Breaking
Tue. Dec 24th, 2024

ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಕಿರುಕುಳಕ್ಕೆ ಬೇಸತ್ತು 8ನೇ ತರಗತಿ ಪ್ರೌಢಶಾಲೆಯ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು..!

ಬಾಗಲಕೋಟೆ : 16, ಕದಾಂಪುರ ಗ್ರಾಮದ ಸರ್ಕಾರಿ ಶಾಲೆಯ ಕನ್ನಡ ಶಿಕ್ಷಕಿ ಶ್ರೀಮತಿ ಜಯಶ್ರೀ ಮಿಶ್ರಿ ಕೋಟಿ ಹಾಗೂ ಮುಖ್ಯ ಗುರುಗಳಾದ ಶ್ರೀ ಹೆಚ್ ಮುಜಾವರ್ ಹಾಗೂ ಅದೇ ಶಾಲೆಯ ಇತರ ಶಾಲಾ ಶಿಕ್ಷಕರು ಹಾಗೂ ಮಾನಸಿಕ ಕಿರುಕುಳಕ್ಕೆ ಬೇಸತ್ತು ಈ ದಿನ ಮನೆಯಲ್ಲಿ ಓದುತ್ತಿದ್ದ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಕನ್ನಡ ಶಿಕ್ಷಕಿಯಾದ ಶ್ರೀಮತಿ ಜಯಶ್ರೀ ಮಿಸ್ರಿ ಕೋಟಿ ರವರು ದಿನಾಂಕ : 14.03.2024 ರಂದು ಶಾಲೆಯಲ್ಲಿ ತನ್ನ 2000/- ಹಣ ಯಾರಿಗೆ ಕೊಡಬೇಕು ಎಂದು ಹಲವಾರು ಬಾರಿ ಗದರಿಸುತ್ತಾರೆ.

ಶ್ರೀಮತಿ ರಾಜೇಶ್ವರಿ ಪೂಜಾರ್ ವಿಜ್ಞಾನ ಶಿಕ್ಷಕಿ, ಶ್ರೀಮತಿ ಅಕ್ಕ ನಾಗಮ್ಮ ಸಿಎಂ ಹಿಂದಿ ಶಿಕ್ಷಕಿ, ಕುಮಾರಿ ಅಂಜಲಿ ಗೌಡರ್ ಇಂಗ್ಲಿಷ್ ಗೆಸ್ಟ್ ಟೀಚರ್ ಶ್ರೀಮತಿ ಜಯಶ್ರೀ ಮೇಸ್ತ್ರಿ ಕೋಟಿ ಕನ್ನಡ ಶಿಕ್ಷಕರಿಗೆ ದಿನಾಂಕ : 15-03-2024 ರಂದು ಸದರಿ ಶಾಲೆಯ ಕೊಠಡಿಯಲ್ಲಿ ಶಾಲಾ ಸಮವಸ್ತ್ರದ ಬಟ್ಟೆ ಬಿಚ್ಚಿಸಿ ಅಮಾನವೀಯವಾಗಿ ತಪಾಸಣೆ ನಡೆಸಲಾಯಿತು.

ಕುಮಾರಿ ಕವಿತಾ ಕೋಟಿ 10ನೇ ತರಗತಿ, ಕುಮಾರಿ ಅನುಸೂಯ ಏಳಮ್ಮಿ 10ನೇ ತರಗತಿ, ಕುಮಾರಿ ಭಾಗ್ಯ ತೋಳಮಟ್ಟಿ 10ನೇ ತರಗತಿಯಲ್ಲಿ ನಾಲ್ವರು ಶಿಕ್ಷಕರಿಗೆ ಬಟ್ಟೆ ಬಿಚ್ಚಿಸಿ ತಪಾಸಣೆ ನಡೆಸಲಿದ್ದಾರೆ ಇದೇ ಸಂದರ್ಭದಲ್ಲಿ ಕುಮಾರಿ ದಿವ್ಯಾ ಬಾರಕೇರ 8ನೇ ತರಗತಿ ವಿದ್ಯಾರ್ಥಿನಿಯರಿಗೆ ಸಹ ಬಟ್ಟೆ ಬಿಚ್ಚಿಸಿ ತಪಾಸಣೆ ನಡೆಸಲಿದ್ದಾರೆ. ಈ ಘಟನೆಯನ್ನು ಸಹೋದರಿಯಾದ ಕುಮಾರಿ ದೀಪಾ ಬಾರಕೇರ 9ನೇ ತರಗತಿ ವಿದ್ಯಾರ್ಥಿನಿ ಇವರು ಪ್ರತ್ಯಕ್ಷ ದರ್ಶಿಯಾಗಿರುತ್ತಾರೆ.

ಶ್ರೀ ಕೆ ಎಚ್ ಮುಜಾವರ ಮುಖ್ಯ ಶಿಕ್ಷಕರು ಮತ್ತು ಶ್ರೀಮತಿ ಜಯಶ್ರೀ ಮಿಸ್ರಿ ಕೋಟಿ ರವರು ದೇವತೆಯಾದ ಶ್ರೀ ದುರ್ಗಾದೇವಿ ಅಮ್ಮನ ಅಂಗಾರ ಮುಟ್ಟಿಸಿ ಹಣವನ್ನು ನೋಡಲಿಲ್ಲ ಮತ್ತು ಹಣವನ್ನು ತೆಗೆದುಕೊಂಡು ಹೋದರು ಎಂದು ದೇವರ ಮೇಲೆ ಪ್ರಮಾಣ ಮಾಡಿದರು.

ಹಾಗಿದ್ದಾಗ್ಯೂ ಸಹ ವಿದ್ಯಾರ್ಥಿನಿಯರು ಈ ಹಣವನ್ನು ನೋಡದೆ ಶಿಕ್ಷರು ಹೊರಿಸಿದ ಸುಳ್ಳು ಆರೋಪವನ್ನು ನಿರಾಕರಿಸುತ್ತಾರೆ. ಹೀಗಿದ್ದಾಗಿಯೂ ಕುಮಾರಿ ದಿವ್ಯ ಶಿವಪ್ಪ ಬಾರಕೇರ 8ನೇ ತರಗತಿಯ ವಿದ್ಯಾರ್ಥಿನಿಯರಿಗೆ ಮುಖ್ಯ ಶಿಕ್ಷಕರು ಹಾಗೂ ಇತರ ಶಿಕ್ಷಕರಿಗೆ ತರಬೇತಿ ನೀಡಿ ದೈಹಿಕವಾಗಿ ಮಾನಸಿಕವಾಗಿ ಹೆದರಿಸುವ ಶಿಕ್ಷಕರ ನಿರಂತರ ಕಿರುಕುಳಕ್ಕೆ ಶಿಕ್ಷಕರ ಕಿರುಕುಳವನ್ನು ತಾಳಲಾಯಿತು ದಿನಾಂಕ : 16-03-2024 ರಂದು ಮಧ್ಯಾಹ್ನ 1.30 ಗಂಟೆಗೆ ಸುಮಾರಿಗೆ ಯಾರು ಇಲ್ಲದ ಸಮಯದಲ್ಲಿ ನಮ್ಮ ಮನೆಯಲ್ಲಿ ದಿನ ನಮ್ಮ ಮನೆಯಲ್ಲಿ ಯಾರು ಇರಲಿಲ್ಲ. ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಸರ್ಕಾರಿ ಆಸ್ಪತ್ರೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರು ಮತ್ತು ಶಿಕ್ಷಣ ಇಲಾಖೆ ಹೊನಗೇಡಿತನದಿಂದಾಗಿ ವಿದ್ಯಾರ್ಥಿನಿಯ ಸಾವಿಗೆ ಸರ್ಕಾರ ಕಾರಣವಾಗುವಂತೆ ಸರ್ಕಾರವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಸರ್ಕಾರಿ ಪ್ರಾಥಮಿಕ ಮತ್ತು ಶಾಲಾ ಶಿಕ್ಷಕರ ನಡವಳಿಕೆಯ ಮೇಲೆ ಹೆಚ್ಚಿನ ನೀಗಾವಹಿಸಲು ಮತ್ತು ನಮ್ಮ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಒದಗಿಸಲು ಈ ಮೂಲಕ ಕೋರುತ್ತೇವೆ.

ಹಿರಿಯರು ಎನಿಸಿಕೊಂಡಿರುವ ಮಹಾನುಭಾವರು ಒಬ್ಬ ಕುಟುಂಬದ ನೆರವಿಗೆ ನಿಲ್ಲದೆ ಇರುವ ಕುಟುಂಬದ ನೋವನ್ನು ಲೆಕ್ಕಿಸದೆ ತರಾತುರಿಯಲ್ಲಿ ಮೃತ ದೇಹವನ್ನು ಸುಡುವಂತೆ ಮಾನವೀಯವಾಗಿ ವರ್ತಿಸಿದ್ದು ಅತ್ಯಂತ ದುರಾದೃಷ್ಟಕರ ಘಟನೆ ಅಮಾನವೀಯ.

ಬಾಗಲಕೋಟೆ ಕೋಳಿ, ಕಬ್ಬಲಿಗ, ಬೆಸ್ತ, ಅಂಬಿಗ, ಮೊಗವೀರ ನಾಡಿನ ಸಮಸ್ತ ಗಂಗಾಮತಸ್ಥ ಸಮಾಜ ಬಂಧುಗಳು ಮತ್ತು ಶ್ರೀಮತಿ ದೀಪಾ ಸಂಜೀವ ಕೋಲಕಾರ, ಸದಸ್ಯರು, ರಾಷ್ಟ್ರೀಯ ಮಾನವ ಹಕ್ಕುಗಳ ಸಂಘ, ನವ ದೆಹಲಿ. ಅವರ ನೆರವಿಗೆ ನಿಂತು ನ್ಯಾಯವನ್ನು ಒದಗಿಸಬೇಕಾಗಿದೆ.

ಘಟನಾ  ಸ್ಥಳಕ್ಕೆ ಭೇಟಿ ನೀಡಿದ ಬಾಗಲಕೋಟೆ ಗ್ರಾಮಾಂತರ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲೆಂದು ಮತ್ತು ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ನೊಂದ ಕುಟುಂಬಕ್ಕೆ ಈ ನೋವನ್ನು ಬರಿಸುವ ಶಕ್ತಿ ನೀಡಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.

Related Post

Leave a Reply

Your email address will not be published. Required fields are marked *