ಬೆಂಗಳೂರು: ರಾಜಧಾನಿಯಲ್ಲಿ ಉಜ್ಬೇಕಿಸ್ತಾನದ ಮಹಿಳೆ ಅನುಮಾನಾಸ್ಪದ ಸಾವು ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಇದು ಕೊಲೆ ಎಂಬುದು ತನಿಖೆಯಿಂದ ಪೊಲೀಸರಿಗೆ ತಿಳಿದುಬಂದಿದ್ದು, 24 ಗಂಟೆಯಲ್ಲಿ ಕೊಲೆ ಆರೋಪಿಗಳನ್ನು ಬಂಧಿಸಿದ್ದಾರೆ.
ಅಸ್ಸಾಂನ ಅಮೃತ್ ಹಾಗೂ ರಾಬರ್ಟ್ ಬಂಧಿತರು. ಇವರು ಕೆಲಸ ಅರಸಿಕೊಂಡು ಬೆಂಗಳೂರಿಗೆ ಬಂದಿದ್ದರು. ಬಿಡಿಎ ಸಮೀಪದ ಹೋಟೆಲ್‌ನ ಸ್ವಚ್ಛತಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ವಿದೇಶಿ ಮಹಿಳೆ ಜರೀನಾ ಬಳಿ ತುಂಬಾ ಹಣವಿದೆ ಎಂದು ಹಣದಾಸೆಗೆ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶೇಷಾದ್ರಿಪುರಂನ ಜಗದೀಶ್ ಹೋಟೆಲ್‌ನಲ್ಲಿ ಉಜ್ಬೇಕಿಸ್ತಾನದ ಮಹಿಳೆ ಸಾವನ್ನಪ್ಪಿದ್ದರು. ವಿಚಾರ ತಿಳಿದು ಸ್ಥಳಕ್ಕೆ ಹೋದ ಪೊಲೀಸರು ರಾಯಭಾರ ಕಚೇರಿಯಿಂದ ಅನುಮತಿ ಪಡೆದು ಮರಣೋತ್ತರ ಪರೀಕ್ಷೆ ಮಾಡಿಸಿದ್ದಾರೆ. ಇದು ಅನುಮಾನಾಸ್ಪದ ಸಾವಲ್ಲ, ಕೊಲೆ ಅನ್ನೋದು ಬೆಳಕಿಗೆ ಬಂದಿದೆ. ಈ ಮಹಿಳೆ ಕಳೆದ ಕೆಲ ವರ್ಷಗಳಿಂದ ಭಾರತ ಪ್ರವಾಸ ಮಾಡ್ತಿದ್ದು, 50 ಕ್ಕೂ ಹೆಚ್ಚು ಬಾರಿ ಭಾರತಕ್ಕೆ ಬಂದಿದ್ದರು. ಆದರೆ ಬೆಂಗಳೂರಿನಲ್ಲಿ ಕೊಲೆಯಾಗಿದ್ದಾರೆ.
ಮಹಿಳೆ ಹೋಟೆಲ್‌ಗೆ ಬಂದಾಗ ರಷ್ಯನ್ ಕಾಲ್‌ಗರ್ಲ್ ಅಂತಾ ಕಸ್ಟಮರ್ ಒಬ್ಬ ಬಂದಿದ್ದಾನೆ. ಈಕೆ ರಷ್ಯನ್ ಅಲ್ಲ ಅಂತಾ ಗೊತ್ತಾದಾಗ 7,000 ಹಣ ಕೊಟ್ಟು ಹೊರಟು ಹೋಗಿದ್ದಾನೆ. ಅಸ್ಸಾಂ ಮೂಲದ ಇಬ್ಬರು ಹೋಟೆಲ್‌ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡ್ತಿದ್ದರು. ಯಾವಾಗ ಈಕೆ ಕಾಲ್‌ಗರ್ಲ್ ಎಂದುಕೊಂಡು ಈಕೆಯನ್ನ ಬಲೆಗೆ ಬೀಳಿಸಲು ಯತ್ನಿಸಿದ್ದಾರೆ. ಅನುಚಿತವಾಗಿ ಮಾಡಿದ ಯುವಕರಿಗೆ ವಿದೇಶಿ ಮಹಿಳೆ ಕಪಾಳಮೋಕ್ಷ ಮಾಡಿದ್ದಾಳೆ. ಇದರಿಂದ ಕೋಪಗೊಂಡು ಮಹಿಳೆಯನ್ನ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.
ಕೊಲೆ ಬಳಿಕ ಮಹಿಳೆ ಬಳಿಯಿದ್ದ ವಿದೇಶಿ ಹಣ, ರೂಪಾಯಿ, ಮೊಬೈಲ್ ತೆಗೆದುಕೊಂಡು ಕೇರಳ ರಾಜ್ಯದಲ್ಲಿ ತಲೆ ಮರಿಸಿಕೊಂಡಿದ್ದರು. ಆರೋಪಿಗಳಿಂದ 13 ಸಾವಿರ ರೂ. ನಗದು, 2,000 ಮುಖಬೆಲೆಯ ಉಜ್ಬೇಕಿಸ್ತಾನದ ಎರಡು ನೋಟುಗಳು 5,000 ಮುಖಬೆಲೆಯ ಒಂದು ನೋಟನ್ನು ಸೀಜ್ ಮಾಡಲಾಗಿದೆ. ರೂಮ್ ಸರ್ವಿಸ್‌ಗೆ ಹೋಗಿದ್ದಾಗ ಮಹಿಳೆಯನ್ನ ದಿಂಬಿನಿAದ ಉಸಿರುಗಟ್ಟಿಸಿ ಹತ್ಯೆ ಮಾಡಿ ಇದೀಗ ಜೈಲು ಸೇರಿದ್ದಾರೆ.