ಲೋಕಸಭಾ ಚುನಾವಣೆಗೆ ಶಿವಮೊಗ್ಗದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕೆ,ಎಸ್. ಈಶ್ವರಪ್ಪ ಮುಂದಾಗಿದ್ದು ಈ ನಿರ್ಧಾರಕ್ಕೆ ಮಠಾಧೀಶರು, ಸ್ವಾಮೀಜಿಗಳು ಬೆಂಬಲ ಸೂಚಿಸಿದ್ದಾರೆ. ಆನಂದ್ ಗುರೂಜಿ ಅವರು ಈಶ್ವರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಚುನಾವಣೆಯಲ್ಲಿ ಈಶ್ವರಪ್ಪ ಗೆಲ್ಲಬೇಕು.
ಕೇಸರಿ ಪಡೆಯ ಕಟ್ಟಾಳು ಕೆ.ಎಸ್.ಈಶ್ವರಪ್ಪ ಅವರಿಗೆ ಬಿಜೆಪಿಯೇ ಉಸಿರಾಗಿತ್ತು. ಆದ್ರೀಗ ಆ ಪಕ್ಷದ ವಿರುದ್ಧವೇ ಬೆಂಕಿ ಉಗುಳಿದ್ದಾರೆ. ಹಾವೇರಿ ಲೋಕಸಭಾ ಕ್ಷೇತ್ರದಿಂದ ಪುತ್ರ ಕಾಂತೇಶ್ಗೆ ಟಿಕೆಟ್ ಕೈ ತಪ್ಪಿದ್ದೇ ತಡ, ಶಿವಮೊಗ್ಗದಿಂದ ಸ್ವತಂತ್ರವಾಗಿ ಅಖಾಡಕ್ಕಿಳಿದು ಬಹಿರಂಗ ಸಮರ ಸಾರಿದ್ದಾರೆ. ಯಾವುದೇ ಮನವೊಲಿಕೆಗೆ ಬಗ್ಗಲ್ಲ, ನನ್ನ ನಿರ್ಧಾರದಿಂದ ಹಿಂದೆ ಸರಿಯಲ್ಲ ಅಂತಾ ಕಡ್ಡಿ ತುಂಡಾದಂತೆ ಹೇಳಿದ್ದಾರೆ. ಸದ್ಯ ಈಶ್ವರಪ್ಪನವರ ನಿರ್ಧಾರಕ್ಕೆ ಮಠಾಧೀಶರು, ಸ್ವಾಮೀಜಿಗಳು ಬೆಂಬಲ ಸೂಚಿಸಿದ್ದಾರೆ. ಇದೇ ವೇಳೆ ಆನಂದ್ ಗುರೂಜಿ ಅವರು ಈಶ್ವರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು.
ಶಿವಮೊಗ್ಗದಲ್ಲಿನ ಕೆ.ಎಸ್.ಶ್ವರಪ್ಪ ನಿವಾಸಕ್ಕೆ ಆನಂದ್ ಗುರೂಜಿ ಭೇಟಿ ನೀಡಿದ್ದಾರೆ. ಈ ವೇಳೆ ಈಶ್ವರಪ್ಪನವರು ಆನಂದ್ ಗುರೂಜಿ ಆಶೀರ್ವಾದ ಪಡೆದಿದ್ದು ಸ್ವಾಮೀಜಿ ಆಶೀರ್ವಾದದಿಂದ ನಾನು ಚುನಾವಣೆ ಗೆಲ್ಲುತ್ತೇನೆ ಎಂದು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಇದೇ ವೇಳೆ ಮಾತನಾಡಿದ ಆನಂದ ಗುರೂಜಿ, ಈಶ್ವರಪ್ಪ ಧರ್ಮದ ಪರವಾಗಿ ಹೋರಾಟ ಮಾಡಿದವರು. ಅಂತಹ ನಾಯಕತ್ವದ ಅಗತ್ಯತೆ ಇದೆ. ಅಂತಹವರು ರಾಜಕಾರಣದಲ್ಲಿ ಇರಬೇಕು. ಈಶ್ವರಪ್ಪ ಅವರಿಗೆ ಅನ್ಯಾಯ ಆಗಬಾರದು. ನಮ್ಮೆಲ್ಲಾ ಮಠಾಧೀಶರ ಬೆಂಬಲ ಈಶ್ವರಪ್ಪ ಅವರಿಗಿದೆ. ಈಶ್ವರಪ್ಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಎಂದು ಹೇಳಿದರು.
ನಾಳೆ ಶಿವಮೊಗ್ಗಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭೇಟಿ ನೀಡಲಿದ್ದಾರೆ. ಮೋದಿ ಭೇಟಿಗೆ ಈಶ್ವರಪ್ಪ ಅವರ ಸಂಧಾನಕ್ಕೆ ಮೂವರು ನಾಯಕರು ಆಗಮಿಸಿದ್ದರು. ಆರಗೇಂದ್ರ, ಎಂಎಲ್ಸಿಗಳಾದ ರವಿಕುಮಾರ್, ಡಿ.ಎಸ್.ಅರುಣ್ ಅವರು ಈಶ್ವರಪ್ಪ ಅವರೊಂದಿಗೆ ಸುಮಾರು 1 ಗಂಟೆಗಳ ಕಾಲ ಚರ್ಚೆ ನಡೆಸಿದರು. ಆದರೆ ಸಂಧಾನಕಾರರ ಮನವಿಗೆ ಈಶ್ವರಪ್ಪ ಪ್ರತಿಕ್ರಿಯಿಸಿಲ್ಲ. ಬಂದ ದಾರಿಗೆ ಸುಂಕ ಇಲ್ಲದಂತೆ ಮನೆಯಿಂದ ವಾಪಸ್ ಹೋದ ನಾಯಕರು.