ಚಿತ್ರದುರ್ಗದಲ್ಲಿ : ಎಲೆಮರಿ, ಕಾಯಿಯಾಗಿ ಬದುಕುತ್ತಿರುವ ಹಾಗೂ ಅವರ ಜೀವನವನ್ನು ಸಾಗಿಸಲು ರಂಗಭೂಮಿಯನ್ನೇ ಅವಲಂಬಿಸಿ ಇವರು ತಮ್ಮ ಕಲೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಹಾಗೂ ಕೋಟೆ ನಾಡಿನ ಜನತೆಗೆ ಮನರಂಜನೆಯನ್ನು ಸಹ ಕೊಡುವುದರ ಮೂಲಕ ಇವರ ಜೀವನ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಕಲಿಯೇ ಇವರ ಮೂಲದಾರ ಎಂದು ಇವತ್ತಿನ ಸಂಚಿಕೆಯಲ್ಲಿ ರಂಗ ಕಲಾವಿದರಾದ ಗಿರೀಶ್ ಅವರ ಬಗ್ಗೆ ತಿಳಿಯೋಣ.
ರಂಗಭೂಮಿಯು ಅನೇಕ ಜನರ ಜೀವನದಲ್ಲಿ ಅವರ ಸೃಜನಶೀಲತೆ ಪ್ರವರ್ಧಮಾನಕ್ಕೆ ಬರಲು ಅನುವು ಮಾಡಿಕೊಡುವ ಪ್ರಭಾವಶಾಲಿ ಅಂಶವಾಗಿದೆ, ಮತ್ತು ಮುಖ್ಯವಾಗಿ, ಅವರ ಸ್ವಯಂ ಅಭಿವ್ಯಕ್ತಿಯ ಬೆಳವಣಿಗೆಯನ್ನು ಸಕ್ರಿಯಗೊಳಿಸುತ್ತದೆ. ಇದು ಶಿಕ್ಷಣ ತಜ್ಞರ ಮೇಲೂ ಗಾಢವಾದ ಪರಿಣಾಮ ಬೀರಬಹುದು.
ರಂಗಭೂಮಿ ಮುಖ್ಯವಾಗಿದೆ ಏಕೆಂದರೆ ವಿದ್ಯಾರ್ಥಿಗಳು ಭಾಗವಹಿಸಿದಾಗ, ಅನ್ವೇಷಿಸದ ಅಥವಾ ವ್ಯಕ್ತಪಡಿಸುವ ಗುಪ್ತ ಸಾಮರ್ಥ್ಯವನ್ನು ಅನ್ವೇಷಿಸುವ ವಿಷಯದಲ್ಲಿ ಅವರು ಗಮನಾರ್ಹವಾಗಿ ಪ್ರಯೋಜನ ಪಡೆಯುತ್ತಾರೆ. ಹೆಚ್ಚುವರಿಯಾಗಿ, ಪ್ರೇಕ್ಷಕರ ಮುಂದೆ ಪ್ರದರ್ಶನಕ್ಕೆ ಸಂಬಂಧಿಸಿದ ಪ್ರತಿಬಂಧಗಳನ್ನು ತೊಡೆದುಹಾಕುವ ಮೂಲಕ, ಅವರು ತಮ್ಮ ವೃತ್ತಿಜೀವನದಲ್ಲಿ ಅಥವಾ ಉದ್ಯಮಶೀಲತೆಯ ಪ್ರಯಾಣದಲ್ಲಿ ಯಾವುದೇ ಸವಾಲುಗಳನ್ನು ಎದುರಿಸಲು ಹೆಚ್ಚು ಸಿದ್ಧರಾಗಿದ್ದಾರೆ.
ಚಿತ್ರದುರ್ಗದ ಪ್ರಸಿದ್ಧ ಎರಡು ರೆಪರ್ಟರಿಗಳು, *ಜಮುರಾ ಸುತ್ತಾಟ, ಶಿವದೇಶ ಸಂಚಾರ* ಗಳಲ್ಲಿ ಸೇವೆ ಸಲ್ಲಿಸಿದ ಅನೇಕ ರಂಗ ಪ್ರತಿಭೆಗಳು, ಈ ರಂಗ ಪ್ರತಿಭೆ ವಿಶೇಷವಾದದ್ದು, ಒಂದೇ ರೆಪರ್ಟರಿಯಲ್ಲಿ ಸುಮಾರು *13 ವರ್ಷಗಳ ಕಾಲ* ಸೇವೆ ಸಲ್ಲಿಸಿರುವ ಏಕೈಕ ಪ್ರತಿಭೆ,
ಈ ಪ್ರತಿಭೆನಗರ ರಾಮ ಜಿಲ್ಲೆ, ರಾಮನಗರ ತಾಲೂಕು, ಕೂಟಗಲ್ ಹೋಬಳಿ, ಶ್ಯಾನುಭೋಗನಹಳ್ಳಿ ಗ್ರಾಮ, ಶ್ರೀ.ಚಿನ್ನಗಿರಯ್ಯ ಮತ್ತು ಲೆ. ನಾಗರತ್ನಮ್ಮ* ದಂಪತಿಗೆ ಸೇರಿದ , ಕುಟುಂಬದಲ್ಲಿನ ಮೂರು ಜನ ಮಕ್ಕಳ ಎದ್ದು, ಈ ಪ್ರತಿಭೆ ಮೂರನೆಯ ಮಗ.
ಇತ್ತೀಚೆಗೆ ಕರ್ನಾಟಕ ಸರ್ಕಾರವು, ಬಸವಣ್ಣನವರನ್ನು *” ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ”* ಎಂದು ಘೋಷಿಸಲಾಗಿದೆ, ಇದು ಸಂತಸದ ವಿಷಯ. ಇದಕ್ಕೆ ಪೂರಕವಾಗಿ 2013 ರಲ್ಲಿ *ವೈ.ಡಿ.ಬಾದಾಮಿಯವರ* ನಿರ್ದೇಶನದಲ್ಲಿ, *ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪನವರು* ರಚಿಸಿದ *ಮಹಾಕ್ರಾಂತಿ* ಎಂಬ ನಾಟಕದಲ್ಲಿ, ಪ್ರಪ್ರಥಮ ಬಾರಿಗೆ *ಬಸವಣ್ಣನವರ* ಪಾತ್ರ ನಿರ್ವಹಿಸುತ್ತಾರೆ, ಆ ನಂತರದಲ್ಲಿ , *”ಮರಣ್ ಹೀ ಮಹಾನವಮಿ”* ಎಂಬ ಹಿಂದಿ ನಾಟಕದಲ್ಲೂ ಬಸವಣ್ಣನವರ ಪಾತ್ರಧಾರಿಯಾಗಿ ದೇಶದ ತುಂಬೆಲ್ಲ, ಬಸವಣ್ಣನವರ ತತ್ವಗಳನ್ನು ಪ್ರಚಾರಪಡಿಸುತ್ತಾರೆ.
ನಂತರ ನೀರತಾವರೆ, ಮಾದಾರ ಚೆನ್ನಯ್ಯ, ಮಹಾ ಬೆರಗು, ಅವಿರಳ ಜ್ಞಾನಿ ಚನ್ನಬಸವಣ್ಣ… ಹೀಗೆ ಶರಣರ ನಾಟಕಗಳು ಎಂದ ತಕ್ಷಣ, ಬಸವಣ್ಣನವರ ಪಾತ್ರಧಾರಿಯಾಗಿ, ಯಾವ ಹೊಸ ನಿರ್ದೇಶಕರು ಬಂದಲ್ಲಿಯೂ, ಇವರನ್ನು ಬಸವಣ್ಣನವರು ಪರಿಸರ ರಂಗಕ್ಕೆ ಕರೆತರುತ್ತಿದ್ದ ವಿಶೇಷವೇ ಸರಿ.
ಆತ್ಮೀಯ ಸ್ನೇಹಿತರು, ಹತ್ತಿರದ ಸಂಪರ್ಕ ಇವರನ್ನು “ರೆಪರ್ಟರಿಯ ಬಸವಣ್ಣ” ಎಂದು ಕರೆಯುವುದು ಉಂಟು. ಹೀಗೆ ಬಸವಣ್ಣನವರ ತತ್ವ, ಆದರ್ಶಗಳನ್ನು, ಭಕ್ತಿ,ಸಮಾನತೆ, ಕಾಯಕ, ದಾಸೋಹ, ವಿಶ್ವದ ಮೊದಲ “ಪಾರ್ಲಿಮೆಂಟ್ ” ಎನಿಸಿಕೊಂಡಿರುವ ” ಅನುಭವ ಮಂಟಪ” ಮಾಹಿತಿಯನ್ನ ಕರ್ನಾಟಕ ರಾಜ್ಯದ ತುಂಬಾ, ಹಾಗೂ ದೇಶದ ವಿವಿಧ ರಾಜ್ಯಗಳಿಗೆ ಸಾಗಿ, ಬಸವಣ್ಣನವರ ಆದರ್ಶಗಳನ್ನಾಗಿ, ಅವರ ಕನಸುಗಳನ್ನು ಜನರ ಮನೆ ಮನಗಳಿಗೆ ತಲುಪಿಸುವಂತಹ ಕೆಲಸಗಳು 10-12 ವರ್ಷಗಳಿಂದ ಮಾಡುತ್ತಾ ಬಂದಿರುವ, ಈ ರಂಗ ಪ್ರತಿಭೆ, ರಂಗಭೂಮಿ ಸ್ನೇಹಿತರು *ಪ್ರೀತಿ ರಾಗಿ* ಗೆ ಮತ್ತು ಅವರ ಕುಟುಂಬ ವರ್ಗಕ್ಕೆ ಬಸವಾದಿ ಶರಣರು ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಈ ಮೂಲಕ ಆಶಿಸುತ್ತೇವೆ.
” ರಾಗಿ ” ಎಂಬ *ರಂಗ ತೆನೆ* ನಿಜ ಬಿತ್ತಿದ ರಾಗಿ ಪೈರಾಗಿ, ಗಿಡವಾಗಿ, ತೆನೆ ಬಿಡುವಂತೆ, ಈ ರಾಗಿಯ ನೆನಪುಗಳು ರಂಗಭೂಮಿಯ, ಪೈರಾಗಿ, ಗಿಡವಾಗಿ, ಈಗ ತೆನೆಯಾಗಿ ತುಂಬಿವೆ..ರಾಮನಗರ* ಜಿಲ್ಲೆ, ರಾಮನಗರ ತಾಲ್ಲೂಕು, *ಕೂಟಗಲ್ಲ್* ಹೋಬಳಿಗೆ ಸೇರಿದ ಒಂದು ಹಳ್ಳಿ (*ಶ್ಯಾನುಭೋಗನಹಳ್ಳಿ*) ಯಿಂದ ಆ ನೆನಪಿನ ಪುಟ ತೆರೆಯುತ್ತದೆ. ಶ್ರೀ.ಚಿನ್ನಗಿರಯ್ಯ *ಲೇಟ್.ನಾಗರತ್ನಮ್ಮ* ದಂಪತಿಗಳಿಗೆ ಸೇರಿದ ಕುಟುಂಬ, ತಾಯಿ ಆಗಲೇ ಎಸ್ ಎಸ್ ಎಲ್ ಸಿ ಪೂರೈಸಿದವರು, ತಂದೆ ಓದು ಬರಹ ತಿಳಿಯದವರು ಈ ಕುಟುಂಬ ಹಣದಬಡತವಿದ್ದರೂ ಪ್ರೀತಿಯಲ್ಲಿ ಶ್ರೀಮಂತ ಕುಟುಂಬ, ಇಡೀ ಊರಿನ ಮಕ್ಕಳು ಕೆಲ ದೊಡ್ಡವರು ಕೂಡ ಆ ತಾಯಿಯನ್ನು “*ಮಮ್ಮಿ*” ಎಂದು ಪ್ರೀತಿಯಿಂದ ಕರೆಯುತ್ತಿದ್ದರು.
ಜೊತೆಗೆ ಕೂಟಗಲ್ಲಿನ ನಿವೃತ್ತ *ಮಾಸ್ಟರ್ ಚಿಕ್ಕಪ್ಪಯ್ಯ* ನವರ ಮಗಳಾಗಿದ್ದರಿಂದ, ತಂದೆಯ ತಂದೆ(ರಾಗಿಯ ತಾತ) *ವೆಂಕಟಪ್ಪ* ನವರು ಪ್ರಾಣಿಗಳಿಗೆ ನಾಟಿ ಔಷಧ ಮಾಡುತ್ತಿದ್ದರಿಂದ, ಈ ಕುಟುಂಬ ಊರಿನ ಎಲ್ಲರಿಗೂ *ಪ್ರೀತಿಯ ಕುಟುಂಬ* ವಾಗಿತ್ತು. ಇಂಥ ಕುಟುಂಬದ 3 ಜನ ಮಕ್ಕಳ ಪೈಕಿ, *ಕೊನೆಯ(ಮೂರನೇ) ಮಗ* ಈ “ರಾಗಿ”…
ಓದಿನಲ್ಲಿ ತೀರಾ ಬುದ್ಧಿವಂತನಲ್ಲದಿದ್ದರೂ, ಎಲ್ಲೂ ಅನ್ನುತ್ತೀರ್ಣ ನಾಗುವವನಲ್ಲ, ಇವನಿಗೆ ತನ್ನ ಊರಿನ,ತನ್ನ ಶಾಲೆ ಎಂದರೆ ಅಭಿಮಾನ. ಕಾರಣ ಅಲ್ಲಿ ಆತ್ಮೀಯ ಶಿಕ್ಷಕಿಯರಾದ *ರೇಣುಕಮ್ಮನವರು*, *ಸರಳ ಎಸ್ ಕೆ*, ಶಾರದಮ್ಮನವರು, ಪಾರ್ವತಮ್ಮನವರು, ವೆಂಕಟಾಚಲಯ್ಯ, ಶಿವಯ್ಯ, ಇಂತಹ ಅದ್ಭುತ ಶಿಕ್ಷಕ ವೃಂದವೇ ಅಲ್ಲಿತ್ತು.
ಬಾಲ್ಯದ ಗೆಳೆಯರಾದ ಮರಿಸ್ವಾಮಿ, ಮಂಜುನಾಥ, ವೆಂಕಟಪ್ಪ, ಮಂಜೇಶ, ಲೋಕೇಶ, ರಾಜೇಶ, ಮಹೇಶ, ಸಿದ್ದರಾಜು, ಸುರೇಶ, ನಾಗೇಶ, ಚಿತ್ರ, ರೂಪ, ತ್ರಿವೇಣಿ, ಗಿರಿಜಾ ಎಂಬ ಮೂವರು, ಪದ್ಮ, ಶಾಂತಮ್ಮ, ಶೋಭಾ, ಗೀತ, ಸುಕನ್ಯಾ, ನವೀನ ಕುಮಾರಿ, ಹೀಗೆ ಸ್ಪೂರ್ತಿದಾಯಕ ಗೆಳೆಯರ ಬಳಗವೇ ಆ ಶಾಲೆಯಲ್ಲಿತ್ತು.
ಆತ 7ನೇ ತರಗತಿಯಲ್ಲಿರುವಾಗಲೇ, ತನ್ನೂರಿನ ಶಾಲಾ ಶಿಕ್ಷಕಿಯಾದ ರೇಣುಕಮ್ಮನವರು, ರಚಿಸಿ ನಿರ್ದೇಶಿಸಿದ “ವರದಕ್ಷಿಣೆ ” ಎಂಬ ಕಿರು ನಾಟಕದಲ್ಲಿ *ಮುಖ್ಯ ಪಾತ್ರಧಾರಿ* ಯಾಗಿ, ಮತ್ತು “*ರಾಯರು ಬಂದರು ಮಾವನ ಮನೆಗೆ*” ಎಂಬ ಚಲನಚಿತ್ರದ “ಅಡವಿ ದೇವಿಯ ಕಾಡು ಜನಗಳ” ಎಂಬ ಗೀತೆಗೆ ನೃತ್ಯ ಮಾಡುವುದರ ಮೂಲಕ, ಹಾಗೂ ಆತ್ಮೀಯ ಶಿಕ್ಷಕಿಯಾದ *ಸರಳ ಎಸ್ ಕೆ* ಎಂಬುವರು ಕಲಿಸಿದ “ನಿನ್ನೊಲುಮೆ ನಮಗಿರಲಿ ತಂದೆ” ಹಾಡನ್ನು ಹಾಡುವ ಮೂಲಕ…
ಪಂಡಿತ್ ನೆಹರು ಪ್ರೌಢಶಾಲೆ ಕೂಟಗಲ್ ನಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವಾಗ ಗಾಯನ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಏಕಪಾತ್ರಾಭಿನಯ ಸ್ಪರ್ಧೆಗಳಲ್ಲಿ ಭಾಗವಹಿಸಿ, *ಏಕಪಾತ್ರಾಭಿನಯಕ್ಕಾಗಿ”ದ್ವಿತೀಯ ಸ್ಥಾನ* ” ಪ್ರಶಸ್ತಿ ಗಳಿಸುತ್ತಾರೆ. *ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯೊಂದರಲ್ಲಿ ಭಾಗವಹಿಸಿ ಅದರಲ್ಲೂ “ದ್ವಿತೀಯ ಸ್ಥಾನ”* ಗಳಿಸುತ್ತಾರೆ.
ಆಗಲೇ “*ಗುರುರಾಜುಲು ನಾಯ್ಡು*” ರವರ “*ಹರಿಕಥೆ*”ಗಳನ್ನು ಕೇಳುತ್ತಾ ಕಲೆಯ ಬಗ್ಗೆ ಅತೀವವಾದ ಆಸಕ್ತಿಯನ್ನ ಹೊಂದುತ್ತಾರೆ.ಇದಕ್ಕೆಲ್ಲ *ಸಿ.ಸಂಪತ್ ಕುಮಾರ್* ಎಂಬ ಹೆಸರಿನ ತನ್ನ ಮಾಮನವರು, ಹಾಗೂ *ಅಹಲ್ಯ* ಎಂಬ ದೊಡ್ಡಮ್ಮ ಬೆನ್ನೆಲುಬಾಗಿ ನಿಲ್ಲುತ್ತಾರೆ…
ಹೀಗೇ ತುಂಬಾ, ಮಾತಿನಲ್ಲಿ, ಚಟುವಟಿಕೆಯಲ್ಲಿ ಚುರುಕಾಗಿದ್ದ ಆ ಹುಡುಗನ ಹೃದಯಕ್ಕೆ ಬರ ಸಿಡಿಲು ಬಡಿದಂತೆ, ತನ್ನ ತಾಯಿಯ ಸಾವು, ಅವನ ಹೃದಯದ ಮಾತನ್ನು ಮೌನಕ್ಕೆ ನೂಕಿದವು…
ಅಲ್ಲಿಂದ ಬೆಂಗಳೂರಿಗೆ ಬಂದು, ವಿಧ ವಿಧ ಕೆಲಸ ಹುಡಿಕಿದರೂ, ಮೌನಕ್ಕೆ ಮಾತು ಬಾರಲಿಲ್ಲವಾಯಿತು ಆದರೆ ಒಮ್ಮೆ ಬೆಂಗಳೂರಿನ ಓಕಳಿಪುರದಲ್ಲಿ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಪರಿಚಯವಾದ “ಆಶ್ರಯ್ ಕುಮಾರ್.ಎಂ ” ಎಂಬ ಸಾಗರದ ಹುಡುಗನಿಗೆ, “ನೀನಾಸಂ” ಪರಿಚಯ, ಆತ ರಾಗಿಗೆ ಅಲ್ಲಿ ನಡೆಯುವ ಶಿಬಿರದ ಬಗ್ಗೆ ಮಾಹಿತಿ ನೀಡಿ, ಪರಿಚಯದ ಒಬ್ಬರಿಗೆ ಹೇಳಿ, ರಾಗಿಯನ್ನು ಆ ಶಿಬಿರದಲ್ಲಿ ಪಾಲ್ಗೊಳ್ಳಲು, ಸಹಾಯ ಮಾಡುತ್ತಾನೆ.
ರಂಗಭೂಮಿ ಆಸಕ್ತಿ ಜಾಸ್ತಿಯಾಗುತ್ತಾ ಸಾಗಿ… ಬೆಂಗಳೂರಿನ ಶ್ರೀರಾಂಪುರ ಪೊಲೀಸ್ ಠಾಣೆಯ *ಶಿವಕುಮಾರ್* ಎಂಬ ಪೊಲೀಸ್ ಪೇದೆಯೊಬ್ಬರು, ಇವರನ್ನು *ಸಿಲ್ಲಿ ಲಲ್ಲಿಯ ನಿರ್ದೇಶಕರಾದ ವಿಜಯ್ ಪ್ರಸಾದ್* ರವರಿಗೆ ಪರಿಚಯಿಸಿ *2005* ರಲ್ಲಿ ಸಿಲ್ಲಿ ಲಲ್ಲಿ ಧಾರಾವಾಹಿಯಲ್ಲಿ ಒಂದು ಸಣ್ಣ ಪಾತ್ರ ನಿರ್ವಹಿಸುತ್ತಾರೆ,
2006 ರಲ್ಲಿ ಪತ್ರಿಕೆಯೊಂದರ “*ಜಮುರಾ ಸುತ್ತಾಟ* ಕ್ಕೆ ಕಲಾವಿದರು ಬೇಕಾಗಿದ್ದಾರೆ” ಎಂಬ ಸುದ್ದಿಯನ್ನು ಓದಿ,ಸೀದಾ *ಚಿತ್ರದುರ್ಗಕ್ಕೆ* ಬರುತ್ತಾರೆ ಅಲ್ಲಿ *ಜಮುರಾ ಸುತ್ತಾಟ* ತಂಡದ ಆಗಿನ ಮ್ಯಾನೇಜರ್ ಆಗಿದ್ದ *ಏ ಜೆ ಪರಮಶಿವಯ್ಯ* ನವರು ಇವರನ್ನು ತಂಡಕ್ಕೆ ಆಯ್ಕೆಗೊಳಿಸುತ್ತಾರೆ. ಜೊತೆಗೆ ಆ ವರ್ಷದ ನಿರ್ದೇಶಕರಾಗಿದ್ದ *ಕೃಷ್ಣಮೂರ್ತಿ ಕವತ್ತಾರ್* ಇವರಿಗೆ ತಂಡದಲ್ಲಿ ಸ್ಥಾನ ನೀಡುತ್ತಾರೆ. ಜೊತೆಗೆ ಅದ್ಭುತ ಗಾಯಕರು, ಸಂಗೀತ ಶಿಕ್ಷಕರು ಆದ *ತೋಟಪ್ಪ ಉತ್ತಂಗಿ* ಯವರು, ಅದ್ಭುತ ಹಾಸ್ಯ ಕಲಾವಿದರಾದ *ಹಾಲಪ್ಪ ನಾಯ್ಕ* ರವರು ಕೂಡ ಇವರನ್ನು ತಂಡದಲ್ಲಿ ಉಳಿಸಿಕೊಳ್ಳಲು ಸಹಕಾರ ನೀಡುತ್ತಾರೆ.
ಆ ವರ್ಷ ಮೊದಲ ತಂಡವಾದರೂ ಅದ್ಭುತ ಕಲಾವಿದರ ತಂಡ. ಒಬ್ಬೊಬ್ಬರು ಒಂದೊಂದು ವಿಷಯದಲ್ಲಿ ಪರಿಣಿತರು, ಆನಂತರ ಸಾಣೇಹಳ್ಳಿಯ ಶಿವಸಂಚಾರ ದ ವ್ಯವಸ್ಥಾಪಕರಾದ ರಾಜು ಅವರು, ಇವರನ್ನು ಶಿವ ಸಂಚಾರ ತಂಡಕ್ಕೂ ಪರಿಚಯಿಸಿ, ಅಲ್ಲೂ ಕೂಡ ಒಂದು ವರ್ಷದ ಸಂಚಾರದ ಅನುಭವ ನೀಡುತ್ತಾರೆ.
ಅಲ್ಲಿಯೇ ಆರಂಭವಾಗಿದ್ದ “*ಶಿವದೇಶಿ ಸಂಚಾರ*” ದ ವ್ಯವಸ್ಥಾಪಕರಾಗಿದ್ದ ಹೆಚ್ಎಸ್ ದ್ಯಾಮೇಶ್ ರವರು ಕೂಡ ಎರಡು ಹಿಂದಿ ನಾಟಕದಲ್ಲಿ ಅಭಿನಯಿಸಿ, ದೇಶ ಸಂಚಾರ ಮಾಡಲು ಪ್ರೋತ್ಸಾಹ ನೀಡುತ್ತಾರೆ. ಅದೇ ತಂಡ *ಗಿರೀಶ* ಆಗಿದ್ದ ಹೆಸರನ್ನು “*ರಾಗಿ*” ಆಗಿ ಬದಲಾಯಿಸುತ್ತಾರೆ. ಹಾಗೆಯೇ ಯುವ ನಿರ್ದೇಶಕರಾದ *ಕಲ್ಲಪ್ಪ ಪೂಜೇರಾ* ಅವರು ತಮ್ಮ *ನಾಟ್ಯ ಯೋಗ* ತಂಡದಲ್ಲಿ ಇವರಿಗೆ ಅವಕಾಶ ಕಲ್ಪಿಸುತ್ತಾರೆ…
ರಂಗದ ಪ್ರಥಮ ಗುರು ಕೃಷ್ಣಮೂರ್ತಿ ಕವತ್ತಾರ್ ರವರು ನಂತರದ ವರ್ಷಗಳಲ್ಲಿ… ತಿಪ್ಪೆರುದ್ರ ಸ್ವಾಮಿಯಾಗಿ, ವಿಶ್ವಾಮಿತ್ರನಾಗಿ, ಬಸವಣ್ಣನಾಗಿ, ಪೊಲೀಸ್ ಅಧಿಕಾರಿಯಾಗಿ, ಕುರುಡನಾಗಿ, ಚನ್ನಬಸವಣ್ಣನಾಗಿ, ಲಂಬು ಸಿಂಗ್ ಆಗಿ, ನಾಗಲಿಂಗಸ್ವಾಮಿಯಾಗಿ, ಸಾಹುಕಾರ್ ರಾಜಣ್ಣನಾಗಿ, ಕಾಂಪೌಂಡರ್,ಹುಚ್ಚ, ಶರಣರ ಪಾತ್ರಗಳಲ್ಲಿ ನಟನಾಗಿ ಅಭಿನಯಿಸಿ, ಜನಮೆಚ್ಚುಗೆಗೆ, ಅಭಿಮಾನಕ್ಕೆ, ಪ್ರೀತಿಗೆ ಪಾತ್ರರಾಗಿದ್ದಾರೆ.
2013 ರಲ್ಲಿ *ವೈ.ಡಿ. ಬದಾಮಿ* ನಿರ್ದೇಶನದಲ್ಲಿ *ಬಸವಣ್ಣ* ನಾಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡ ನಂತರ ನಿರಂತರವಾಗಿ 9 ವರ್ಷವೂ, ಶರಣರ ನಾಟಕ ನಿರ್ದೇಶನಕ್ಕೆ ಬರುವ ಯಾವ ನಿರ್ದೇಶಕರಾದರು”ರಾಗಿ” ಗೆ *ಬಸವಣ್ಣ* ನವರ ಪಾತ್ರ ನೀಡುತ್ತಿದ್ದುದು ವಿಶೇಷ, ಒಂದೇ “ರೆಪಟ್ರಿ” ತಂಡದಲ್ಲಿ *13 ವರ್ಷ ನಟನಾಗಿ* ಭಾಗವಹಿಸಿದ ಕಲಾವಿದರು “ರಾಗಿ” ಯವರು,
2006 ರಿಂದ ಜಮುರಾ, ಶಿವಸಂಚಾರ,ಶಿವದೇಶಸಂಚಾರ, ನಾಟ್ಯಯೋಗ ತಂಡದಿಂದ 29 ಕನ್ನಡ, 2 ಹಿಂದಿನಾಟಕಗಳು ಸೇರಿ ಒಟ್ಟು 31 ನಾಟಕದಲ್ಲಿ ನಟರಾಗಿ, ತಂತ್ರಜ್ಞರಾಗಿ, ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುವಂತೆ ಮಾಡಿದೆ.
ಇದಲ್ಲದೆ ಯುವ ನಿರ್ದೇಶಕ *ಮಹದೇವ ಹಡಪದ್* ಅವರ ಜೊತೆ 5 ನಾಟಕಗಳು, *ಕೃಷ್ಣಮೂರ್ತಿ ಕವತ್ತಾರ್* ಅವರ ಜೊತೆ ಮೂರು ನಾಟಕ ಒಂದು ರೂಪಕ, *ವೈಡಿ ಬದಾಮಿ* ಅವರ ಜೊತೆ ಮೂರು ನಾಟಕಗಳು, *ಮಹಾಂತೇಶ್ ರಾಮದುರ್ಗ* ಅವರೊಂದಿಗೆ ನಾಲ್ಕು ನಾಟಕಗಳು, *ಕಲ್ಲಪ್ಪ ಪೂಜೇರಾ* ಅವರೊಂದಿಗೆ ಎರಡು ನಾಟಕಗಳು, *ಅಶೋಕ್ ಬಾದರ್ದಿನ್ನಿ* ಎಂಬ ಹೆಸರಾಂತ ನಿರ್ದೇಶಕರ ಜೊತೆ ಹಲವು ರೂಪಕಗಳಲ್ಲಿ, ಉಳಿದಂತೆ ಮೌನೇಶ್ ಬಡಿಗೇರ್, ಶ್ರೀಕಾಂತ್ ಎನ್,ವಿ , ಧನಂಜಯ ದಿಡಗ, ಪ್ರಕಾಶ್ ಗರುಡ, ಸಿ ಬಸವಲಿಂಗಯ್ಯ, ಯತೀಶ್ ಕೊಳ್ಳೇಗಾಲ, ಮಂಜುಳಾ ಬದಾಮಿ, ಕೆ ಜಿ ಕೃಷ್ಣಮೂರ್ತಿ, ಶಿರೀಶ್ ದೋಬಾಲ್, ಶೀಲಾ ಹಾಲ್ಕುರಿಕೆ, ಅಪ್ಪಣ್ಣ ರಾಮದುರ್ಗ, ಎಲ್ ಕೃಷ್ಣಪ್ಪ, ಕೆಪಿಎಂ ಗಣೇಶಯ್ಯ, ಮೊದಲಾದ ಅದ್ಭುತ ನಿರ್ದೇಶಕರ ಜೊತೆ, ಹಾಗೂ ಕೃಷ್ಣಮೂರ್ತಿ ಮೂಡಬಾಗಿಲು, ಚಂದ್ರಶೇಖರ ತಿಪಟೂರು, ಪ್ರಭುರಾಜ್ ಸೋಮಲಾಪುರ, ಮಾರಣ್ಣ ಬಿ ಆರ್ ಎಂಬ ಸಹಾಯಕ ನಿರ್ದೇಶಕರ ಜೊತೆಗೆ, ಮತ್ತು ರಾಮಚಂದ್ರ ಶೇರಿಕಾರ್, ಅಶೋಕ್ ತೊಟ್ನಳ್ಳಿ, ಲೇಟ್.ಮೋಹನ್ ಮೈಸೂರು ಎಂಬ ರಂಗ ಪರಿಕರ ತಯಾರಕರ ಜೊತೆಗೆ, ರಾಮಕೃಷ್ಣ ಬೆಳ್ತೂರು ಎಂಬ ಪ್ರಸಾದನ ತರಬೇತಿದಾರರ ತರಬೇತಿಯಲ್ಲಿ… ನಟರಾಗಿ, ತಂತ್ರಜ್ಞರಾಗಿ ರಂಗ ಸೇವೆ ಮಾಡಿದ್ದಾರೆ.ನಟರಾಗಿ, ತಂತ್ರಜ್ಞ ನಾಗಿ, ವ್ಯವಸ್ಥಾಪರಾಗಿ ನಿರಂತರ ರಂಗಭೂಮಿಯ ಸೇವೆ ಸಲ್ಲಿಸುತ್ತಾ ಬಂದಿರುತ್ತಾರೆ
ಗಿರೀಶ ಆಗಿದ್ದ ಇವರಿಗೆ ರಂಗಗೆಳೆಯರು ನೀಡಿದ ಪ್ರೀತಿಯ ಹೆಸರು “*ರಾಗಿ*”… ರಾಧಾಕೃಷ್ಣ ಪಲ್ಲಕ್ಕಿ* ಅವರ ನಿರ್ದೇಶನದಲ್ಲಿ *ಬರಗೂರು* ಮದಕರಿ ಪುರ* ಇತ್ತೀಚಿನ *ಚಾಮಯ್ಯ s/o. ರಾಮಾಚಾರಿ* ಎಂಬ 3 ಚಲನಚಿತ್ರ,
ಅಮರ್ ದೇವ್ ನಿರ್ದೇಶನದಲ್ಲಿ *ಅಲೆಮಾರಿ ಆತ್ಮಕಥೆ* *ಕೊನೆಯ ನಮಸ್ಕಾರ* ಎಂಬ 2 ಕಲಾತ್ಮಕ ಚಿತ್ರಗಳು,ಯುವ ನಿರ್ದೇಶರಾದ *ಮಹೇಶ್* ರವರ ನಿರ್ದೇಶನದಲ್ಲಿ *ಮುನಿಯನ ಮಾಧರಿ* ಒಟ್ಟು 6 ಚಲನಚಿತ್ರದಲ್ಲಿ ಅಭಿನಯಿಸಿದ್ದಾರೆ.ಡಾ.ಜಿ ಎನ್ ಮಲ್ಲಿಕಾರ್ಜುನಪ್ಪ* ನವರು ತಾವು ರಚಿಸಿದ, ನಾನು *ಮುಖ್ಯ ಪಾತ್ರಧಾರಿಯಾಗಿ ( ಬಸವಣ್ಣನಾಗಿ)* ಅಭಿನಯಿಸಿದ *ಮಹಾಕ್ರಾಂತಿ* ನಾಟಕವನ್ನು, ಚಲನಚಿತ್ರ ನಿರ್ದೇಶಕರಾದ *ರಾಧಾಕೃಷ್ಣ ಪಲ್ಲಕ್ಕಿ* ಯವರ ಪರಿಕಲ್ಪನೆಯಲ್ಲಿ *ಆಡಿಯೋ* ಮುಖಾಂತರ ಹೊರ ತಂದಿದ್ದಾರೆ.
ಇತ್ತೀಚೆಗೆ ಕಥೆ ಕವನ ರಚಿಸುವ ಹವ್ಯಾಸ ಹೊಂದಿದ್ದು, ನಾನು ರಚಿಸಿದ ಕವಿತೆಗಳನ್ನು “ಬೆಂಗೇರಿ ಕ್ರಿಯೇಷನ್ಸ್” ಅವರು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಹಾಗೂ “ಪ್ರಗತಿ ಸಾಹಿತ್ಯ ವೇದಿಕೆ ಮತ್ತು ಏ ವಿ ಕನ್ನಡ ನ್ಯೂಸ್ ಚಾನೆಲ್” ಹಾಗೂ ತನುಶ್ರೀ ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆ-ಚಿತ್ರದುರ್ಗ, ಗಾನಯೋಗಿ ಸಾಹಿತ್ಯ ಪರಿಷತ್-ಗದಗ,ಬೆಂಗಳೂರು, ಜ್ಞಾನದೀಪಂ ದಿನಂಪ್ರತಿ ಬಳಗ-ಬಾಗಲಕೋಟೆ, ಮನಸುಗಳ ಬಾಂಧವ್ಯ ಬೆಸುಗೆ ಬಳಗ ಸ್ಪರ್ಧಾ ವೇದಿಕೆ, ಕರುನಾಡ ಹಣತೆ ಕವಿ ಬಳಗ ಇವರ ವತಿಯಿಂದ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು.
ಚಿತ್ರದುರ್ಗ, ಈ ವೇದಿಕೆ ಗಳು ನನ್ನ ಕವಿತೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಿವೆ. ತಾಯಿಯ ಹೆಸರಲ್ಲಿ ನಾಗರತ್ನಮ್ಮ ಸಾಂಸ್ಕೃತಿಕ ವೇದಿಕೆ ಸ್ಥಾಪಿಸಿ ಆ ಮೂಲಕ ಸಾಂಸ್ಕೃತಿಕ ಕಾರ್ಯ ಮಾಡುತ್ತಿದ್ದಾರೆ ರಾಗಿ (ಇವನೆಂಥ ಕ್ರೂರಿ) ಎಂಬ ಉತ್ತಮ ಕಥೆ ಸಿದ್ಧಪಡಿಸಿ ಚಲನಚಿತ್ರವಾಗಿ ಹೊರತರಲು ತಾಯಾರಿ ನೆಡೆಸಿದ್ದಾರೆ.ಹೀಗೆ “*ರಾಗಿ*” ಕೇವಲ ಹೆಸರಾಗದೆ, ರಂಗಭಾವವಾಗಿ, ನಿರಂತರವಾಗಿ ಸಾಗುತ್ತಾ ಬಂದಿದೆ…