ಬೆಂಗಳೂರು : ರಾಜ್ಯದಲ್ಲಿ ಹುಕ್ಕಾ ಮತ್ತು ಬಾರ್ ಗಳನ್ನು ನಿಷೇಧಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಫೆಬ್ರವರಿ ಯೋಳರಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಮುಕ್ತಾಯಗೊಳಿಸಿದ್ದು ಆದೇಶವನ್ನು ಕಾಯ್ದಿರಸಿದೆ.
ಇದೆ ವೇಳೆ ಹುಕ್ಕಾಬಳಕೆಯನ್ನು ಸರ್ಕಾರವು ಅತಿರೇಕವಾಗುವ ಮೊದಲು ನಿಭಾಯಿಸಿದರೆ ಉತ್ತಮವಾಗಿ ನಿಯಂತ್ರಣವಾಗಬಹುದು ಎಂದು ನ್ಯಾಯಮೂರ್ತಿ ಎಂ ನಾಗ ಪ್ರಸನ್ನ ಅವರು ಏಕ ಸದಸ್ಯ ಪೀಠ ಹೇಳಿದೆ.
ರಾಜ್ಯದಲ್ಲಿ ಮಾದಕ ವಸ್ತುಗಳಿಗೆ ಹೆಚ್ಚು ವಿದ್ಯಾರ್ಥಿಗಳು ವ್ಯಸನಿಗಳ ಆಗಿ ಹೊರಹೊಮ್ಮುತ್ತಿದ್ದಾರೆ, ಇವುಗಳನ್ನು ಹೇಗೆ ಮುಂದುವರಿಸಿದರೆ ಡ್ರಗ್ಸ್ ಮಾಫಿಯಾ ದಂತೆ ಹುಕ್ಕ ಹೆಚ್ಚಾಗಿ ಕಾಣಿಸುತ್ತಿದೆ ಇದನ್ನು ತಡೆಗಟ್ಟಗೆ ಸಾಧ್ಯವೇ ಇಲ್ಲದಂತಾಗುತ್ತದೆ.
ಆದ್ದರಿಂದ ರಾಜ್ಯದಲ್ಲಿ ಇಂತಹ ಮಾದಕ ವಸ್ತುಗಳನ್ನು ತಡೆಗಟ್ಟುವ ಕಾರ್ಯ ಎಲ್ಲರ ಹೊಣೆ ಆದ್ದರಿಂದ ಎಲ್ಲರೂ ಸೇರಿ ಈ ಮಾದಕ ವಸ್ತುಗಳನ್ನು ಬಹಿಷ್ಕರಿಸಿ ಆರೋಗ್ಯವನ್ನು ಕಾಪಾಡುವಂತೆ ತಿಳುವಳಿಕೆ ಮೂಡಿಸಬೇಕು. ಮದಕ ವಸ್ತುಗಳು ದೇಶದಲ್ಲಿ ಹೆಚ್ಚಾಗಿ ಕಾಣಿಸುತ್ತಿದೆ ಇದನ್ನು ಕಡಿವಾಣ ಮಾಡದಿದ್ದರೆ ಮುಂದೆ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.