ಬೆಂಗಳೂರು : ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ವಾರ ಡ್ರಾಮಾ ಜೂನಿಯರ್ಸ್‌ಗೆ ಬಂದಿದ್ದಾರೆ. ಡ್ರಾಮಾ ಜೂನಿಯರ್ಸ್‌ನ ಪ್ರತಿಭಾವಂತ ಮಕ್ಕಳ ಅಭಿನಯಕ್ಕೆ ಶಿವಣ್ಣ ಮಂತ್ರಮುಗ್ಧಗೊಂಡಿದ್ದಾರೆ. ಮಫ್ತಿ ಚಿತ್ರದ ಅಣ್ಣನ ಪಾತ್ರದಲ್ಲಿ ಬಂದ ಪುಟ್ಟ ಶಿವಣ್ಣನ ಅಭಿನಯಕ್ಕೆ ಶಿವಣ್ಣ ಮನಸೋತಿದ್ದಾರೆ. ಘೋಸ್ಟ್ ಸಿನಿಮಾದ ಓಜಿ ಕ್ಯಾರೆಕ್ಟರ್ ಅನ್ನ ಕೂಡ ಒಬ್ಬ ಹುಡುಗ ಇಲ್ಲಿ ನಟಿಸಿ ತೋರಿಸಿದ್ದಾರೆ.
ಇದನ್ನು ನೋಡಿರೋ ಶಿವರಾಜ್ ಕುಮಾರ್ ತುಂಬಾ ಖುಷಿಪಟ್ಟಿದ್ದಾರೆ. ದೊಡ್ಡ ನಟ ಆಗುತ್ತಾನೆ ಅಂತಲೇ ಆ ಹುಡುಗನಿಗೆ ಹೇಳಿದ್ದಾನೆ. ಈ ವಾರದ ಮಹಾ ಸಂಚಿಕೆಯಲ್ಲಿ ಶಿವಣ್ಣನ ಆಗಮನ ಸ್ಪೆಷಲ್ ಆಗಿದೆ. ಕರಟಕ ದಮನಕ ಚಿತ್ರದ ಪ್ರಚಾರ ಮಾಡಿರೋ ಶಿವಣ್ಣ ಇಲ್ಲಿ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ.
ಡ್ರಾಮಾ ಜೂನಿಯರ್ಸ್ ಸೀಸನ್ -5 ಸ್ಪೆಷಲ್ ಕಾನ್ಸೆಪ್ಟ್ ಮಾಡುತ್ತಿದೆ. ವಾರವೂ ವಿಶೇಷ ಅತಿಥಿಗಳೂ ಬರ್ತಿದ್ದಾರೆ. ನಟಿ ಅಂಬಿಕಾ ಬಂದಿದ್ದರು. ಇವರು ಮಕ್ಕಳ ಪ್ರತಿಭೆ ಕಂಡು ಖುಷಿಪಟ್ಟಿದ್ದಾರೆ. ಕಳೆದವಾರವಷ್ಟೆ ಪ್ರಕಾಶ್ ರಾಜ್ ಆಗಮಿಸಿದ್ದರು. ಮಕ್ಕಳ ಶೋ ಅಂತ ಇವರೂ ಇಷ್ಟಪಟ್ಟು ಬಂದಿದ್ದರು. ತುಂಬಾನೆ ಎಂಜಾಯ್ ಕೂಡ ಮಾಡಿದ್ದರು. ಇದೀಗ ಇದೇ ಡ್ರಾಮಾ ಜೂನಿಯರ್ಸ್ ಶೋಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಆಗಮಿಸಿದ್ದಾರೆ.
ಈ ಶನಿವಾರ ಸಂಜೆ 7.30 ರಿಂದ ರಾತ್ರಿ 10.30 ರವರೆಗೂ ಈ ಶೋ ನಡೆಯುತ್ತಿದೆ. ಈ ಪೈಕಿ ಇದನ್ನೇ ಮಹಾಸಂಚಿಕೆ ಅಂತಲೂ ಕರೆದಿದ್ದಾರೆ. ಇದೇ ಶೋದಲ್ಲಿ ಶಿವಣ್ಣನ ಪಾತ್ರದಲ್ಲಿ ಮಕ್ಕಳು ಪರಕಾಯ ಪ್ರವೇಶ ಮಾಡಿದ್ದಾರೆ. ಡ್ರಾಮಾ ಜೂನಿಯರ್ಸ್ ಮಕ್ಕಳು ತುಂಬಾ ಚೆನ್ನಾಗಿ ಶಿವಣ್ಣನ ಪಾತ್ರವನ್ನ ಅಭಿನಯಿಸಿದ್ದಾರೆ. ಘೋಸ್ಟ್ ಚಿತ್ರದ ಒರಿಜಿನಲ್ ಗ್ಯಾಂಗ್‌ಸ್ಟರ್ ಪಾತ್ರವನ್ನ ಒಬ್ಬ ಹುಡುಗ ಡಿಜಿ ಅಂದ್ರೆ ಡುಪ್ಲಿಕೆಟ್ ಗ್ಯಾಂಗ್‌ಸ್ಟರ್ ಅಂತ ಮಾಡಿ ಎಲ್ಲರನ್ನೂ ನಕ್ಕು ನಲಿಯುವಂತೆ ಮಾಡಿದ್ದಾನೆ.