವಪುರ ಒಂದು (ರೂಮ್ ನಂಬರ್ ಒಂದು) ಮತಗಟ್ಟೆಯನ್ನು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆ ಮಹದೇವಪುರ ಒಂದು ಗೆ ಬದಲಾವಣೆ ಮಾಡಲಾಗಿದೆ. ಮತಗಟ್ಟೆ ಸಂಖ್ಯೆ 224 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಓಬಳಾಪುರದಿಂದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಓಬಳಾಪುರಕ್ಕೆ ಬದಲಾವಣೆ ಮಾಡಲಾಗಿದೆ.
  • ಮತಗಟ್ಟೆ ಸಂಖ್ಯೆ 225ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ರೂಮ್ ನಂಬರ್ 1 ತಿಮ್ಮಣ್ಣನಾಕನ ಕೋಟೆ ಅಥವಾ ಟಿ ಎನ್ ಕೋಟೆ ಯಿಂದ ಸರ್ಕಾರಿ ಪ್ರೌಢಶಾಲೆ ರೂಂ ನಂಬರ್ ಒಂದು ತಿಮ್ಮ ನಾಯಕನ ಕೋಟೆ ಗೆ ಬದಲಾವಣೆ ಮಾಡಲಾಗಿದೆ.
  • ಮತಗಟ್ಟೆ ಸಂಖ್ಯೆ 226ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ರೂಂ ನಂಬರ್ ಎರಡು ಸರ್ಕಾರಿ ಪಿಯು ಕಾಲೇಜು  ರೂಮ್ ನಂಬರ್ ಎರಡು ತಿಮ್ಮಣ್ಣ ನಾಯಕನ ಕೋಟೆಗೆ ಬದಲಾವಣೆ ಮಾಡಲಾಗಿದೆ.
  • ಮತಗಟ್ಟೆ ಸಂಖ್ಯೆ 39 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ರೂಮ್ ನಂಬರ್1 ಹಳ್ಳಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರೂಂ ನಂಬರ್ 1 ವಡ್ಡರ ಸಿದ್ದವನಹಳ್ಳಿಗೆ ಬದಲಾವಣೆ ಮಾಡಲಾಗಿದೆ.
  • ಮತಗಟ್ಟೆ ಸಂಖ್ಯೆ ೪೦ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರೂಂ ನಂಬರ್ ಎರಡು ಸಿದ್ದವನಹಳ್ಳಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರೂಂ ನಂಬರ್ ಎರಡು ವಡ್ಡರ ಸಿದ್ದವನಹಳ್ಳಿಗೆ ಬದಲಾವಣೆ ಮಾಡಲಾಗಿದೆ.

ಜಿಲ್ಲೆಯ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ 285 ಮತಗಟ್ಟೆಗಳು, ಚಳ್ಳಕೆರೆ 260, ಚಿತ್ರದುರ್ಗ 288, ಹಿರಿಯೂರು 287, ಹೊಸದುರ್ಗ 242, ಹಾಗೂ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ 299 ಮತಗಟ್ಟೆಗಳು ಸೇರಿದಂತೆ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 1661 ಮತಗಟ್ಟೆಗಳು ಇವೆ.

ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಮತಗಟ್ಟೆಗಳ ಹೆಸರು ಬದಲಾವಣೆಯ ಪ್ರಸ್ತಾವನೆಯನ್ನು ಸಮಚಿತ ಮಾರ್ಗದ ಮೂಲಕ ಭಾರತ ಚುನಾವಣಾ ಆಯೋಗಕ್ಕೆ ಅನುಮೋದನೆಗಾಗಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಈ ಸಭೆಯಲ್ಲಿ ಉಪ ವಿಭಾಗಾಧಿಕಾರಿ ಎಂ ಕಾರ್ತಿಕ್ ಜಿಲ್ಲಾ ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಡಿ ಗೋಪಾಲಸ್ವಾಮಿ ನಾಯಕ, ಸಿ.ಪಿ.ಐ. & ಡಿ. ಓ. ಸಿ ಗೌಸ್ಪಿನ್ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಸಿಜೆ ನಾಸಿರುದ್ದೀನ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎಚ್ ಬಿ ನರೇಂದ್ರ, ಬಿ.ಎಸ್.ಪಿ ಜಿಲ್ಲಾ ಸಂಯೋಜಕ ಎಚ್ಎನ್ ಶಿವಮೂರ್ತಿ ಸೇರಿದಂತೆ ಚುನಾವಣಾ ಸಿಬ್ಬಂದಿ ಇನ್ನು ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.

Related Post

Leave a Reply

Your email address will not be published. Required fields are marked *