Breaking
Mon. Dec 23rd, 2024

ಬೆಂಗಳೂರಲ್ಲಿ ಮಾನವ ಕಳ್ಳಸಾಗಣೆ ಆರೋಪ, NCPCR ದಾಳಿಯಲ್ಲಿ 20 ಬಾಲಕಿಯರ ಪತ್ತೆ..!

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮಾನವ  ಆರೋಪ ಕೇಳಿಬಂದಿದೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ  ಶುಕ್ರವಾರ ಬೆಂಗಳೂರಿನಲ್ಲಿ ಮಾನವ ಕಳ್ಳ ಸಾಗಣೆ ಶಂಕೆಯ ಮೇಲೆ ದಾಳಿ ಮಾಡಿದದ್ದು, 20 ಮಕ್ಕಳು ಪತ್ತೆಯಾಗಿದ್ದಾರೆ. ಎನ್ಸಿಪಿಸಿಆರ್ ಅಧ್ಯಕ್ಷ ಪ್ರಿಯಾಂಕ್ ಕಂಗೂನ್ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, 20 ಬಾಲಕಿಯರನ್ನ ರಕ್ಷಿಸಲಾಗಿದೆ. ಇವರನ್ನು ಗಲ್ಫ್ ರಾಷ್ಟ್ರಗಳಿಗೆ ಸಾಗಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಮಕ್ಕಳ ಮನೆಯನ್ನು ನೋಡಿಕೊಳ್ಳುವ ಸಲ್ಮಾ ಎಂಬ ಮಹಿಳೆ ಕುವೈತ್‌ನಲ್ಲಿ ಕಳುಹಿಸುತ್ತಾಳೆ ಎಂದು ಬಾಲಕಿಯರು ತಿಳಿಸಿದ್ದಾರೆ. ಪ್ರಾಥಮಿಕ ಚರ್ಚೆಗಳಿಂದ, ಗಲ್ಫ್ ದೇಶಗಳಲ್ಲಿ, ಮದುವೆಯ ಹೆಸರಿನಲ್ಲಿ ಹುಡುಗಿಯರನ್ನು ಕಳ್ಳಸಾಗಣೆ ಮಾಡುವ ಕೆಲಸವನ್ನು ಇಲ್ಲಿ ಮಾಡಲಾಗುತ್ತದೆ.

ತನಿಖೆಯ ವೇಳೆ ಬಾಲಕಿಯರನ್ನು ಸಿಡಬ್ಲ್ಯುಸಿ ಮುಂದೆ ಹಾಜರುಪಡಿಸಲು ಮುಂದಾದಾಗ ಸಲ್ಮಾ ಎಂಬ ಮಹಿಳೆ ಮತ್ತು ಆಕೆಯ ಬಾಸ್ ಶಮೀರ್ ಗೂಂಡಾಗಳನ್ನು ಕರೆಸಿ ತಮ್ಮೊಂದಿಗೆ ಯತ್ನಿಸಿದ್ದಾರೆ. ಪೊಲೀಸರ ಮಧ್ಯಸ್ಥಿಕೆಯಲ್ಲಿ ಗೂಂಡಾಗಳನ್ನು ನಿಯಂತ್ರಿಸಲಾಗಿದೆ. ಪೊಲೀಸರ ಸಲಹೆ ಮೇರೆಗೆ ಮಹಿಳಾ ಅಧಿಕಾರಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಠಾಣೆಗೆ ಬಂದೆವು. ನಾವು ಬೆಂಗಳೂರು ಈಶಾನ್ಯ ಸಂಪಿಗಹಳ್ಳಿ ಪೊಲೀಸ್ ಠಾಣೆಗೆ ಬಂದಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಘಟನೆ ಬಗ್ಗೆ ಎಕ್ಸ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿ ಬರೆದುಕೊಂಡಿರುವ ಪ್ರಿಯಾಂಕ ಕಂಗೂನ್, ಇಂದು ಕರ್ನಾಟಕದ ಬೆಂಗಳೂರಿನಲ್ಲಿ ಅಕ್ರಮ ಅನಾಥಾಶ್ರಮದ ತಪಾಸಣೆ ವೇಳೆ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಇಲ್ಲಿ 20 ಹುಡುಗಿಯರಿದ್ದರು, ಅವರಲ್ಲೇ ಅನಾಥರು. ಈ ಹುಡುಗಿಯರನ್ನು ಶಾಲೆಗೆ ಕಳುಹಿಸುತ್ತಿರಲಿಲ್ಲ, ಎಲ್ಲಾ ಮಕ್ಕಳ ಮನೆಯಲ್ಲಿ ಕಿಟಕಿ ಅಥವಾ ಬೆಳಕಿಲ್ಲದ ಕೋಣೆಯಲ್ಲಿ ಜೈಲಿನಂತಹ ವಾತಾವರಣದಲ್ಲಿ ಇರಿಸಲಾಗಿತ್ತು. ಕೆಲವು ಹುಡುಗಿಯರು ಇಲ್ಲಿಗೆ ಬರುವ ಮೊದಲು ಶಾಲೆಗೆ ಹೋಗುತ್ತಿದ್ದರು, ಆದರೆ ಅವರ ಅಧ್ಯಯನವನ್ನು ನಿಲ್ಲಿಸಲಾಗಿದೆ ಎಂದು ಆರೋಪಿಸಿದ್ದಾರೆ.

ದಕ್ಷಿಣ ಭಾರತದಲ್ಲಿ ಇಂತಹ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಎನ್ ಸಿ ಪಿಸಿ ಆರ್ ತಿಳಿಸಿದೆ. ಸದ್ಯ ಎಫ್ಐಆರ್ ದಾಖಲಿಸುವಂತೆ ಸಂಪಿಗೇಹಳ್ಳಿ ಠಾಣೆಯಲ್ಲಿ ಮಾಹಿತಿ ನೀಡಿದ್ದಾರೆ. ಅಲ್ಲದೆ ಆ ಬಾಲಕಿಯರು ಯಾರು, ಏಕೆ ಇಲ್ಲಿದ್ದಾರೆ ಎನ್ನುವುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. 

ತನಿಖೆ ವೇಳೆ ಹೆಣ್ಣು ಮಕ್ಕಳ ವಸತಿ ಮದರಸಕ್ಕೆ ಅನುಮತಿ ಪಡೆದಿರೋದು ಬೆಳಕಿಗೆ ಬಂದಿದೆ. ಸದ್ಯ ಅಲ್ಲಿ ಯಾವುದೇ ಬೇರೆ ರೀತಿಯ ಚಟುವಟಿಕೆಗಳು ನಡೆದಿರೋ ಬಗ್ಗೆ ಮಾಹಿತಿ ಇಲ್ಲ. ಬಹುತೇಕ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ ನಾಳೆ ಮಕ್ಕಳ ಆಯೋಗಕ್ಕೆ ಮಾಹಿತಿ ನೀಡ್ತೀವಿ. ಅವರು ಮದರಸ ಪರಿಶೀಲನೆ ಬಳಿಕ ದೂರು ಕೊಟ್ಟರೇ ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದ್ದಾರೆ.ಆದರೆ ಬಾಲಕಿಯರ ಬಗ್ಗೆ ಮಾಹಿತಿ ಇಲ್ಲ ಎಂದರು.

Related Post

Leave a Reply

Your email address will not be published. Required fields are marked *