Breaking
Wed. Dec 25th, 2024

ನರೇಂದ್ರ ಮೋದಿ ಇಂದು ಕಲಬುರಗಿಯಲ್ಲಿ ಮಧ್ಯಾಹ್ನ 1 ಗಂಟೆಗೆ ಭರ್ಜರಿ ರೋಡ್‌ಶೋ

ಕಲಬುರಗಿ: ಲೋಕಸಭೆ ಕುರುಕ್ಷೇತ್ರಕ್ಕೆ ವೇದಿಕೆ ಸಿದ್ಧವಾಗಿದೆ. ಇಂದು (ಶನಿವಾರ) ಲೋಕಸಭೆಗೆ ದಿನಾಂಕ ಘೋಷಣೆ ಆಗಲಿದೆ. ಈ ಹೊತ್ತಿನಲ್ಲೇ ಎಐಸಿಸಿ ಅಧ್ಯಕ್ಷ ಖರ್ಗೆ ತವರಿನಿಂದಲೇ  ಪ್ರಧಾನಿ ಮೋದಿ  ಅಬ್ಬರದ ಪ್ರಚಾರಕ್ಕೆ ಚಾಲನೆ ನೀಡುತ್ತಿದ್ದಾರೆ.

ಇಂದು ಮಧ್ಯಾಹ್ನ 1 ಗಂಟೆಗೆ ಸೇನಾ ಹೆಲಿಕಾಪ್ಟರ್ ಮೂಲಕ ಡಿಎಆರ್ ಹೆಲಿಪ್ಯಾಡ್‌ಗೆ ಮೋದಿ ಆಗಮಿಸಲಿದ್ದಾರೆ. ಡಿಎಆರ್ ಮೈದಾನದಿಂದ ಎನ್.ವಿ ಮೈದಾನದ ವರೆಗೆ ಒಂದೂವರೆ ಕಿಲೋ ಮೀಟರ್ ರೋಡ್ ಶೋ ನಡೆಸಲಿದ್ದಾರೆ. 13 ರಿಂದ 15 ನಿಮಿಷ ರೋಡ್ ಶೋ ನಡೆಯಲಿದೆ. ಇದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. 

ಮಧ್ಯಾಹ್ನ 2 ಗಂಟೆಗೆ ಶುರುವಾಗುವ ಈ ಕಾರ್ಯಕ್ರಮದಲ್ಲಿ ಅಂದಾಜು 2 ಲಕ್ಷ ಜನ ಸೇರಲಿದ್ದಾರೆ. ಇದಕ್ಕಾಗಿ ನಗರದ ಎನ್‌ವಿ ಮೈದಾನದಲ್ಲಿ ಭರದ ಸಿದ್ಧತೆ ಸಹ ಮಾಡಲಾಗಿದೆ. ಇನ್ನು ಮಿನಿ ರೋಡ್ ಶೋ ಬಳಿಕ ನೇರ ಎನ್.ವಿ ಮೈದಾನಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದು, ಅಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ. ಇನ್ನು ಮೋದಿ ಅವರ ಈ ಕಾರ್ಯಕ್ರಮಕ್ಕೆ ರಾಜ್ಯ ಬಿಜೆಪಿ ಘಟಕ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸುಮಾರು 50 ಸಾವಿರಕ್ಕೂ ಅಧಿಕ ಆಸನಗಳ ವ್ಯವಸ್ಥೆ ಮಾಡಲಾಗಿದೆ. 

ಇಂದು ಮಧ್ಯಾಹ್ನ 3 ಗಂಟೆಗೆ ಲೋಕಸಮರಕ್ಕೆ ದಿನಾಂಕ ಘೋಷಣೆಯಾಗಲಿದೆ. ನೀತಿ ಸಂಹಿತೆ ಜಾರಿಗೆ ಕೆಲವೇ ಕ್ಷಣಗಳ ಮುನ್ನ ಕಲಬುರಗಿಯಲ್ಲಿ ಪ್ರಧಾನಿ ಮೋದಿ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಹೀಗಾಗಿ ಮೋದಿ ಭಾಷಣದ ಮೇಲೆ ದೇಶದ 140 ಕೋಟಿ ಜನರ ಕಣ್ಣು ಬಿದ್ದಿದೆ. 

140 ಕೋಟಿ ಜನರನ್ನ ಉದ್ದೇಶಿಸಿ ಪ್ರಧಾನಿಯಾಗಿ ಮೋದಿ ತಮ್ಮ 2ನೇ ಅವಧಿಯ ಕೊನೆ ಭಾಷಣ ಮಾಡಲಿದ್ದಾರೆ. ಕಲಬುರಗಿಯಿಂದಲೇ ಮೋದಿ 3.0 ಕಾರ್ಯಕ್ರಮಕ್ಕೆ ಕರೆ ನೀಡಲಿದ್ದಾರೆ. ಹೀಗಾಗಿ ಮೋದಿ ಭಾಷಣದತ್ತ ಇಡೀ ರಾಷ್ಟ್ರದ ಜನರ ಚಿತ್ತ ನೆಟ್ಟಿದೆ.

Related Post

Leave a Reply

Your email address will not be published. Required fields are marked *