ಚಿತ್ರದುರ್ಗ : ಕೆಳ ವರ್ಗದ ಅವಕಾಶ ವಂಚಿತ ಹಾಗೂ ಶೋಷಿತರಿಗೆ ದೇಶದ ಬ್ಯಾಂಕುಗಳ ಅವಕಾಶ ಕಲ್ಪಿಸಿ ಸರ್ಕಾರದ ಸೌಲಭ್ಯಗಳನ್ನು ತಲುಪಿಸಬೇಕು ಎಂದು ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆ ರಾಜ್ಯ ಸಚಿವರು ಹಾಗೂ ಸಂಸದರಾದ ಎ ನಾರಾಯಣಸ್ವಾಮಿ ಅವರು ಹೇಳಿದರು.
ನಗರದ ಐ.ಯು.ಡಿ.ಪಿ ಲೇಔಟ್ ನಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ ಪಿಎಂ ಶಿವರಾಜ್ ಪೋರ್ಟಲ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದೇಶದ ಶೇಕಡ 99ರಷ್ಟು ಬ್ಯಾಂಕುಗಳು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸೇರಿದಂತೆ ಇತರೆ ಅವಕಾಶ ವಂಚಿತರು ಹಾಗೂ ಶೋಷಿತರಿಗೆ ಕೇಂದ್ರ ಸರ್ಕಾರದ ಯೋಜನೆಗಳನ್ನು ರೂಪಿಸುವ ಬಗ್ಗೆ ಸಮರ್ಪಕವಾದ ಮಾಹಿತಿ ನೀಡುವುದಿಲ್ಲ.
ಕೆಳ ವರ್ಗದ ಜನರಿಗೆ ಬ್ಯಾಂಕುಗಳು ಸೌಲಭ್ಯಗಳನ್ನು ನೀಡುತ್ತಿಲ್ಲ ಇದು ದೇಶವೇ ನಾಚಿಕೆ ಮಾಡುವ ಸಂಗತಿಯಾಗಿದೆ ಎಂದು ಎ ನಾರಾಯಣಸ್ವಾಮಿ ಬೇಸರಗೊಂಡಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಿಂದ ರಾಜ್ಯ ಸರ್ಕಾರ ಮತ್ತು ವಿವಿಧ ನಿಗಮಗಳ ಮಂಡಳಿಗೆ ನೀಡುತ್ತಿರುವ ಹಣಕಾಸಿನ ಬಡ್ಡಿ ದರವನ್ನು ಕಡಿಮೆ ಮಾಡಲು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮ್ ಅವರ ಬಳಿ ಚರ್ಚಿಸಿದ ಫಲವಾಗಿ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಸ್ವಯಂ ಉದ್ಯೋಗಗಳನ್ನು ಕೈಗೊಳ್ಳಲು ಮತ್ತು ಉದ್ಯಮಿ ಸ್ಥಾಪಿಸಲು ಶೇಕಡ ಮೂರರಷ್ಟು ಬಡ್ಡಿದರದಲ್ಲಿ ಬ್ಯಾಂಕ್ ಸಾಲ ಸೌಲಭ್ಯವನ್ನು ಒದಗಿಸಲಾಗಿದೆ. ಎಂದು ಹೇಳಿದರು.
ಬ್ಯಾಂಕ್ ಸೌಲಭ್ಯಗಳು ನೇರವಾಗಿ ದೊರೆಯುವಂತೆ ಮಾಡಬೇಕು ಎಂಬ ಉದ್ದೇಶದಿಂದ ಪಿಎಂ ಸೂರಜ್ ಪೋರ್ಟಲ್ ಆರಂಭಿಸಲಾಗುತ್ತಿದೆ. ಪೋರ್ಟಲ್ ಬ್ಯಾಂಕುಗಳಿಗೆ ಉದ್ಯಮ ಸ್ಥಾಪಿಸಲು ಮತ್ತು ಇತರ ಆರ್ಥಿಕ ಚಟುವಟಿಕೆಗಳಿಗೆ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಲಾಗಿದೆ.
ಮಧ್ಯವರ್ತಿಗಳು ಅವಳಿಗೆ ಇರುವುದಿಲ್ಲ ಬ್ಯಾಂಕುಗಳು ವಿನಾಕಾರಣ ಅರ್ಜಿಯನ್ನು ತಿರಸ್ಕರಿಸಲು ಅರ್ಜಿದಾರರು ಅರ್ಜಿಯ ಸ್ಥಿತಿಗತಿ ಸಂಸ್ಥೆಗಳಿಗೆ ರಿಯಾಯಿತಿ ಕಡಿಮೆ ಬಡ್ಡಿದರದ ಸೌಲಭ್ಯಗಳು ಸಹ ಯಾವುದೇ ನೇರವಾಗಿ ರಾಜ್ಯಗಳಿಗೆ ದೊರೆಯಲಿದೆ ಎಂದು ಕೇಂದ್ರ ಸರ್ಕಾರದ ಸಚಿವ ಎ ನಾರಾಯಣಸ್ವಾಮಿ ಪ್ರಕಟಿಸಿದ್ದಾರೆ.
ಎನ್. ಎಸ್.ಸಿ.ಎಫ್.ಡಿ.ಸಿ, ಸಿ.ಜಿ.ಎಂ ರಮೇಶ್ ರಾವ್, ಅಪರ ಜಿಲ್ಲಾಧಿಕಾರಿ ಬಿ ಟಿ ಕುಮಾರಸ್ವಾಮಿ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಜನರಲ್ ಮ್ಯಾನೇಜರ್ ಎಸ್.ಕೆ. ಭಾಗ್ಯ ರೇಖಾ, ಹಿರಿಯ ವ್ಯವಸ್ಥಾಪಕಿ ಎಂ ನವ್ಯ ಹೆಗಡೆ, ಹಿರಿಯ ವ್ಯವಸ್ಥಾಪಕ ಮೊಸ್ಸೆ ಬಾಬು, ಲೀಡ್ ಬ್ಯಾಂಕ್ ವ್ಯವಸ್ಥಾಪಕ ತಿಪ್ಪೇಶ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ ಸೇರಿದಂತೆ ಮುಂತಾದವರು.